ವ್ಯಾಪಾರೋತ್ಸವ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳು
Students excelled in the Business Festival program
ವಿಜಯಪುರ 31: ವಿದ್ಯಾರ್ಥಿದೆಸೆಯಲ್ಲಿಯೇ ವಾಣಿಜ್ಯಶಾಸ್ತ್ರ ಪದವಿ ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗ, ವೃತ್ತಿಪರತೆ, ಪೈಪೋಟಿಯುಕ್ತ ಮಾರುಕಟ್ಟೆ, ತಂತ್ರಗಾರಿಕೆ, ಗ್ರಾಹಕ ವರ್ತನೆ, ಕೊಳ್ಳುವ ಶಕ್ತಿ ಮತ್ತು ವ್ಯವಹಾರಿಕ ಪರಿಸರದ ಬಗ್ಗೆ ಅರಿವು ಮೂಡಿಸುವದು ಅತಿ ಅವಶ್ಯಕ.
ವಾಣಿಜ್ಯ ಪದವಿ ಪಡೆದ ನಂತರ ವಿದ್ಯಾರ್ಥಿಗಳು ಯಾವುದೇ ಸ್ವಯಂ ಉದ್ಯೋಗ ಕೈಗೊಂಡು ಯಶಸ್ಸು ಹೊಂದಲೆಂಬ ಉದ್ಧೇಶದಿಂದ ವಿದ್ಯಾರ್ಥಿಗಳು ಮಾರಾಟ ಪ್ರಕ್ರಿಯೆ, ವಿಕ್ರಯಕಲೆ, ಮಾರುಕಟ್ಟೆಯಲ್ಲಿನ ಬೇಡಿಕೆ, ಮಾರಾಟದ ಕಲೆ-ಕೌಶಲ್ಯ ಮತ್ತು ವ್ಯವಹಾರಿಕ ಪರಿಸರದ ಬಗ್ಗೆ ಅರಿತುಕೊಳ್ಳುವಂತೆ ರೂಪಿಸುವ ನಿಟ್ಟಿನಲ್ಲಿ ದಿ. 28ರಂದು ಬಂಗಾರಮ್ಮ ಸಜ್ಜನ ಮಹಿಳಾ ಕಾಲೇಜಿನಲ್ಲಿ ಜರುಗಿದ ವ್ಯಾಪಾರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಗರದ ನವಭಾಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಬಿ.ಕಾಂ 5 ನೇಯ ಸೆಮೆಸ್ಟರ್‌ನ ವಿದ್ಯಾರ್ಥಿನಿಯರಾದ ದೀಪ್ತೀ ವಿಶ್ವಕರ್ಮ, ಸುಶ್ಮೀತಾ ಶಿರಹಟ್ಟಿ, ಶಂಕ್ರಮ್ಮ ನಾಗಠಾಣ, ಕಾವೇರಿ ಕಂಟೇನವರ ಮತ್ತು ಸೃಷ್ಠಿ ಗೋಂಧಳಿ ಇವರು ‘ನವಭಾಗ ಚಾಟ್ ಸೆಂಟರ್’ನ ಹೆಸರಿನ ಸ್ಟಾಲ್ ಹಾಕಿ, ಭೇಳ್, ಸ್ಪ್ರೌಟ್ಸ್, ಚಾಟ್ಸ್, ಅವಲಕ್ಕಿ ಮತ್ತು ಇನ್ನಿತರ ಆಹಾರ ಪದಾರ್ಥ ತಯಾರಿಸಿ, ಉತ್ತಮ ಮಾರುಕಟ್ಟೆಯ ತಂತ್ರಗಾರಿಕೆಯೊಂದಿಗೆ ವ್ಯಾಪಾರ ಮಾಡಿ ಮಾರುಕಟ್ಟೆಯ ಕೌಶಲ್ಯವನ್ನು ಪ್ರದರ್ಶಿಸಿದರು.
ಅದೇ ರೀತಿ ಬಿ,ಕಾಂ 5 ನೇಯ ಸೆಮೆಸ್ಟರ್‌ನ ವಿದ್ಯಾರ್ಥಿಗಳಾದ ಶ್ರೀಶೈಲ ಪಟ್ಟಣಶೆಟ್ಟಿ, ರಾಜಕುಮಾರ ಕನಮಸ, ಶಿವಪ್ಪ ಕೊಳಮಲಿ ಮತ್ತು ಖಾಜಾಅಮೀನ ಘೋರಿ ಇವರು ಪರಿಸರಾತ್ಮಕ ಪ್ರಜ್ಞೆ ಮೂಡಿಸಬೇಕೆಂಬ ಉದ್ಧೇಶದಿಂದ ಪರಿಸರ ಸ್ನೇಹಿ (ಬೆಸ್ಟ್ ಓಟ್ ಆಫ್ ವೇಸ್ಟ್) ಮಾದರಿ ರೀಡಿಂಗ್ ಲ್ಯಾಂಪ್ ತಯಾರಿಸಿದ್ದು ಪ್ರೇಕ್ಷಕರ ಗಮನ ಸೆಳೆಯಿತು.
ಈ ಎಲ್ಲ ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಐ.ಹಂಜಗಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಎಸ್,ಖೊದ್ನಾಪೂರ, ಡಾ. ಆಯ್.ಎಸ್.ಶಿವಶರಣರ, ಪ್ರೊ. ಆರ್.ಐ.ಜೋಗೂರ, ಪ್ರೊ. ವಲ್ಲಭ ಕಬಾಡೆ ಹಾಗೂ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 