ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ನೀಡಿ ಶೀಘ್ರ ಪೂರ್ಣಗೊಳಿಸಲು ಮನವಿ ಸಲ್ಲಿಕೆ
ಸಂಬರಗಿ 10 :ಗಡಿಭಾಗದ ರೈತರ ನೀರಿನ ಸಮಸ್ಯೆಗೆ ಈ ಭಾಗದ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಗೆ ಹೆಚ್ಚಿನ ಅನುದಾನ ನೀಡಿ ಶೀಘ್ರ ಪೂರ್ಣಗೊಳಿಸಲು ಹಾಗೂ ಗಡಿಭಾಗ ಬರಗಾಲ ಮುಕ್ತ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಶಾಸಕ ರಾಜು ಕಾಗೆ ಶಾಸಕ ಲಕ್ಷ್ಮಣ ಸವದಿ,ಹಾಗೂ ರೈತರ ಮಾರ್ಗದರ್ಶನದಲ್ಲಿ ಭಾಗದ ಕಾರ್ಯಕರ್ತರು ಯೋಜನೆಗೆ ಅನುದಾನ ಶೀಘ್ರ ನೀಡುವಂತೆ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಮಾಧ್ಯಮ ಪ್ರತಿನಿಧಿಗಳಾದ ರಾವಸಾಹೇಬ್ ಐಹೊಳೆ ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರು ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ತೆರಳಿ ವಿನಂತಿ ಮೂಲಕ ಮನವಿ ಸಲ್ಲಿಸುವುದಾಗಿ ತಿಳಿಸಿದರು.ಸಂಬರಗಿ ಗ್ರಾಮದಲ್ಲಿ ಮಾತನಾಡಿದ, ಈ ಭಾಗದ ನೀರಿನ ಯೋಜನೆ ಕುರಿತು ಸರಕಾರ ಚರ್ಚಿಸಿ, ಈ ಭಾಗದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಒತ್ತಾಯಿಸಿದರು. ಈ ಭಾಗದ ಜನರು ತಮ್ಮ ವಿವಿಧ ಕೆಲಸಗಳಿಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ಹೋಗಲು ದೂರ ವಾಗುತ್ತದೆ ಆ ಕಾರಣ ಚಿಕ್ಕೋಡಿಗೆ ಅಥಣಿ ಎರಡು ಜಿಲ್ಲೆ ಘೋಷಣೆ ಮಾಡಬೇಕು ಅಥಣಿ ತಾಲೂಕಾ ಕರ್ನಾಟಕದ ಕೊನೆಯ ಭಾಗವಾಗಿದೆ. ಇದು ಕಾಲಹರಣವಾಗಿದ್ದರೂ ಕೂಡಲೇ ಜಿಲ್ಲೆ ಘೋಷಣೆ ಮಾಡಬೇಕು ಸರಕಾರಕ್ಕೆ ನಾವು ಸರ್ಕಾರಕ್ಕೆ ಬಲವಾಗಿ ವಿನಂತಿಸುತ್ತೇವಚುನಾವಣೆ ವೇಳೆ ನೀಡಿದ ಐದು ಗ್ಯಾರೆಂಟಿ ಗಳು ಸರ್ಕಾರ ಜಾರಿಗೆ ತಂದಿರುವುದರಿಂದ ಸಾಮಾನ್ಯ ಬಡ ಕುಟುಂಬ ನೆಮ್ಮದಿಯಿಂದಿದ್ದು, ಗ್ರಾಮೀಣ ಭಾಗದ ಜನರು ಈ ಪಕ್ಷದ ಬೆನ್ನಿಗೆ ನಿಂತಿದ್ದಾರೆ.ಈ ಭಾಗದ ಹಲವು ಸಮಸ್ಯೆಗಳ ಪರಿಹಾರಕ್ಕೆ ಸಚಿವರನ್ನು ಭೇಟಿ ಮಾಡಿ ಹೇಳಿಕೆ ನೀಡಲಿದ್ದೇವೆಈ ಸಂದರ್ಭದಲ್ಲಿ ಅನಂತಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಓಂ ಪ್ರಕಾಶ್ ಪಾಟೀಲ್ ಅಣ್ಣಾಸಾಹೇಬ ಮಿಸಳ. ಧೋಂಡಿರಾಮ್ ಸುತಾರ್ ,ಅಶೋಕ. ಬಾಬು ಮಾನೆ, ಮಲ್ಲಿಕಾರ್ಜುನ ದಳವಾಯಿ ಹಾಗೂ ಪಕ್ಷದ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.ಫೋಟೋರಾವಸಾಹೇಬ ಐಹೊಳೆಮಾಹಿತಿ ನೀಡಿದರು ಈ ವೇಳೆ ಅಶೋಕ್ ಮನೆ ಮಲ್ಲಿಕಾರ್ಜುನ ದಳವಾಯಿ ತಿನ್ನಿತ್ತಿರು( 10ಸಂಬರಗಿ1 )