ಸೋಮಯ್ಯ ಸಕ್ಕರೆ ಕಾರ್ಖಾನೆಗೆ ಸಚಿವರಾದ ಶಿವಾನಂದ ಪಾಟೀಲ, ತಿಮ್ಮಾಪೂರ ಭೇಟಿ

ಸೋಮಯ್ಯ ಸಕ್ಕರೆ ಕಾರ್ಖಾನೆಗೆ ಸಚಿವರಾದ ಶಿವಾನಂದ ಪಾಟೀಲ, ತಿಮ್ಮಾಪೂರ ಭೇಟಿ Such unpleasant incidents will not help the farmers' struggle: Shivanand Patil

ಇಂಥ ಅಹಿತಕರ ಘಟನೆಗಳಿಂದ ರೈತ ಹೋರಾಟಕ್ಕೆ ಜಯವಾಗುವುದಿಲ್ಲ: ಶಿವಾನಂದ ಪಾಟೀಲ 

ಮಹಾಲಿಂಗಪುರ 14: ಗುರುವಾರ ಸಂಜೆ ಸೋಮಯ್ಯ ಸಕ್ಕರೆ ಕಾರ್ಖಾನೆಗೆ ಆಗಮಿಸುತ್ತಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಘಟನಾ ಸ್ಥಳಕ್ಕೆ ಸಚಿವರಾದ ಶಿವಾನಂದ ಪಾಟೀಲ ಮತ್ತು ಉಸ್ತುವಾರಿ, ಅಬಕಾರಿ ಸಚಿವ ಆರ್‌.ಬಿ ತಿಮ್ಮಾಪೂರ ಭೇಟಿ ನೀಡಿ ರೈತರಿಗೆ ಸಾಂತ್ವನ ಹೇಳಿದರು.  

ರೈತರು ಭೇಟಿ ನೀಡಿದ ಸಚಿವರಿಗೆ ತಮ್ಮ ಅಳಲು ತೋಡಿಕೊಳ್ಳುತ್ತಾ ನೋಡಿ ಸರ್ ನಿನ್ನೆ ಒಮ್ಮೇಲೆ ಬಂದು ರೈತರ ತಂಡ ನಮ್ಮ ಗಾಡಿಗಳಿಗೆ ಚುಪಾದ ಕಬ್ಬಿನದ ತುಂಡಿನಿಂದ ಚುಚ್ಚಿ ಟೈರ ಒಡೆದಿದ್ದಾರೆ. ಕಬ್ಬಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ ನಮ್ಮ ಕೆಲವು ಟ್ರ್ಯಾಕ್ಟರಗಳಿಗೂ, ಬೈಕಗಳಿಗೂ ಬೆಂಕಿ ಹಚ್ಚಿದ್ದಾರೆ. ಮೊದಲೇ ಕಷ್ಟದಲ್ಲಿರುವ ನಾವು ಈ ರೀತಿ ಮಾಡಿದರೆ ಪಾಡೇನು? ವರ್ಷವೆಲ್ಲ ಕಷ್ಟ ಪಟ್ಟು ಸಾಲ ಸೂಲ ಮಾಡಿ ಬೆಗೆದ ಬೆಳೆಯನ್ನು ಕಣ್ಣುಮುಂದೆ ಸುಟ್ಟು ಹಾಕಿದ್ದಾರೆ. ಈ ನಷ್ಟ ಹೇಗೆ ಬರಿಸುವುದು ನೀವೆ ಹೇಳಿ ಆದ್ದರಿಂದ ಸರ್ಕಾರಿಂದ ನಮಗೆ ಆದ ಹಾನಿಯನ್ನು ತುಂಬಿಸಿಕೊಡುವಂತೆ ಮನವಿ ಮಾಡಿದರು. ಅಷ್ಟೆ ಅಲ್ಲದೆ ಸಚಿವರನ್ನು ಸುಟ್ಟ ಟ್ರ್ಯಾಕ್ಟರ ಮತ್ತು ಕಬ್ಬಿನಗಾಡಿ ಹತ್ತಿರ ಕರೆದುಕೊಂಡು ಹೋಗಿ ತಮ್ಮ ತಮ್ಮ ಅಳಲು ತೊಡಿಕೊಂಡರು.  

