ಗಾಂಧಿ ಚಿಂತನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಅಗತ್ಯ
ಕೊಪ್ಪಳ 21: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಕಾಲೇಜು ಶಿಕ್ಷಣ ಇಲಾಖೆಯಆದೇಶದ ಮೇರೆಗೆ ಮಹಾತ್ಮಗಾಂಧೀಜಿಅಧ್ಯಕ್ಷತೆ ವಹಿಸಿದ್ದ 1924ರ ಬೆಳಗಾವಿ ಕಾಂಗ್ರೆಸ್‌ಅಧಿವೇಶನದ ಶತಮಾನೋತ್ಸವದ ಸಂದರ್ಭದಲ್ಲಿ "ಗಾಂಧಿ ಭಾರತ" ಎಂಬ ಕಾರ್ಯಕ್ರಮದಅಡಿಯಲ್ಲಿ ವಿದ್ಯಾರ್ಥಿಗಳಿಗಾಗಿ "ನಾವು ಮನುಜರು" ಎನ್ನುವಧ್ಯೇಯದೊಂದಿಗೆ ವಿವಿಧ ಸ್ಪರ್ಧೆಗಳನ್ನು ಏರಿ್ಡಸಲಾಗಿತ್ತು. ಗಾಂಧೀಜಿ ಚಿಂತನೆಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಸಕ್ತಕಾರ್ಯಕ್ರಮವನ್ನುರಾಷ್ಟ್ರೀಯ ಸೇವಾ ಯೋಜನೆಘಟಕ 1 ಮತ್ತು 2ರ ಸಹಯೋಗದೊಂದಿಗೆಆಯೋಜಿಸಲಾಗಿತ್ತು.ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನುಕೊಡಲಾಯಿತು.
ರಾಷ್ಟ್ರೀಯ ಸೇವಾ ಯೋಜನೆ ವಿಶ್ವವಿದ್ಯಾಲಯಘಟಕದಕಾರ್ಯಕ್ರಮ ಅಧಿಕಾರಿಗಳಾದ ಗಾಯತ್ರಿ ಭಾವಿಕಟ್ಟಿಅವರು ಪ್ರಾಸ್ತಾವಿಕವಾಗಿಕಾರ್ಯಕ್ರಮದಧ್ಯೇಯ ಹಾಗೂ ಉದ್ದೇಶವನ್ನುಕುರಿತು ಮಾತನಾಡಿದರು.ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದಡಾ.ಡಿ.ಎಚ್ ನಾಯ್ಕಅವರು ಮಹಾತ್ಮಗಾಂಧೀಜಿಯ ಚಿಂತನೆಗಳಾದ ಹೋರಾಟದ ಮಾರ್ಗವಾಗಿ ಸತ್ಯ ಮತ್ತುಅಹಿಂಸೆಯ ಮಹತ್ವ, ಗ್ರಾಮ ಸ್ವರಾಜ್ ಪರಿಕಲ್ಪನೆಯ ಪ್ರಸ್ತುತೆ ಇತ್ಯಾದಿಗಳನ್ನು ಕುರಿತು ಮಾತನಾಡಿದರು.
ಗಾಂಧೀಜಿ ಬೋಧಿಸಿದ ದೇಶದಅಭಿವೃದ್ಧಿ ಮತ್ತುಒಗ್ಗಟ್ಟಿಗೆ ಮಾರಕವಾದ ಏಳು ಸಾಮಾಜಿಕ ಪಾತಕಗಳಾದ ತತ್ವರಹಿತರಾಜಕಾರಣ, ದುಡಿಮೆಇಲ್ಲದ ಸಂಪತ್ತು, ಆತ್ಮಸಾಕ್ಷಿಇಲ್ಲದ ಸಂತೋಷ ,ಚಾರಿತ್ರ್ಯವಿಲ್ಲದ ಶಿಕ್ಷಣ , ನೀತಿಇಲ್ಲದ ವ್ಯಾಪಾರ, ಮಾನವೀಯತೆಇಲ್ಲದ ವಿಜ್ಞಾನ ಹಾಗೂ ತ್ಯಾಗವಿಲ್ಲದ ಪೂಜೆ ಇವುಗಳನ್ನು ಬೋಧಿಸಿದರು.
ರಾಷ್ಟ್ರೀಯ ಸೇವಾ ಯೋಜನೆ ಸ್ವಆರ್ಥಿಕಘಟಕದಕಾರ್ಯಕ್ರಮ ಅಧಿಕಾರಿಗಳಾದ ಡಾ.ಉಮೇಶ್‌ಅಂಗಡಿಕಾರ್ಯಕ್ರಮವನ್ನು ನೆರವೇರಿಸಿ ಕೊಟ್ಟರು.ನಂತರ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ದೇಶಭಕ್ತಿ ಗೀತೆಗಳ ಸ್ಪರ್ಧೆ ಹಾಗೂ ಏಕಪಾತ್ರಅಭಿನಯ ಸ್ಪರ್ಧೆಗಳನ್ನು ನಡೆಸಲಾಯಿತು.ಕಾಲೇಜಿನ ಬಿ.ಎ, ಬಿ.ಕಾಂ, ಬಿ.ಎಸ್ಸಿ , ಬಿ.ಬಿ.ಎ ಹಾಗೂ ಬಿ.ಸಿ.ಎ ಕೋರ್ಸಾ ಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂತೋಷ್‌ಕುಮಾರಿ, ಡಾ.ಗಿರಿಜಾತುರುಮುರಿಡಾ.ತುಕಾರಾಂ ನಾಯ್ಕ, ಡಾ. ಶಿವಬಸಪ್ಪ ಮಸ್ಕಿ, ಜ್ಞಾನೇಶ್ವರ ಪತ್ತಾರ್, ಗೋಣಿಬಸಪ್ಪ, ಮ್ಯಾದಾರಹಳ್ಳಿ ಸೋಮೇಶ್ ಮತ್ತುಗುರುಬಸವರಾಜ್ ಸ್ಪರ್ಧೆಗಳ ತೀಪುಗಾರರಾಗಿದ್ದರು. ಹಾಗೂ ಡಾ.ಪ್ರಕಾಶ್ ಬಳ್ಳಾರಿ ಡಾ.ಮಹಾಂತೇಶ್ ನೆಲಾಗಣಿ, ಶಿವಣ್ಣ, ಡಾ.ವಿಪ್ಲವಿ, ಮಲ್ಲೇಶಪ್ಪ, ವಸಂತಕುಮಾರ್, ನವೀನ್‌ಕುಮಾರ್ ಮೊದಲಾದ ಬೋಧಕ ವರ್ಗದವರುಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.