ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಹಾಯಧನ ಸಲ್ಲಿಕೆ

ಲೋಕದರ್ಶನ ವರದಿ

ಮುನವಳ್ಳಿ: ಅ. 31 ರಂದು ಕರ್ನಾಟಕ  ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ಮುನವಳ್ಳಿ ಘಟಕದ ವತಿಯಿಂದ ನೆರೆ ಸಂತ್ರಸ್ಥರಿಗೆ 1,01,000/- ಒಂದು ಲಕ್ಷ,ಒಂದು ಸಾವಿರ ರೂ.ಗಳ. ಸಹಾಯಧನವನ್ನು ಸವದತ್ತಿ ಶಾಸಕ ಆನಂದ ಮಾಮನಿ ಹಾಗೂ ತಹಶೀಲ್ದಾರ ಶಂಕರ ಗೌಡಿ ಇವರುಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಯಿತು.

ಪರಿಹಾರ ಹಣದ ಡಿಡಿ ಸ್ವೀಕರಿಸಿ ಮಾತನಾಡಿದ ಶಾಸಕ ಆನಂದ ಮಾಮನಿ ನೆರೆಯಿಂದ ತತ್ತರಿಸಿದ ರಾಜ್ಯದ ಜನತೆಗೆ ನೆರವು ನೀಡುವ ಸದುದ್ದೇಶದಿಂದ ಮುನವಳ್ಳಿಯ ಬಣಜಿಗ ಸಮಾಜದವರು ಪ್ರತಿವರ್ಷ ನಡೆಸುವ ಸಮಾಜದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ರದ್ದು ಮಾಡಿ ಅದಕ್ಕೆ ಮೀಸಲಿಟ್ಟ ಹಣದ ಜೊತೆಗೆ ಇನ್ನು ಒಂದಿಷ್ಟು ಹಣವನ್ನು ಸೇರಿಸಿ ಪರಿಹಾರಧನವನ್ನು ನೀಡಿ ಮಾನವಿಯತೆಯನ್ನು ಮೆರೆದಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ ಶಂಕರ ಗೌಡಿ, ಬಣಜಿಗ ಸಮಾಜದ ಹಿರಿಯರಾದ ಎಂ.ಆರ್. ಗೋಪಶೆಟ್ಟಿ. ರಮೇಶ ಗೋಮಾಡಿ, ಮುನವಳ್ಳಿ ಘಟಕದ ಅಧ್ಯಕ್ಷ ಅರುಣ ಬಾಳಿ. ಶಿವುಕುಮಾರ ಕರೀಕಟ್ಟಿ ರಾಜಣ್ಣ ಬಾಳಿ, ರಾಜಶೇಖರ ಶೀಲವಂತ, ಅಣ್ಣಪ್ಪ ಗಯ್ಯಾಳಿ, ಉದಯ ಬಾಳಿ, ಶ್ರೀಶೈಲ ಹಂಜಿ, ನಾಗರಾಜ ಗೋಪಶೆಟ್ಟಿ, ಮಹಾಂತೇಶ ಶೆಟ್ಟರ, ಮಲ್ಲಿಕಾಜರ್ುನ ಜಮಖಂಡಿ, ತಮ್ಮಣ್ಣ ಬಾಳಿ, ಜಗದೀಶ ಬಾಳಿ, ಸಂತೋಷ ಹಂಜಿ, ರುದ್ರಪ್ಪ ಗೋಮಾಡಿ ಸೇರಿದಂತೆ ಬಣಜಿಗ ಸಮಾಜದವರು ಉಪಸ್ಥಿತರಿದ್ದರು