ನಿರಂತರ ಅಧ್ಯಯನ ಕೈಗೊಂಡರೆ ಸಾಧನೆ ಸಾಧ್ಯ: ಡಾ.ಜರಕುಂಟಿ
Success is possible if you study continuously: Dr. Jarakunti
ನಿರಂತರ ಅಧ್ಯಯನ ಕೈಗೊಂಡರೆ ಸಾಧನೆ ಸಾಧ್ಯ: ಡಾ.ಜರಕುಂಟಿ
ಮುಧೋಳ 07: ದ್ಯಾರ್ಥಿಗಳು ತಮ್ಮ ಶಿಸ್ತು, ಸಂಯಮ ಹಾಗೂ ನಿರಂತರ ಅಧ್ಯಯನ ಕೈಗೊಂಡರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ, ವಿಶ್ವವಿದ್ಯಾಲಯದ ಶಿಕ್ಷಣ ನೀತಿಯ ಅನುಗುಣವಾಗಿ ಪಠ್ಯಕ್ರಮಕ್ಕೆ ಹೊಂದಿಕೊಳ್ಳುವುದು, ಕೌಶಲ್ಯಾಭಿವೃದ್ದಿ ಬೆಳಸಿಕೊಳ್ಳುವುದು, ಇದಕ್ಕೆ ಪೂರಕವಾಗಿ ಮಹಾವಿದ್ಯಾಲಯದಲ್ಲಿ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯ ಮತ್ತು ಸೌಕರ್ಯಗಳಿವೆ ಕಾರಣ ಪ್ರಥಮ ವರ್ಷದ ಪದವಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥಮಾಡದೆ ಶೈಕ್ಷಣಿಕ ಪ್ರಗತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಎಸ್.ಆರ್.ಕಂಠಿ ಕಾಲೇಜಿನ ನೂತನ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಜರಕುಂಟಿ ಹೇಳಿದರು.
ಗುರುವಾರ ನಗರದ ಎಸ್.ಆರ್.ಕಂಠಿ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಬಿಸಿಎ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ ಉತ್ತಮ ಬೋಧಕ ವರ್ಗ ದವರಿದ್ದಾರೆ, ವಿದ್ಯಾರ್ಥಿಗಳ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡೆಗಳ ಪ್ರಗತಿಗಾಗಿ ಕಾಲೇಜಿನಲ್ಲಿ ಎಲ್ಲ ರೀತಿಯ ಸೌಲಭ್ಯಗಳಿವೆ ಕಾರಣ ವಿದ್ಯಾರ್ಥಿಗಳು ಸಮರ್ಕವಾಗಿ ಬಳಸಿಕೊಂಡು ಮಹಾವಿದ್ಯಾಲಯಕ್ಕೆ ಕೀರ್ತಿ ತರುವಂತಹ ಕೆಲಸ ಮಾಡಬೇಕು ಮತ್ತು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು
ವೇದಿಕೆ ಮೇಲೆ ಉಪಸ್ಥಿತರಿದ್ದ ಐಕ್ಯೂಎಸಿ ಸಂಯೋಜಕರಾಗಿರುವ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಅಜಯಕುಮಾರ ಕಡೂರ ಮಾತನಾಡಿ ಐಕ್ಯೂಎಸಿ ಹಾಗೂ ವಿವಿಧ ಸಮಿತಿಗಳ ಕುರಿತು ಮತ್ತು ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡಿದ ನಂತರ ವಿದ್ಯಾರ್ಥಿಗಳಿಗೆ ಏನೇನು ಉದ್ಯೋಗ ಅವಕಾಶ ಗಳಿವೆ ಎಂಬುದರ ಕುರಿತು ವಿವರಿಸಿದರು.
