ಬೈಲಹೊಂಗಲ: 'ವಿದ್ಯಾರ್ಥಿನಿಯರು ಸ್ವಾವಲಂಬನೆಯ ಬದುಕು ತಮ್ಮದಾಗಿಸಿಕೊಳ್ಳಬೇಕು'

ಲೋಕದರ್ಶನ ವರದಿ

ಬೈಲಹೊಂಗಲ 05:  ವಿದ್ಯಾರ್ಥಿನಿಯರು ಮಹಿಳಾ ಕಾನೂನುಗಳನ್ನು ತಿಳಿದುಕೊಂಡು ಸ್ವಾವಲಂಬನೆಯ ಬದುಕು ತಮ್ಮದಾಗಿಸಿಕೊಳ್ಳಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶೆ ಕಾವೇರಿ ಕಲ್ಮಠ ಹೇಳಿದರು.  

   ಅವರು ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯ ಈರಮ್ಮ ಬಸಪ್ಪ ಗಣಾಚಾರಿ ಮಹಿಳಾ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಾಂಸ್ಕೃತಿಕ ಹಾಗೂ ಕ್ರೀಡಾ ಮತ್ತು ಎನ್.ಎಸ್.ಎಸ್ ದೈನಂದಿನ ಚಟುವಟಿಕೆಗಳ ಮತ್ತು ತಾಲೂಕಾ ಕಾನೂನು ನೆರವು ಸೇವಾ ಸಮಿತಿಯ ಸೇವೆಗಾಗಿ ಸಂಪರ್ಕ ಹಾಗೂ ಅರಣ್ಯ ಇಲಾಖೆಯ ಸಹಯೋಗ  ವಿದ್ಯಾಥರ್ಿಗಳಿಗೆ ಸಸಿ ವಿತರಣೆ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಧಾನ ದಿವಾಣಿ ನ್ಯಾಯಾದೀಶೆ ಚೈತ್ರಾ.ಎ.ಎಮ್, ಸೌಭಾಗ್ಯ ಭೂಸೇರ ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯಗಳು ಶೋಷಣೆಗಳು ನಡೆದರೆ ತಾಲೂಕು ಕಾನೂನು ಸೇವಾ ಸಮಿತಿಯ ಮೊರೆ ಹೋಗಿ ನ್ಯಾಯವನ್ನು ಒದಗಿಸಿಕೊಳ್ಳಬೇಕೆಂದರು.

ವಲಯ ಅರಣ್ಯಾಧಿಕಾರಿ ಗಾಯತ್ರಿ ಲೋಕನ್ನವರ ಮಾತನಾಡಿ, ಪ್ರತಿ ವಿದ್ಯಾಥರ್ಿನಿಯರಿಗೆ ಸಸಿಗಳನ್ನು ನೀಡುವುದರ ಮೂಲಕ ಪರಿಸರವನ್ನು ಬೆಳೆಸಿ ಸಂರಕ್ಷಣೆ ಮಾಡಬೇಕೆಂದು ಕರೆ ನೀಡುವುದರೊಂದಿಗೆ ಒಂದು ಸಾವಿರ ಸಸಿಗಳನ್ನು ವಿದ್ಯಾಥರ್ಿಗಳಿಗೆ ವಿತರಿಸಿದರು.

ಪ್ರಾಚಾರ್ಯ  ಡಾ.ಸಿ.ಬಿ.ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಸಹಾಯಕ ಸರಕಾರಿ ಅಭಿಯೋಜಕ ರಂಜನಾ ಪಾಟೀಲ,  ಪ್ರಾಚಾರ್ಯ ಡಿ.ಬಿ.ಪಾಟೀಲ,  ವಕೀಲರಾದ ವಿಜಯಲಕ್ಷ್ಮೀ ಹಿರೇಮಠ, ಜಿ.ಎಸ್.ಆಲದಕಟ್ಟಿ ಎನ್.ಎಸ್.ಎಸ್ ಅಧಿಕಾರಿ ಆರ್.ಎಸ್.ಇಂಗಳಗಿ, ವ್ಹಿ.ಎಲ್.ಅಂಚಿ ಇದ್ದರು. ಡಿ.ಬಿ.ಪಾಟೀಲ ಸ್ವಾಗತಿಸಿದರು, ಎಸ್.ಆಯ್.ವೆಂಕಟಪ್ಪನವರ ನಿರೂಪಿಸಿದರು, ವ್ಹಿ.ಎಲ್.ಅಂಚಿ ವಂದಿಸಿದರು. ನಂತರ ವಿದ್ಯಾಥರ್ಿನಿಯರಿಂದ ವಚನಗಾಯನ ನೇರವೇರಿತು.

****