ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಲು ಸಿದ್ಧತೆ
Sugar factories prepare to crush sugarcane
ಲೋಕದರ್ಶನ ವರದಿ
ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಲು ಸಿದ್ಧತೆ
ವಿಜಯಪುರ 20: 2025-26ನೇ ಸಾಲಿನ ಕಬ್ಬು ನುರಿಯುವ ಹಂಗಾಮು ಅ.20ರಿಂದಲೇ ಪ್ರಾರಂಭಿಸುವಂತೆ ಸಕ್ಕರೆ ಸಚಿವ ಶಿವಾನಂದ ಪಾಟೀಲ ಅನುಮತಿ ನೀಡಿದ್ದಾರೆ. ಹೀಗಾಗಿ ಇಂದಿನಿಂದ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸಲು ಸಿದ್ಧತೆ ಮಾಡಿಕೊಂಡಿವೆ.
ನ.1ರಿಂದ ಕಬ್ಬು ನುರಿಸಲು ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆಗಳಿಗೆ ಆದೇಶ ನೀಡಿದ್ದರು. ಆದರೆ ಅ.20ರಿಂದಲೇ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವಂತೆ ಸಚಿವರು ಅನುಮತಿ ನೀಡಿದ್ದಾರೆ. ಕಳೆದ ಸಾಲಿನ ಹಂಗಾಮು ಪ್ರಾರಂಭಿಸಲು ದಿನಾಂಕ ನಿಗದಿಪಡಿಸಿತ್ತು. ಆದರೆ ಸಕ್ಕರೆ ಕಾರ್ಖಾನೆಗಳು ಸರಕಾರಕ್ಕೆ ಒತ್ತಡ ಹೇರಿ 8ರಿಂದ ಪ್ರಾರಂಭಿಸಿದ್ದವು. ಈ ಸಲವೂ ಸಚಿವರು ಒತ್ತಡಕ್ಕೆ ಮಣಿದು ಬೇಗ ಪ್ರಾರಂಭಿಸಲು ಅನುಮತಿ ನೀಡಿದರಾ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ
20ರಂದು ಸಕ್ಕರೆ ಸಚಿವರು ಹಾಗೂ ರೈತರ ಮುಖಂಡರಿಗೆ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯವರು ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲು ಅನುಮತಿ ನೀಡಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ. 20ರಿಂದಲೇ ಕಾರ್ಖಾನೆ ಪ್ರಾರಂಭವಾಗುವ ವಿಷಯ ಗೊತ್ತಿತ್ತೋ ಏನೋ ಕಳೆದೆರಡು ದಿನಗಳಂದ ನೆರೆಯ ಮಹಾರಾಷ್ಟ್ರದ ಕಬ್ಬು ಕಟಾವು ಕಾರ್ಮಿಕರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಪ್ರಸಕ್ತ ಸಾಲಿನ ಕಬ್ಬು ಅರಿಯುವ ಹಂಗಾಮು ಪ್ರಾರಂಭಗೊಳಿಸಲು ಸಜ್ಜಾಗಿದ್ದು ಸೋಮವಾರದಿಂದ ಕಬ್ಬು ನುರಿಯಲು ಪ್ರಾರಂಭಿಸಲಿವೆ ಪ್ರಸಕ್ತ ಸಾಲಿನ ಕಬ್ಬು ಬೆಳೆಗಾರರಿಗೆ ಬರಗಾಲ, ಪ್ರವಾಹ ಮತ್ತು ಅತಿವೃಷ್ಟಿಯಿಂದಾಗಿ ಹಾನಿ ಅನುಭವಿಸಿದ ನೋವು ಒಂದು ಕಡೆಯಾದರೆ ಕಬ್ಬು ಕಟಾವು ಮಾಡುವವರ ನೋವು ಇನ್ನೊಂದೆಡೆಯಾಗಿದೆ. ಜೀವನದ ಹೊಟ್ಟೆ ಹೊರೆಯಲು ಕಬ್ಬು ಕಟಾವುಗಾರರು ಜಿಲ್ಲೆಯಿಂದ ಜಿಲ್ಲೆಗೆ ಮತ್ತುರಾಜ್ಯದ ಗಡಿಭಾಗದಿಂದ ತಮ್ಮ ಸರಕು ಸರಂಜಾಮಿನೊಂದಿಗೆ ವಲಸೆ ಬರುವ ಕಾರ್ಯ ಪ್ರಾರಂಭಗೊಂಡಿದೆ.