ಕಲಾ ವಿಭಾಗದ ಮುಖ್ಯಸ್ಥ ಡಾ.ಮರಿಯಪ್ಪ ಪಾಟೀಲ ಮಾತನಾಡಿ ಕಲಾ ವಿಭಾಗದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ ಸೇರಿದಂತೆ ಒಟ್ಟು 9 ವಿಷಯದ ವಿಭಾಗ ಗಳಿವೆ, ಪ್ರತಿಯೊಂದು ವಿಷಯದಲ್ಲಿ ನುರಿತ ಉಪನ್ಯಾಸಕರು ಇದ್ದಾರೆ ಎಂದು ಹೇಳಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿಯೇ ಇರುವ ಮೂಲಭೂತ ಸೌಲಭ್ಯಗಳು ಕುರಿತು ವಿವರಿಸಿದರು.
ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಅನೀಲಕುಮಾರ ಪತ್ತಾರ ಮಾತನಾಡಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಯೋಗಾಲಯಗಳು, ಬಾಟನಿಕಲ್ ಗಾರ್ಡನ್ ಸೇರಿದಂತೆ ಏನೇನು ಸೌಲಭ್ಯಗಳಿವೆ ಎಂಬುದರ ಕುರಿತು ತಿಳಿಸಿಕೊಟ್ಟರು.
ಬಿಸಿಎ ವಿಭಾಗದ ಮುಖ್ಯಸ್ಥ ಪ್ರೊ.ಬಸವರಾಜ ಲಿಂಗರಡ್ಡಿ ಮಾತನಾಡಿ ನಮ್ಮ ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್, ವೈಪೈ ಸೌಲಭ್ಯಗಳಲ್ಲದೆ ಇನ್ನೂ ಅನೇಕ ಸೌಲಭ್ಯಗಳು ಇರುವದರ ಕುರಿತು ಮಾಹಿತಿ ನೀಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪ್ರಹ್ಲಾದ ಕೆ ಅವರು ಸಾಂಸ್ಕ್ರತಿಕ ವಿಭಾಗ, ಕನ್ನಡ ಸಂಘ ಹಾಗೂ ವಾರ್ಷಿಕ ಸಂಚಿಕೆ ಕುರಿತು, ಗ್ರಂಥಪಾಲಕ ಚಿರಂಜೀವಿ ಎಲ್.ಎಮ್ ಅವರು ಗ್ರಂಥಾಲಯದ ಕುರಿತು, ಸಂಖ್ಯಾಶಾಸ್ತ್ರ ವಿಷಯದ ಉಪನ್ಯಾಸಕಿ ಪ್ರೊ.ಪ್ರೀತಿ ಕರಡಿ ಅವರು ವಿದ್ಯಾರ್ಥಿನಿಯರ ಒಕ್ಕೂಟ, ಮಹಿಳಾ ಸಬಲೀಕರಣ ಘಟಕ ಹಾಗೂ ಮಹಿಳಾ ವಸತಿ ನಿಲಯದ ಕುರಿತು, ದೈಹಿಕ ನಿರ್ದೇಶಕ ಪ್ರೊ.ಅನೀಲಕುಮಾರ ಮುನ್ನೋಳ್ಳಿ ಅವರು ಕ್ರೀಡಾ ವಿಭಾಗ, ವೈ.ಆರ್.ಸಿ ಆಂಡ್ ಆರ್.ಆರ್.ಸಿ ಹಾಗೂ ಎನ್.ಸಿ.ಸಿ ಘಟಕದ ಕುರಿತು, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮೃತ್ಯುಂಜಯ ಗವಿಮಠ ಅವರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ ಮತ್ತು ರೇಂಜರ್ ಘಟಕದ ಕುರಿತು, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ಲೋಕೇಶ ರಾಠೋಡ ಅವರು ಎನ್‌ಎಸ್‌ಎಸ್ ಘಟಕದ ಕುರಿತು ವಿದ್ಯಾರ್ಥಿಗಳಿಗೆ ಪರಿಚಯಸಿದರು.
ಪ್ರೊ.ಪರಮಾನಂದ ಕುಂಬಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ವೀಣಾ ಸಾಲಿಮಠ ನಿರೂಪಿಸಿದರು. ಡಾ.ಸುಭಾಸ ಸಬರದ ವಂದಿಸಿದರು. ಪ್ರೊ.ರೂಪಾ ಮಠಪತಿ ಪ್ರಾರ್ಥನೆ ಹೇಳಿದರು.
ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 