ವಿದ್ಯಾಥರ್ಿಗಳು ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: ಕರಡಿ

ಕೊಪ್ಪಳ: ಸ್ವಾಮಿ ವಿವೇಕಾನಂದರು ವಿಶ್ವ ಕಂಡ ಶ್ರೇಷ್ಠ ಸಂತರಾಗಿದ್ದು, ಅವರ ತತ್ವಾದರ್ಶಗಳನ್ನು ವಿದ್ಯಾಥರ್ಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಹೇಳಿದರು.    

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಚಿಕ್ಯಾಗೋ ಉಪನ್ಯಾಸದ 125ನೇ ವಷರ್ಾಚರಣೆಯ ಅಂಗವಾಗಿ ನಗರದ ಸಾಹಿತ್ಯ ಭವನದಲ್ಲಿ ಮಂಗಳವಾರದಂದು ಏರ್ಪಡಿಸಿದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಮನುಷ್ಯನಲ್ಲಿ ಏಕಾಗ್ರತೆ ಇದ್ದಲ್ಲಿ ಯಶಸ್ಸು ಸಿಗುತ್ತದೆ.  ವಿವೇಕಾನಂದರು ಚಿಕ್ಯಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಭಾರತದ ಸನಾತನ ಸಂಸ್ಕೃತಿಯನ್ನು ಎತ್ತಿ ಹಿಡಿದು, ಇಡೀ ವಿಶ್ವವೇ ನಿಬ್ಬೆರಗಾಗಿ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದವರು.  ವಿವೇಕಾನಂದರನ್ನು ನಾವು ಕೇವಲ ವೀರ ಸನ್ಯಾಸಿ ಎಂದಷ್ಟೆ ಕರೆಯುತ್ತೇವೆ.  ಆದರೆ ಚಿಕ್ಯಾಗೋ ಸಮ್ಮೇಳನದಲ್ಲಿ ಅವರ ಭಾಷಣವನ್ನು ಮೆಚ್ಚಿಕೊಂಡ ವಿದೇಶಿಯರು ಅವರನ್ನು ಹಿಂದೂ ನೆಪೋಲಿಯನ್ ಎಂದು ಕರೆದಿದ್ದಾರೆ.  ಕೊಲಂಬಸ್ ಬರೀ ಅಮೇರಿಕವನ್ನು ಮಾತ್ರ ಕಂಡು ಹಿಡಿದೆರೆ.  ಸ್ವಾಮಿ ವಿವೇಕಾನಂದರವರು ಅಮೇರಿಕದ ಆತ್ಮವನ್ನು ಕಂಡುಹಿಡಿದಂತ ಮಹಾನುಭಾವರಾಗಿದ್ದಾರೆ.  ಅವರ ತತ್ವಾಧರ್ಶಗಳನ್ನು ವಿದ್ಯಾಥರ್ಿಗಳು ಪಾಲಿಸಿದ್ದಲ್ಲಿ ಉತ್ತಮ ಜ್ಞಾನಿಗಳಾಗುವಿರಿ ಆಗ ವಿವೇಕಾನಂದರ ಭವ್ಯ ಭಾರತದ ಕನಸು ನನಸಾಗಲು ಸಾಧ್ಯವಾಗುತ್ತೆ ಎಂದು ಸಂಸದ ಸಂಗಣ್ಣ ಕರಡಿ ಅವರು ಹೇಳಿದರು. 