ಮಹಾರಾಷ್ಟ್ರದ ಬೀಡ, ಉಸ್ಮಾನಾಬಾದ, ಜತ್, ಪಂಡರಪುರ, ವಿಜಾಪೂರ ಮರಾಠವಾಡ ಗುಲಬರ್ಗ ಜಿಲ್ಲೆಗಳಿಂದ ಕಬ್ಬು ಕಟಾವು ಕೆಲಸ ಅವಲಂಬಿಸಿ ಸಂಸಾರ ಸಮೇತ ಕಬ್ಬು ಕಟಾವು ಕಾರ್ಮಿಕರು ಬರಲು ಆರಂಭಿಸಿದ್ದಾರೆ. ಕಳೆದ ಮಾರ್ಚನಿಂದ ಈ ಹೊತ್ತಿನವರೆಗೆ ಬಿಕೋ ಎನ್ನುತ್ತಿದ್ದ ರಸ್ತೆಗಳು ಕಬ್ಬು ತುಂಬಿದ ಚಕ್ಕಡಿ ಗಾಡಿಗಳು ಗಾಡಿಗಳು ಮತ್ತು ಲಾರಿ-ಟ್ರ್ಯಾಕ್ಟರಗಳು ನಾಳೆಯಿಂದ ರಸ್ತೆಗಿಳಿಯಲಿವೆ.
ಒಂದು ಗುಂಪಿನಲ್ಲಿ 15 ರಿಂದ 20 ಜನ ಕೂಲಿಗಳಿರುವ ಅವರ ಬದುಕೇ ವಿಲಕ್ಷಣ. ಕಬ್ಬು ಕಟಾವಿಗೆ ಹೋಗುವ ಪ್ರದೇಶದಲ್ಲಿಯೇ ಮೂರು ಕಲ್ಲಿನ ಒಲೆ, ವಾಸ್ತವ್ಯಕ್ಕೆ ರವದಿಯ ಮನೆ, ಜೊತೆಗೆ ಅಲ್ಯುಮಿನಿಯಂ ಬಕೆಟ್, ಧಾನ್ಯ, ಮಸಾಲೆ, ಅಡುಗೆ ಪದಾರ್ಥ ಸೇರಿದಂತೆ ಕೆಲ ಪಾತ್ರೆಗಳೊಂದಿಗೆ ಅವರ ಚಿಕ್ಕ ಸಂಸಾರ ಸಾಗುತ್ತದೆ. ದಿನವಿಡಿ ಕುಟುಂಬದ ಸದಸ್ಯರೆಲ್ಲಾ ಕಬ್ಬು ಕಟಾವು ಮಾಡುತ್ತಾರೆ. ರಾತ್ರಿ ಬರುವ ಲಾರಿಗಳಿಗೆ ಕಬ್ಬು ತುಂಬಿ ಕಾರ್ಖಾನೆಗೆ ಸಾಗಿಸಲು ಚಳಿ ಲೆಕ್ಕಿಸದೇ ದುಡಿಯುತ್ತಾರೆ
ಸಂಸಾರ ಸಮೇತ ದಿನಕ್ಕೊಂದು ಸ್ಥಳ, ದಿನಕ್ಕೊಂದು ಕಬ್ಬಿನ ಗದ್ದೆ ತಿರುಗಿ ಶ್ರಮಿಸುವ ಕಬ್ಬು ಕಟಾವು ಕೂಲಿಕಾರರಿಗೆ ಸರಕಾರ ಅನೇಕ ಯೋಜನೆ ಹಮ್ಮಿಕೊಂಡರೂ ಪ್ರಯೋಜನಕ್ಕೆ ಬಾರದಾಗಿದೆ. ಒಟ್ಟಿನಲ್ಲಿ ಇಂದಲ್ಲ ನಾಳೆ ತಮಗೂ ಒಳ್ಳೆಯ ದಿನಗಳು ಬರಬಹುದು ಎಂಬ ಕನಸು ಹೊತ್ತು ಶ್ರಮಿಸುವ ಕೂಲಿಕಾರರು ಕಾರ್ಖಾನೆಯ ಚಕ್ರ ನಿಲ್ಲುತ್ತಿದ್ದಂತೆ ಸಂಸಾರ ಸಮೇತ ತಮ್ಮೂರಿನತ್ತ ಸಾಗುತ್ತಾರೆ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 