ರೇಡಿಯೋ ಕೇಂದ್ರಕ್ಕೆ ವಿದ್ಯಾರ್ಥಿಗಳ ಭೇಟಿ
Students visit the radio station
ರೇಡಿಯೋ ಕೇಂದ್ರಕ್ಕೆ ವಿದ್ಯಾರ್ಥಿಗಳ ಭೇಟಿ
ಹುಕ್ಕೇರಿ, 30 ; ಚಿಕ್ಕಾಲಗುಡ್ಡ ಗ್ರಾಮದ ಶ್ರೀ ಶಂಕರಲಿಂಗ ಮಾಡೆಲ್ ಶಾಲೆಯ ವಿದ್ಯಾರ್ಥಿಗಳು ಇತ್ತಿಚೇಗೆ ಶಿಕ್ಷಣಾತ್ಮಕ ಪ್ರವಾಸದ ಅಂಗವಾಗಿ ಯಲ್ಲಾಪೂರ ಗ್ರಾಮದ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ರೇಡಿಯೋ ಜಾಕಿ ಚೇತನ ಕುಲಕರ್ಣಿಯವರು ಮಾತನಾಡಿ ಚಿಕ್ಕಂದಿನಿಂದಲೇ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ, ಮಾಧ್ಯಮ ಕ್ಷೇತ್ರದ ಅಭಿರುಚಿ ಮೂಡಿಸಲು ಇಂತಹ ಭೇಟಿಗಳು ಸಹಾಯಕವಾಗಲಿದೆ ಎಂದರು.
ವಿದ್ಯಾರ್ಥಿಗಳಿಗೆ ರೇಡಿಯೋ ಕಾರ್ಯಕ್ರಮ ತಯಾರಿ, ಧ್ವನಿ ದಾಖಲಿಸುವ ವಿಧಾನ, ನೇರ ಪ್ರಸಾರ ತಂತ್ರಜ್ಞಾನ, ನಿರೂಪಕರ ಕೆಲಸ ಮತ್ತು ಮಾಧ್ಯಮ ಕ್ಷೇತ್ರದ ತಾಂತ್ರಿಕ ಮಾಹಿತಿ ನೀಡಲಾಯಿತು. ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳನ್ನು ನೀಡಿ ಪ್ರಸಾರ ವಿಧಾನವನ್ನು ನೇರವಾಗಿ ವಿಕ್ಷಿಸಿ ಅನುಭವ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಶಿಕ್ಷಕರಾದ ಶ್ರೀಮತಿ. ಪುಷ್ಪಾ ಮುಷ್ಟಗಿ, ವಿಕ್ರಾಂತ ಪೋತದಾರ ಮಾತನಾಡಿ ನೈಜ ಅನುಭವದಿಂದ ಪಾಠಗಳತ್ತ ಹೆಚ್ಚಿನ ಆಸಕ್ತಿ ಮೂಡುತ್ತದೆ, ಶಾಲಾ ಆಡಳಿತವು ವಿದ್ಯಾರ್ಥಿಗಳಿಗೆ ಇಂತಹ ಶಿಕ್ಷಣಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯನ್ನು ಹೊಂದಿದೆ ಎಂದರು.
ಕೊನೆಯಲ್ಲಿ ರೇಡಿಯೋ ಸಿಬ್ಬಂದಿ ಮಹಾಂತೇಶ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 