ಕೀವ್, ಫೆ 12: ಪ್ಲೂ ಜ್ವರ ಮತ್ತು ತೀವ್ರ ಉಸಿರಾಟದ ವೈರಲ್ ಸೋಂಕು ಹಠಾತ್ತನೆ 26 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಉಕ್ರೇನಿಯನ್ ಸಾರ್ವಜನಿಕ ಆರೋಗ್ಯ ಕೇಂದ್ರ ವರದಿ ಮಾಡಿದೆ.
ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ, ಆರೋಗ್ಯ ಕೇಂದ್ರ 260,871 ಜನರಿಗೆ, ಅದರಲ್ಲಿ 68 ಪ್ರತಿಶತದಷ್ಟು ಜನರು 17 ವರ್ಷದೊಳಗಿನ ಮಕ್ಕಳು, ಫ್ಲೂ ಜ್ವರದಿಂದ ಬಳಲುತ್ತಿದ್ದಾರೆ ಎಂದು ಹೇಳಿದೆ.
ಸಾಂಕ್ರಾಮಿಕ ರೋಗದ ಖುತುವಿನ ಆರಂಭದಿಂದಲೂ 95,ಸಾವಿರಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ . ಇವರ ಪೈಕಿ ಶೇಕಡಾ 76.8 ರಷ್ಟು ಮಕ್ಕಳಿದ್ದಾರೆ ಎಂದೂ ಹೇಳಿದೆ.