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ ನಿನ್ನೆ ದಿನ ಸಮೀರವಾಡಿಯಲ್ಲಿ ಒಂದು ಅಹಿತಕರ ಘಟನೆ ನಡೆದುಹೊಗಿದೆ, ಅದಕ್ಕೆ ವಿಷಾದ ವ್ಯೆಕ್ತ ಪಡಿಸುತ್ತಾ.ಇಂಥ ಘಟನೆಗಳಿಂದ ರೈತ ಹೋರಾಟಕ್ಕೆ ಎಂದಿಗೂ ಜಯ ಸಿಗುವುದಿಲ್ಲ. ಇದರಿಂದ ಕಬ್ಬಿನ ಮಾಲೀಕರಿಗೆ ತುಂಬಾ ತೊಂದರೆಯಾಗುತ್ತದೆ. 14 ಕಾರ್ಖಾನೆಗಳಲ್ಲಿ 10 ಕಾರ್ಖಾನೆಗಳು ಕಬ್ಬು ನುರಿಸುವ ಕೆಲಸ ಪ್ರಾರಂಬಿಸಿವೆ, ಇನ್ನೂ 4 ಕಾರ್ಖಾನೆಗಳ ಪ್ರಾರಂಬಿಸಬೇಕಿತ್ತು ಅದರಲ್ಲಿ ಸೋಮಯ್ಯ ಒಂದು. ಇದೆ 12 ರಂದು ಮ್ಯಾನೇಜಮೆಂಟ್ ಹಾಗೂ ರೈತರು ಮತ್ತು ಸಚಿವರ ನಡುವಿನ ಒಪ್ಪಂದ ಮೇರಿಗೆ ಕಬ್ಬು ನುರಿಸಲು ಪ್ರಾರಂಬಿಸಲಾಗಿತ್ತು. ಈ ಘಟನೆಯಿಂದ ಅನೇಕ ರೈತರ ಕಬ್ಬಿಗೆ, ಟ್ರ್ಯಾಕ್ಟರಿಗೆ ಹಾನಿ ಮಾಡಿದ್ದು ರೈತರ ಕೆಲಸವಲ್ಲ ಇದೊಂದು ಕಿಡಿಗೇಡಿಗಳು ಮಾಡಿದ ಕೃತ್ಯ.  

ಇದರಿಂದಾ ಹಾನಿಯಾದ ರೈತರಿಗೆ ಕೂಡಾ ಏನಾದರೂ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇವೆ.ಕಬ್ಬು ನುರಿಯುವ ಪ್ರಕ್ರೀಯೆ ಚಾಲು ಇರಲಿ, ಇವತ್ತು 7 ಕೋಟಿ 34 ಲಕ್ಷ ಮ್ಯಾಟ್ರಿಕ ಟನ್ ನುರಿಸಬೇಕಾಗಿದೆ,ಇದು ಆಗಲೆ ತಡವಾಗಿದೆ, ಇದರಿಂದ ರೈತರು ಮುಂದಿನ ಹಂಗಾಮಿಗೆ ತಯಾರಾಗಲು ತಡವಾಯಿತು. ಆದ್ದರಿಂದ ಎಲ್ಲ ರೈತರು ಸ್ವಯಂ ಪ್ರೇರಣೆಯಿಂದ ಒಪ್ಪಂದ ಮಾಡಿಕೊಂಡು ಕಬ್ಬು ನುರಿಸಲು ಅವಕಾಶ ಮಾಡಿಕೊಡಬೇಕೆಂದು ಎಲ್ಲ ರೈತರಲ್ಲಿ ನಾನು ತಿಮ್ಮಾಪೂರ ವಿನಂತಿ ಮಾಡಿಕೊಳ್ಳುತ್ತೇವೆ, ರೈತರು ಯಾವುದೇ ಆತಂತ ಇದ್ದರೆ ಜಿಲ್ಲಾಧಿಕಾರಿಗಳು ಮತ್ತು ಉಸ್ತುವಾರಿಗಳ ಜೋತೆ ವಿಚಾರ ವಿನಿಮಯ ಮಾಡಿಕೊಳ್ಳಿ, ನಿನ್ನೆಯ ಘಟನೆಯಿಂದ ಸೋಮಯ್ಯ ಕಾರ್ಖಾನೆಗೂ ಸಮಸ್ಯೆಯಾಗಿದೆ.ಜಿಲ್ಲೆಯ ಎಲ್ಲ ಕಾರ್ಖಾನೆಗಳಿಗೆ ಸೆಕ್ಯೂರಿಟಿ ಕೊಡಿಸುವಲ್ಲಿ ಮತ್ತು ಈ ತಪ್ಪು ಮಾಡಿದ ಕಿಡಿಗೇಡಿಗಳ ಮೇಲೆ ತನಿಕೆ ಮಾಡಿಸಿ ಸೂಕ್ತ ಕ್ರಮ ಜರುಗಿಸುತ್ತೇವೆ,ಇನ್ನೂ ಮುಂದೆ ಕಬ್ಬು ನುರಿಸುವ ಕೆಲಸ ಕಾರ್ಖಾನೆ ಪ್ರಾರಂಬಿಸಲಿ, ರೈತರಿಗೆ ಯಾವಾಗಲು ನಮ್ಮ ಸರ್ಕಾರದ ಸಹಾಯ ಇದ್ದೇ ಇರುತ್ತದೆ ಎಂದರು.  

