ವಿದ್ಯೆಯ ಜೊತೆಗೆ ವಿನಯವಿದ್ದರೆ ಮಾತ್ರ ಯಶಸ್ಸು: ಡಾ.ಅಜಿತ ಪ್ರಸಾದ

ಧಾರವಾಡ07: ವಿದ್ಯಾಥರ್ಿಗಳಲ್ಲಿ ಕೇವಲ ವಿದ್ಯೆ ಇದ್ದರೆ ಸಾಲದು ವಿನಯವು ಜೊತೆಗಿದ್ದರೆ ಮಾತ್ರ ಆತ ಯಶಸ್ಸು ಗಳಿಸಲು ಸಾಧ್ಯ ಇಲ್ಲವಾದಲ್ಲಿ ಆತನ ವಿದ್ಯೆಗೆ ಯಾವುದೇ ಮಹತ್ವ ದೊರೆಯುವದಿಲ್ಲ ಮೌಲ್ಯಾಧಾರಿತ ಶಿಕ್ಷಣ ಇಮದಿನ ಅವಶ್ಯಕತೆಯಾಗಿದೆ. ಮನೆಯಿಮದ ದೊರೆಯುವ ಸಂಸ್ಕಾರ, ಕಾಲೇಜುಗಲಿಮದ ದೊರೆಯುವ ಶಿಕ್ಷಣ ವಿದ್ಯಾಥರ್ಿಯ ವ್ಯಕ್ತಿತ್ವವನ್ನು ನಿಮರ್ಿಸುತ್ತದೆ.  ಕೇವಲ ಅಂಕಗಲಿಗೆ ಹೋರಾಡಿ ಉನ್ನತ ಹುದ್ದೆಯನ್ನು ಅಲಂಕರಿಸಿ ಗರ್ವದಿಂದ ಬಿಗುವುದನ್ನು ಬಿಟ್ಟು ಅಂತಕರಣದಿಂದ ನಿಮ್ಮ ಜವಾಬ್ದಾರಿಯನ್ನು ನಿಭಾಯಿಸಿ ಎಂದು ಜೆ.ಎಸ್.ಎಸ್ ನ ನೂತನ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾಥರ್ಿಗಳಿಗೆ ಸ್ವಾಗತ ಕೋರಿ ಮಾತನಾಡುತ್ತಿದ್ದರು.

        ವಿದ್ಯಾಗಿರಿಯಲ್ಲಿರುವ ಜೆ.ಎಸ್.ಎಸ್ ತನ್ನ ಸಾಮಾಜಿಕ ಬದ್ಧತೆ ಹಾಗೂ ಗ್ರಾಮೀಣ ಭಾಗದ ವಿದ್ಯಾಥರ್ಿಗಳಿಗೂ ಗುಣಮಟ್ಟದ ಶಿಕ್ಷಣ ದೊರೆಯಲಿ ಎಂಬ ಯೋಚನೆಯೊಂದಿಗೆ ಈ ನೂತನ ಕಾಲೇಜನ್ನು ಪ್ರಾರಂಭಿಸಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮದ ವಿದ್ಯಾಥಿಗಲು ಅತ್ಯುತ್ತಮ ಶಿಕ್ಷಣ ಪಡೆಯಬಹುದಾಗಿದೆ ಎಂದು ಹೇಳಿದರು.

ಜೆ.ಎಸ್.ಎಸ್ ಎಂಬ ಒಂದು ಮಹಾವೃಕ್ಷದ ಒಂದು ಭಾಗವಾಗಿ ಪ್ರಾರಂಭವಾಗಿರುವ ಶ್ರೀ ಮಂಜುನಾಥೇಶಶ್ವರ ಪದವಿ ಪೂರ್ವ ಕಾಲೇಜು ವಿದ್ಯಾಥರ್ಿಗಳ ಸವರ್ಾಂಗೀಣ ಅಭಿವೃದ್ದಿಗೆ ಪೂರಕವಾದ ಶೈಕ್ಷಣಿಕ ವಾತಾವರಣವನ್ನು ನಿಮರ್ಿಸಿದೆ. ಅನುಭವಿ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾಥರ್ಿಗಳು ಯಶಸ್ಸಿನ ಕಡೆ ಸಾಗುವದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಪ್ರಾಚಾರ್ಯರಾದ ಡಾ. ಎಸ್.ವಿ ಭಟ್ ಹೇಳಿದರು

ಪ್ರಾರಂಭದಲ್ಲಿ ಮಹಾವೀರ ಉಪಾದ್ಯೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸೂರಜ್ ಜೈನ್ ವಂದಿಸಿದರು, ಶ್ರೀಮತಿ ತ್ರಿವೇಣಿ, ಜೀನೇಂದ್ರ ಕುಂದಗೋಳ ಉಪಸ್ಥಿತರಿದ್ದರು.