ಹುನಗುಂದ19: ವಿದ್ಯಾರ್ಥಿಗಳು ಜೀವನದಲ್ಲಿ ಆದರ್ಶ ಗುರಿಯಿಟ್ಟುಕೊಂಡು, ಗುರುಗಳ ಮಾರ್ಗದರ್ಶನದಂತೆ ನಡೆದು ಜೀವನ ಸಾರ್ಥಕಗೊಳಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ತತ್ವಗಳನ್ನು ಅಳವಡಿಸಿಕೊಂಡು, ಗಟ್ಟಿಯಾದ ಮನಸ್ಸನ್ನು ಹೊಂದಿ ಕಾರ್ಯಪ್ರವೃತ್ತರಾದರೆ ಜೀವನದಲ್ಲಿ ಒಳ್ಳೆಯ ಮಾರ್ಗಗಳು ತೆರೆದುಕೊಳ್ಳುವದಕ್ಕೆ ಅವಕಾಶವಿದೆ ಎಂದು ಬಾಗಲಕೋಟೆಯ ಡಿವೈಎಸ್ಪಿ ಸುರೇಶರಡ್ಡಿ ಆಲೂರ ಅವರು ಹೇಳಿದರು.
ಸ್ಥಳೀಯ ವಿ.ಎಂ.ಎಸ್.ಆರ್.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 158ನೆಯ ಜಯಂತ್ಯೋತ್ಸವದ ಸಮಾರಂಭದ ಪ್ರಯುಕ್ತ ಹಮ್ಮಿಕೊಂಡು ರಾಷ್ಟ್ರೀಯ ಯುವ ಸಪ್ತಾಹದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಬುದ್ಧ-ಬಸವ-ಗಾಂಧೀಜಿ-ಅಂಬೇಡ್ಕರ್, ವಿವೇಕಾನಂದರು ತಮ್ಮ ಆದರ್ಶಗಳಿಂದ ಜಗತ್ತನ್ನು ಬೆಳಗಿದರು. ವಿದ್ಯಾಥರ್ಿಗಳು ಅವರ ದಾರಿಯಲ್ಲಿ ನಡೆದು ಜೀವನವನ್ನು ಪಾವನಗೊಳಿಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಅವರನ್ನು ಮಹಾವಿದ್ಯಾಲಯದ ಪರವಾಗಿ ಸನ್ಮಾನಿಸಲಾಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಶಶಿಕಲಾ ಮಠ ವಹಿಸಿಕೊಂಡು ಸ್ವಾಮಿ ವಿವೇಕಾನಂದರು ಯುವಕರ ಕಣ್ಮಣಿಯಾಗಿದ್ದರು. ಯುವಕರಿಗೆ ಎಂದೆಂದಿಗೂ ಸ್ಪೂತರ್ಿಯ ಚಿಲುಮೆಯಾಗಿದ್ದರು ಎಂದು ಅಭಿಪ್ರಾಯಪಟ್ಟರು. ಎನ್.ಎಸ್.ಎಸ್. ಅಧಿಕಾರಿಗಳಾದ ಡಾ.ತಿಪ್ಪೇಸ್ವಾಮಿ ಡಿ.ಎಸ್. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ.ಎನ್.ವಿ.ಪಾಟೀಲ ಅತಿಥಿಗಳನ್ನು ಪರಿಚಯಿಸಿದರು. ಪ್ರೊ.ಪಿ.ಸಿ.ಹಾದಿಮನಿ ಸ್ವಾಗತಿಸಿದರು. ಸವಿತಾ ಬಳ್ಳಾರಿ ಸಂಗಡಿಗರು ಪ್ರಾಥರ್ಿಸಿದರು. ಮಂಜುನಾಥ ಮಾದರ ವಂದಿಸಿದರು. ಶಕುಂತಲಾ ಸಂಗಮ ನಿರೂಪಿಸಿದರು.