ವಿದ್ಯಾರ್ಥಿಗಳು ಸಮಯಪ್ರಜ್ಞೆ, ಶಿಸ್ತು ರೂಢಿಸಿಕೊಳ್ಳಿ : ಕುಬೇರನಾಯ್ಕ
Students should be punctual and disciplined: Kubera Nayak
ಹೂವಿನಹಡಗಲಿ 31: ವಿದ್ಯಾರ್ಥಿಗಳು ಸಮಯಪ್ರಜ್ಞೆ, ಶಿಸ್ತು ರೂಢಿಸಿಕೊಂಡಾಗ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಬೆಂಗಳೂರಿನ ಪೊಲೀಸ್ ಇಲಾಖೆ ಪೊಲೀಸ್ ಕಾನ್ಸಟೆಬಲ್ ಕುಬೇರನಾಯ್ಕ ತಿಳಿಸಿದರು.ಇಲ್ಲಿಗೆ ಸಮೀಪದ ಹಂಪಸಾಗರ ಗ್ರಾಮದ ಸೇವಾಲಾಲ್ ವಿದ್ಯಾಸಂಸ್ಥೆಯ ಶಾಲಾ ಮಕ್ಕಳಿಗಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಶಿಕ್ಷಣದ ಜತೆಗೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಹೆಚ್ಚು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಪ್ರತಿ ವರ್ಷವೂ ಆಯೋಜಿಸುವ ಸ್ಪರ್ಧೆಗಳಿಗೆ ಬಹುಮಾನ ನೀಡಲಾಗುವುದು ಎಂದರು. ಸಂಸ್ಥೆಯ ಕಾರ್ಯದರ್ಶಿ ಮೀನಾಕ್ಷಿ ನಾಣಿಕಿನಾಯ್ಕ ಮಾತನಾಡಿದರು. ರಸಪ್ರಶ್ನೆ, ಪ್ರಬಂಧ, ವಾಲಿಬಾಲ್ ಸೇರಿ ನಾನಾ ಪಠ್ಯೇತರ ಚಟುವಟಿಕೆಯಲ್ಲಿ ವಿಜೇತರಿಗೆ ಕುಬೇರನಾಯ್ಕ ಬಹುಮಾನ ವಿತರಿಸಿದರು. ಇದೇವೇಳೆ ಶಿಕ್ಷಕಿಯರಾದ ಜಿ.ಎಚ್.ಕಟ್ಟೆಮ್ಮ, ಡಿ.ಗಾಯತ್ರಿ, ಎಚ್.ರವಿಕುಮಾರನಾಯ್ಕ, ಟಿ.ಸುಮಾ ಇವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕರಾದ ಯು.ಪಿ.ವೀರನಗೌಡ, ವೀರಯ್ಯಮೂರ್ತಿ, ಥಾವರನಾಯ್ಕ, ಮುರ್ತಿನಾಯ್ಕ, ಉಮೇಶ್ ನಾಯ್ಕ, ಸಂಪತ್ಕುಮಾರ್ ಇತರರಿದ್ದರು. ಶಿಕ್ಷಕರಾದ ಗಣೇಶ, ಎಚ್.ಶಿವಪುತ್ರ್ಪ ನಿರ್ವಹಿಸಿದರು.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 