2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾಥಿಗಳಿಗೆ ಸನ್ಮಾನ
Students who scored the highest marks in the 2025-26 Second PUC Examination were felicitated.
ಸಿಂದಗಿ 20 : ಇಂದಿನ ಜಗತ್ತು ವೈಜ್ಞಾನಿಕವಾಗಿ ಅತ್ಯಂತ ಮುಂದುವರೆಯುತ್ತಿದೆ. ಅದಕ್ಕೆಲ್ಲ ಗುಣಮಟ್ಟದ ಶಿಕ್ಷಣ ಕಾರಣವಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಯೋಗ್ಯವಾಗಿ ಸಿಗುತ್ತಿದೆ ಆದರೆ ಸಂಸ್ಕಾರದ ಕೊರತೆ ಕಾಣುತ್ತಿರುವುದು ವಿಷಾದನೀಯ ಎಂದು ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಕಾಲೇಜಿನ 2025-26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾಥಿಗಳಿಗೆ ಸನ್ಮಾನಿಸಿ ಮಾತನಾಡಿ, ವಿದ್ಯಾರ್ಥಿಗಳು ದೃಡ ಮನಸ್ಸು, ಏಕಾಗ್ರತೆ, ಸಾಧಿಸುವ ಛಲ, ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇಂದು ಶಿಕ್ಷಣದ ಜೋತೆಗೆ ಕೌಶಲ್ಯದ ಜ್ಞಾನ ಅವಶ್ಯ. ವಿವಿಧ ಕೌಶಲ್ಯಗಳು ನಮ್ಮ ಬದುಕಿಗೆ ಆಸರೆಯಾಗುತ್ತವೆ. ಜಗತ್ತು ಬೆಳೆಯುತ್ತಿರುವ ಹಾಗೆ ನಾವೇಲ್ಲ ಅದಕ್ಕೆ ಹೊಂದಾಣಿಕೆಯಾಗಬೇಕು.
ಕೌಶಲ್ಯದ ಯುಗದಲ್ಲಿ ಹೆಚ್ಚು ಕೌಶಲ್ಯಗಳ ಅನುಭವ ಇರಬೇಕು . ಹೊಸ ಹೊಸ ಅನ್ವೇಷಣಾ ಹಾದಿಯಲ್ಲಿ ಹೋಗುವ ವಿದ್ಯಾಥಿಗಳು ಅಸಂಖ್ಯಾತ ಪ್ರಶ್ನೇಗಳಿಗೆ ಸರಿಯಾದ ಉತ್ತರಗಳನ್ನು ನೀಡುವ ಹಾಗೂ ಊಹಿಸುವ ಸಾಮರ್ಥ್ಯಗಳನ್ನು ಗಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂಧರ್ಭದಲ್ಲಿ ಹೆಚ್ಚು ಅಂಕಗಳಿಸಿದ ಭಾಗ್ಯಶ್ರೀ ಬಾಗೇವಾಡಿ, ಲಕ್ಷ್ಮೀ ಸಾಲೋಡಗಿ, ಪೃಥ್ವೀ ಹಿರೇಮಠ, ಅಂಬಿಕಾ ಬಿರಾದಾರ, ನೀಲಕಂಠ ಬಿರಾದಾರ, ಭಾಗ್ಯಜ್ಯೋತಿ ನಾಯ್ಕೋಡಿ, ಪ್ರಕಾಶ ತಿಳಗೂಳ ಸೇರಿದಂತೆ ಸುಮಾರು 35 ಕ್ಕೂ ಹೆಚ್ಚು ವಿದ್ಯಾಥಿಗಳನ್ನು ಶಾಸಕ ಮನಗೂಳಿ ಸನ್ಮಾಸಿ ಗೌರವಿಸಿದರು. ಈ ವೇಳೆ ಸಂಸ್ಥೆಯ ನಿರ್ದೇಶಕ ಬಿ.ಜಿ.ನೆಲ್ಲಗಿ, ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ, ಡಾ. ಅಂಬರೀಶ ಬಿರಾದಾರ, ಎಸ್.ಎ.ಪಾಟೀಲ, ಎಮ್.ಎನ್.ಅಜ್ಜಪ್ಪ, ಎಸ್.ಪಿ.ಬಿರಾದಾರ, ಎಫ್.ಎ.ಹಾಲಪ್ಪನವರ, ಮುಕ್ತಾಯಕ್ಕ ಕತ್ತಿ, ಎ.ಆರ್.ಸಿಂದಗಿಕರ, ಸಿದ್ದಲಿಂಗ ಕಿಣಗಿ, ಸತೀಶ ಬಸರಕೋಡ, ಡಾ. ಎಸ್.ಎಸ್.ಚವ್ಹಾಣ, ಜ್ಯೋತಿ ಚೆನ್ನೂರ, ಎಸ್.ಎಸ್.ಪಾಟೀಲ ಸೇರಿದಂತೆ ವಿದ್ಯಾರ್ಥಿಗಳ ಪಾಲಕರು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 