ಉಚಿತ ತರಬೇತಿ ಕೇಂದ್ರದಿಂದ ಸೈನಿಕ ಶಾಲೆಗೆ ವಿದ್ಯಾರ್ಥಿಗಳು ಆಯ್ಕೆ

ಉಚಿತ ತರಬೇತಿ ಕೇಂದ್ರದಿಂದ ಸೈನಿಕ ಶಾಲೆಗೆ ವಿದ್ಯಾರ್ಥಿಗಳು ಆಯ್ಕೆ Students selected for military school from free training center

ಲೋಕದರ್ಶನ ವರದಿ

ಕಂಪ್ಲಿ 09: ಅಖಿಲ ಭಾರತ ಸೈನಿಕ ಶಾಲೆಗೆ ಕಂಪ್ಲಿಯ ಸ್ಫೂರ್ತಿ ನವೋದಯ ತರಬೇತಿ ಕೇಂದ್ರದಿಂದ 70 ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ ಎಂದು ಸ್ಫೂರ್ತಿ ನವೋದಯ ತರಬೇತಿ ಕೇಂದ್ರದ ಸಂಸ್ಥಾಪಕ ಕಾರ್ಯದರ್ಶಿ ರಮೇಶ ಶಿವಪುರ ತಿಳಿಸಿದ್ದಾರೆ. ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ,ಮಕ್ಕಳಿಗೆ ತರಬೇತಿ ಪಡೆಯುವುದರಿಂದ ಸರ್ಕಾರಿ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆಯಲು ಅವಕಾಶವಿರುತ್ತದೆ ಪಾಲಕರು ತಪ್ಪದೇ ಮಕ್ಕಳಿಗೆ ತರಬೇತಿ ನೀಡಲು ಮುಂದಾಗಬೇಕು ಎಂದರು  ಜ.18ರಂದು ನಡೆದ ಸೈನಿಕ ಪರೀಕ್ಷೆಯಲ್ಲಿ 100 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಈ ಪರೀಕ್ಷೆಯಲ್ಲಿ ಟಿ.ಕೆ.ಭುವನ್, ಸಂಪತ್ ಕುಮಾರ, ನವನೀತಕುಮಾರ, ಅಂಕಿತ, ಸ್ವಾಮಿ ಪಾಟೀಲ್, ಎ.ಹರ್ಷಿತಾ, ಅಮೋಘ, ಎಲ್‌.ಪಿ.ಅನನ್ಯ, ತಿಲಕ್ ನಾಯಕ್, ತೇಜಸ್ ಕೆ.ಬಿ, ದೀಕ್ಷಿತ ಪಿ.ಎನ್, ಸ್ನೇಹ, ಬಿ.ಎಸ್‌.ಪ್ರೀತಮ್, ಕಾವೇರಿ, ಕೆ.ತ್ರಿಶಾಂತ, ಶ್ರಾವಣಿ, ಸೃಜನ್‌ಕುಮಾರ ಟಿ, ಸೃಜನ್ ಎಚ್‌.ಯು ಸೇರಿದಂತೆ 70 ವಿದ್ಯಾರ್ಥಿಗಳು ಅರ್ಹತೆ ಪಡೆದು 200ಕ್ಕಿಂತ ಹೆಚ್ಚು ಅಂಕ ಪಡೆದುಕೊಂಡು ಸ್ಪೂರ್ತಿ ನವೋದಯ ತರಬೇತಿ ಕೇಂದ್ರಕ್ಕೆ ಕೀರ್ತಿ ತಂದಿದ್ದಾರೆ. ಸೈನಿಕ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ, ಶಿಸ್ತು, ಪ್ರಾಮಾಣಿಕತೆಯ ಪಾಠ ಸೇರಿದಂತೆ ನಾನಾ ಸೌಲಭ್ಯಗಳೊಂದಿಗೆ ಒಳ್ಳೆಯ ಶಿಕ್ಷಣ ದೊರೆಯುತ್ತದೆ. ಇಂತಹ ಸೈನಿಕ ಶಾಲೆಗೆ ಅರ್ಹತೆ ಪಡೆಯುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವೂ ಉತ್ತಮ ಭವಿಷ್ಯದ ಕಡೆ ವಾಲುತ್ತದೆ. ವಿದ್ಯಾರ್ಥಿಗಳು ಆಯ್ಕೆಗೊಂಡಿರುವುದು ಹರ್ಷದಾಯಕವಾಗಿದೆ ಎಂದರು. ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಮುತ್ತಣ್ಣ ನಂದಿಹಾಳ ಇದ್ದರು.