ನಂತರ ಮಾತನಾಡಿದ ಸಚಿವ ಆರ್‌.ಬಿ ತಿಮ್ಮಾಪೂರ ರೈತರೊಂದಿಗೆ 4 ಸಭೆಗಳನ್ನು ಮಾಡಿದ್ದೇವೆ. ಒಂದು ಸಭೆಯಲ್ಲಿ ರೈತರು 3500 ಕೊಡಬೇಕು ಎಂದು ಬಿಟ್ಟುಹೋದರು. ನಂತರ ರಿಕವರಿ ಮೇಲಿಂದ ಬಿಲ್ ಮಾಡಿಸಿ ಅಂದಾಗ ನಾವು ಮಾಲೀಕರ ಜೋತೆಗೂ ಮಾತನಾಡಿ ಅವರಿಗೆ ಸೂಚನೆ ಕೊಟ್ಟೇವು, ಆ ನಂತರ ಮತ್ತೇ 3200 ಒಮ್ಮೇಲೆ ಕೊಡಬೇಕು ಎಂದರು. ಅಥಾವಾ ನಮ್ಮ ಹಿಂದಿನ ಬಾಕಿ ಕೊಡಬೇಕು, ಎಂದಾಗ ಆ ಸಮಸ್ಯೆಗೆ ಸ್ಪಂದಿಸಿ ನಿನ್ನೆ 5 ಗಂ.ಗೆ ಬಂದು ಬಿಡಿ ನಾನು ಮಾಲೀಕರೊಂದಿಗೆ ಮಾತನಾಡಿದ್ದೇನೆ ಬಂದು ಬಿಡಿ ಎಂದು ಹೇಳಿದ್ದೆ ಅಷ್ಟರಲ್ಲಿ ಈ ಘಟನೆ ನಡೆದಿದೆ. ಇದು ಬಹಳ ದು:ಖದ ಸಂಗತಿ, ನಾವು ಸರ್ಕಾರದಿಂದ 50 ಕೊಡುತ್ತಿದ್ದೇವೆ, ನೀವು ಟ್ರ್ಯಾಕ್ಟರಗೆ 50 ರೂ ಹೆಚ್ಚಿಗೆ ಕೊಡಿ ಎಂದು ಸಂದಾನ ಮಾಡುವ ಕೆಲಸ ಮಾಡಿದ್ದೇನೆ, ಆದ್ದರಿಂದ ಬೆಳಗಾವಿ ಜಿಲ್ಲೆಯಲ್ಲಿ ಕಾರ್ಖಾನೆಗಳು ಪ್ರಾರಂಭವಾಗಿವೆ. ನಮ್ಮಲ್ಲಿಯೂ ಪ್ರಾರಂಭವಾಗಿವೆ, ಬೆಂಕಿ ಹಚ್ಚುವ ಕೆಲಸ ಮಾಡಿದ ಕಿಡಿಗೇಡಿಗಳಿಗೆ ಶಿಕ್ಷೆಕೊಡಿಸುವ ಕೆಲಸ ಸರ್ಕಾರ ಮಾಡುತ್ತೆ. ಕಾರ್ಖಾನೆ ಮಾಲೀಕರಿಗೆ ಆದ ನೋವಿಗೆ ನಾನು ವಿಷಾದಿಸುತ್ತೇನೆ, ಈ ಎಲ್ಲ ಸಮಸ್ಯೆಗಳನ್ನು ಸಹ ಸರಿ ಮಾಡುವ ಕೆಲಸ ಮಾಡುತ್ತೇವೆ ಎಂದರು. 

