ಬೆಳಗಾವಿ 13: ಚಳಿಗಾಲ ಅಧಿವೇಶನ ನಡೆಯುತ್ತಿರುವ ಬೆಳಗಾವಿಯ ಸುವರ್ಣ ವಿಧಾನಸೌಧ ಈಗ ಜಿಲ್ಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಕೇಂದ್ರವಾಗಿ ಮಾರ್ಪಟಟಿದೆ. ಬೆಳಗಾವಿ ಜಿಲ್ಲೆಯ ವಿವಿಧ ಭಾಗದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಚಳಿಗಾಲ ಅಧಿವೇಶನದ ಕಲಾಪ ವಿಕ್ಷಣೆ ಮಾಡುವ ಮೂಲಕ ಸವರ್ಣ ಸೌಧದ ಅಂದವನ್ನು ಕಣ್ಣುತುಂಬಿಕೊಳ್ಳುವ ಅವಕಾಶವು ವಿದ್ಯಾರ್ಥಿಗಳಿಗೆ ಸಿಕ್ಕಿದೆ.
ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಕಳೆದ ಡಿ.9ರಿಂದ ಆರಂಭವಾಗಿರುವ ಅಧಿವೇಶನವು ಶಾಸಕರ ಚರ್ಚೆಗಿಂತ ಮಕ್ಕಳ ಪ್ರವಾಸಿ ತಾಣವಾಗಿ ಮಾರ್ಾಡು ಆಗುತ್ತಿದೆ. ಬೆಳಗಾವಿಯಲ್ಲಿ ಅಧಿವೇಶನ ಶುರುವಾಗುತ್ತಿದ್ದಂತೆ ವಿದ್ಯಾರ್ಥಿಗಳ ದಂಡು ಸೌಧಕ್ಕೆ ಲಗ್ಗೆ ಇಡುತ್ತಿದೆ. ಶಾಲಾ ವಿದ್ಯಾರ್ಥಿಗಳು ಸರ್ಕಾರ ಮತ್ತು ಸಚಿವರು ಶಾಸಕರ ಕಲಾಪದಲ್ಲಿ ಮಾತನಾಡುವುದನ್ನು ಸಮೀಪದಿಂದ ಆಲಿಸಿ ಸಂತಸ ಪಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಶಾಲೆಗಳ 600ಕ್ಕೂ ಅಧಿಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಧಿವೇಶನ ವೀಕ್ಷಿಸಿದರು. ಬೆಳಗಾವಿ ಸುವರ್ಣ ನಡೆಯುತ್ತಿರವ ಈ ಅಧಿವೇಶನ ವಿಕ್ಷೀಸಲು ಬರುವ ಶಾಲಾ ಬಾಲಕರಿಗೆ ಬೆಳಗಾವಿ ಜಿಲ್ಲಾಡಳಿತ ಸೌಧದಲ್ಲಿ ಕುಡಿಯಲು ಉಚಿತವಾಗಿ ಜ್ಯೂಸ್ ವ್ಯವಸ್ಥೆ ಮಾಡಲಾಗಿದೆ.