ಯಶಸ್ವಿ ಲ್ಯಾಪರೋಸ್ಕೊಪಿಕ ಶಸ್ತ್ರಚಿಕಿತ್ಸೆ ಛಿದ್ರಗೊಂಡ ಅಪಸ್ಥಾನೀಯ ಗರ್ಭಧಾರಣೆ ಸ್ಥಿತಿಯಿಂದ ಬಳಲುತ್ತಿದ್ದ ಮಹಿಳೆಯ ಜೀವ ರಕ್ಷಣೆ
Successful laparoscopic surgery saves life of woman suffering from ruptured ectopic pregnancy
ತೀವ್ರ ಹೊಟ್ಟೆನೋವು, ತಲೆ ಸುತ್ತು, ದೌರ್ಬಲ್ಯ ಹಾಗೂ ರಕ್ತಸ್ರಾವದಿಂದ ಬಳಲುತ್ತಿದ್ದ 30 ವರ್ಷದ ಮಹಿಳೆಗೆ ಯಶಸ್ವಿ ಲ್ಯಾಪರೋಸ್ಕೊಪಿಕ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಅವರ ಪ್ರಾಣ ಉಳಿಸುವಲ್ಲಿ ಇಲ್ಲಿನ ಯಳ್ಳೂರ ರಸ್ತೆಯಲ್ಲಿನ ಕೆಎಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ.
30 ವರ್ಷದ ಮಹಿಳೆಯೊಬ್ಬರು ತೀವ್ರ ಹೊಟ್ಟೆ ನೋವು, ತಲೆನೋವು, ಕಡಿಮೆ ರಕ್ತದೋತ್ತಡ ಮತ್ತು ವಿಪರೀತ ಸುಸ್ತಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ನಡೆಸಿದಾಗ ಅವರಿಗೆ "ಎಡಭಾಗದ ಛಿದ್ರಗೊಂಡ ಎಕ್ಟೋಪಿಕ್ ಪ್ರೆಗ್ನೆನ್ಸಿ’ (ಗರ್ಭಾಶಯದ ಹೊರಗೆ ಗರ್ಭಧಾರಣೆಯಾಗಿ ಅದು ಒಡೆದು ರಕ್ತಸ್ರಾವವಾಗುವ ಗಂಭೀರ ಸ್ಥಿತಿ) ಇರುವುದು ಪತ್ತೆಯಾಯಿತು. ಇದು ತಕ್ಷಣವೇ ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಅತ್ಯಂತ ತುರ್ತು ಹಾಗೂ ಗಂಭೀರ ಸ್ಥಿತಿಯಾಗಿತ್ತು.
ಈ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆಯಾದ ಡಾ. ಗೀತಾಂಜಲಿ ತೊಟಗಿ, ಹಿರಿಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಸತೀಶ ಧಾಮನ್‌ಕರ್ ಹಾಗೂ ಅರವಳಿಕೆ ತಜ್ಞರಾದ ಡಾ. ಮಿಲಿಂದ ಕಟ್ಟಿಮನಿ ಅವರನ್ನೊಳಗೊಂಡ ವೈದ್ಯರ ತಂಡವು ತಕ್ಷಣವೇ ಲ್ಯಾಪರೋಸ್ಕೊಪಿಕ ಶಸ್ತ್ರಚಿಕಿತ್ಸೆ ನೆರವೇರಿಸಿ ರೋಗಿಯ ಪ್ರಾಣವನ್ನು ಉಳಿಸಿದೆ. ಪ್ರಸ್ತುತ ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಕಾರ್ಯಪ್ರವೃತ್ತರಾಗಿ ರೋಗಿಗೆ ಮರುಜೀವ ನೀಡಿದ ವೈದ್ಯರ ತಂಡದ ಈ ಸಾಧನೆಯನ್ನು ಆಸ್ಪತ್ರೆಯ ಆಡಳಿತ ಮಂಡಳಿ ಶ್ಲಾಘಿಸಿದೆ. ಯುಎಸ್‌ಎಂ-ಕೆಎಲ್‌ಇ ಯ ನಿರ್ದೇಶಕರಾದ ಡಾ. ಹೆಚ್. ಬಿ. ರಾಜಶೇಖರ್, ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ. ನವೀನ್ ಎನ್. ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಸಂಜಯ ಕಂಬಾರ ಅವರು ವೈದ್ಯರ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 