ದೃಢ ನಿರ್ಧಾರ ಸತತ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ: ತಳವಾರ
Success is possible only through determination and continuous effort: Talawara
ಲೋಕದರ್ಶನ ವರದಿ
ಉಳ್ಳಾಗಡ್ಡಿ ಖಾನಾಪೂರ 02: ಗುಣಾತ್ಮಕ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಸರಕಾರವು ಕರ್ನಾಟಕ ಪಬ್ಲಿಕ ಶಾಲೆಗಳನ್ನು ಆರಂಭಿಸಿದ್ದು ಶಾಲಾ ಶಿಕ್ಷಕರ ಸತತ ಪ್ರಯತ್ನ ವಿದ್ಯಾರ್ಥಿಗಳ ದೃಢ ನಿರ್ಧಾರ ಶಾಲಾ ಮೇಲುಸ್ತುವಾರಿ ಸದಸ್ಯರ, ಪಾಲಕರ ಸಹಕಾರದಿಂದ ಶಾಲಾ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಡಯಟ್ ಉಪನ್ಯಾಸಕ ಕೆ.ಪಿ. ತಳವಾರ ಹೇಳಿದರು. ಅವರು ದಿ. 25ರಂದು ಉಳ್ಳಾಗಡ್ಡಿ-ಖಾನಾಪೂರ ಗ್ರಾಮದ ಡಿ.ಬಿ. ಹೆಬ್ಬಾಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಸತ್ಕಾರ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಶಾಲೆಯ ವಿದ್ಯಾರ್ಥಿನಿ ರೋಹಿಣಿ ದುಂಡಪ್ಪ ಜರಳಿ ಶೇ. 99.52ರಷ್ಟು ಅಂಕ ಪಡೆದು ರಾಜ್ಯಮಟ್ಟಕ್ಕೆ 4 ನೇ ಸ್ಥಾನ ಪಡೆದಿದ್ದು ಸಾಧನಾ ಮಹಾಂತೇಶ ಚಿತ್ತೂರಿ, ಶೇ. 98.88 ರಷ್ಟು ಅಂಕ ಪಡೆದು ಶಾಲೆಗೆ ದ್ವಿತೀಯ ಸೃಷ್ಠಿ ರುದ್ರಾ್ಪ ರುದ್ರಗೌಡರ, ಶೇ. 96.96 ರಷ್ಟು ಅಂಕ ಪಡೆದು ತ್ರತೀಯ ಸ್ಥಾನ ಗಳಿಸಿದ್ದಕ್ಕಾಗಿ ಸತ್ಕರಿಸಲಾಯ್ತು. ಕಾಲೇಜಿನ ಉಪ ಪ್ರಾಚಾರ್ಯ ಮಲ್ಲಪ್ಪ ಮಗದುಮ್ಮ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷ ಸುಭಾಷ ಹೆಬ್ಬಾಳಿ, ರಾಜು ಅವಟೆ, ಮಾತನಾಡಿದರು. ಮುಖ್ಯ ಶಿಕ್ಷಕಿ ಎಸ್.ಎಮ್. ನಲವಡೆ ಅಧ್ಯಕ್ಷತೆಯನ್ನು ವಹಿಸಿದ್ದರು.
ಶಾಂತಿನಾಥ ಪಾಟೀಲ, ಮಲ್ಲಪ್ಪ ನಾಯಕ, ಪರಶುರಾಮ ದಂಡಗಿದಾಸ, ಶಂಕರ ನಾಯಿಕ, ಹಣಮಂತ ನಾಯಿಕ, ಹಾಗೂ ಶಿಕ್ಷಕ ಸಿಬ್ಬಂದಿಯವರು ಉಪಸ್ಥಿತರಿದ್ದರು. ಕೆ.ಡಿ.ಕಲ್ಕುಟಗಿ ನಿರೂಪಿಸಿದರು. ಎಮ್.ಎನ್. ಶೆಟ್ಟರ ಸ್ವಾಗತಿಸಿದರು. ಎಸ್.ಕೆ. ಬೊಮ್ಮನ್ನವರ ವಂದಿಸಿದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 