ರೈತರು 12 ತಿಂಗಳು ಕಷ್ಟು ಪಟ್ಟು ಬೆಳೆದ ಬೆಳೆಯನ್ನು ಸುಟ್ಟು ಹಾಕಿರುವ ಕೃತ್ಯ ನನಗೆ ಬೇಸರ ತಂದಿದೆ. ಎಂಥವರೆ ಆಗಿರಲಿ ಇಂಥ ದುಷ್ಕೃತ್ಯಕ್ಕೆ ಕೈ ಹಾಕಬಾರದು. ಟ್ರ್ಯಾಕ್ಟರ ಮತ್ತು ಬೈಕ್ ಗಳನ್ನು ಸುಟ್ಟು ಹಾಕಿರುವುದು ತುಂಬಾ ನೋವಿನ ಸಂಗತಿ, ಇದನ್ನೂ ಸರ್ಕಾರ ಗಮನಿಸುತ್ತದೆ. ಇನ್ನೋಮ್ಮೆ ರೈತರೊಂದಿಗೆ ನಾನು ಸಭೆ ಮಾಡಿ ಮಾತಾಡಿ ಎಲ್ಲವನ್ನು ಸರಿಮಾಡುತ್ತೇನೆ.  

ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ   ಆರ್‌.ಬಿ ತಿಮ್ಮಾಪೂರ. 

ಸ್ಥಳೀಯ ರೈತರ ಆಕ್ರೋಶ : ನಮ್ಮ ಕಬ್ಬಿಗೆ ಮತ್ತು ಟ್ರ್ಯಾಕ್ಟರ ಟ್ರೇಲರ ಮತ್ತು ಇಂಜನಗಳಿಗೆ ಬೆಂಕಿ ಹಾಕಿದ ಕಿಡಿಗೇಡಿಗಳಿಗೆ ಸೂಕ್ತ ಕಠೀಣ ಕಾನೂನು ಕ್ರಮ ಜರುಗಿಸಬೇಕು, ಜೋತೆಗೆ ಹಾನೀಗೀಡಾದ ರೈತರಿಗೆ ಮತ್ತು ಮಾಲೀಕರಿಗೆ ಸೂಕ್ತ ಪರಿಹಾರ ಸರ್ಕಾರದಿಂದ ಒದಗಿಸಬೇಕು. ಮತ್ತು ಇಂಥ ಘಟನೆಗಳು ಮರುಕಳಿಸದಂತೆ ಪೊಲೀಸ ಇಲಾಖೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಆಕ್ರೋಶ ವ್ಯೆಕ್ತಪಡಿಸಿದರು.    

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ ಎಂ. ಎ.ಸಿ ಸ್ವೇತಾ ಬೀಡಿಕರ, ತಹಶಿಲ್ದಾರ ಗೀರಿಶ ಸ್ವಾಧಿ, ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ, ಕಾರ್ಯದರ್ಶಿ ರಂಗನಗೌಡ ಪಾಟೀಲ, ಗ್ರಾ.ಪಂ ಅಧ್ಯಕ್ಷ ಮಹಾಲಿಂಗಪ್ಪ ಸನದಿ, ಮುಖ್ಯ ಕಾರ್ಯನಿರ್ವಾಹಕ ಬಾಲು ಭಕ್ಷಿ. ಶ್ರೀಶೈಲ ಕೌಜಲಗಿ, ಯಮನಪ್ಪ ಉಪ್ಪಾರ, ಟಿ.ಪಿ ನಾಯಕ, ಮುಖಂಡರಾದ ಮಹಾಲಿಂಗಪ್ಪ ತಟ್ಟಿಮನಿ, ಮಲ್ಲಪ್ಪ ಸಿಂಗಾಡಿ, ಭೀಮಶಿ ಸಸಾಲಟ್ಟಿ ಸೇರಿದಂತೆ ಹಲವರು ಇದ್ದರು.