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಭಾರತದ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಪರಿಚಯಿಸಿ, ನಮ್ಮ ದೇಶದ ಸಂಸ್ಕೃತಿಯ ಶ್ರೇಷ್ಠತೆಯನ್ನು ವಿಶ್ವದ ಮುಂದೆ ಬಿತ್ತರಿಸಿದ ಮಹನೀಯ ಸ್ವಾಮಿ ವಿವೇಕಾನಂದರು.  ಯುವಕರು ವಿಶ್ವದಲ್ಲಿ ಅತೀ ಶ್ರೇಷ್ಠವಾದ ಮಹನೀಯರನ್ನು ದಿನಕ್ಕೆ ಒಂದು ಸಲವಾದರೂ ಬೇಟಿ ನೀಡಿದರೆ ನೀವು ಕೂಡ ಅವರಂತೆ ಎತ್ತರಕ್ಕೆ ಬೆಳೆದು ಶ್ರೆಷ್ಠ ವ್ಯಕ್ತಿಗಳಾಗುವಿರಿ ಎಂದು ಕಿವಿ ಮಾತನ್ನು ಹೇಳಿದ್ದಾರೆ.  ಜೊತೆಗೆ ವಿಕಾಸವೇ ಜೀವನ ಸಂಕೋಚವೇ ಮರಣ.  ಮನುಷ್ಯನಾದವನು ಯಾವಾಗಲೂ ವಿಕಾಸದತ್ತ ಹೆಜ್ಜೆ ಹಿಡಬೇಕು ಎಂಬ ಅನೇಕ ತತ್ವಗಳನ್ನು ಸಾರಿದ್ದು, ಅವರ ಹಾದಿಯಲ್ಲಿ ಎಲ್ಲರೂ ನಡೆಯಬೇಕಿದೆ ಎಂದರು.  

ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಅವರು ಮಾತನಾಡಿ, ಭಾರತದ ತತ್ವ ಸಿದ್ಧಾಂತಗಳನ್ನ, ಸಂಸ್ಕೃತಿಯನ್ನ ಹಾಗೂ ನಮ್ಮ ದೆಶದ ಘನತೆಯನ್ನ ವಿಶ್ವದ ಮುಂದೆ ಎತ್ತಿ ಹಿಡಿದಂತ ಏಕೈಕ ವ್ಯಕ್ತಿ ಎಂದರೆ ಸ್ವಾಮಿ ವಿವೇಕಾನಂದರು ಮಾತ್ರ.  ವಿದ್ಯಾಥರ್ಿಗಳು ದೇಶಭಕ್ತಿಯನ್ನು ಬೆಳೆಸಿಕೊಳ್ಳಬೆಕು.  ವಿವೇಕಾನಂದರು ಸಾರಿದ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಭಾರತದ ಶ್ರೇಷ್ಠತೆಯನ್ನು ಎತ್ತಿ ಹಿಡಿಯಲು ಮುಂದಾಗಬೇಕು ಎಂದರು. 

ಉಪವಿಭಾಗಾಧಿಕಾರಿ ಸಿ.ಡಿ. ಗೀತಾ ಅವರು ಮಾತನಾಡಿ, ವಿದ್ಯಾಥರ್ಿಗಳ ಜೀವನದಲ್ಲಿ ತಾಳ್ಮೆ, ಸಹನೆ, ಏಕಾಗ್ರತೆ ಬಹುಮುಖ್ಯವಾಗಿ ಇರಲೇಬೇಕು.  ಇಂದಿನ ತಂತ್ರಜ್ಞಾನದ ದಿನಗಳಲ್ಲಿ ಟಿವಿ, ಮೊಬೈಲ್ ಗಳಿಗೆ ಹೊಂದಿಕೊಂಡಿರುವ ನಾವು ಅವುಗಳಿಂದ ಆಚೆ ಬಂದು ವಿವೇಕಾನಂದರಂತೆ ಯೋಗ, ದ್ಯಾನ ಮಾಡಿ ಅವರಂತೆ ಏಕಾಗ್ರತೆಯನ್ನು ನಮ್ಮ ಜೀವನದಲ್ಲಿ ಬೇಳೆಸಿಕೊಂಡು ಚಚರ್ಾಸ್ಪಧರ್ೆ, ಕ್ರೀಡೆ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಕೊಪ್ಪಳದ ರಾಮಕೃಷ್ಣ ಆಶ್ರಮದ ಪ.ಪೂ ಚೈತನ್ಯಾನಂದ ಮಹಾಸ್ವಾಮಿಗಳು ಅವರು ವಿಶೇಷ ಉಪನ್ಯಾಸ ನೀಡಿ, ಯುವಪಿಳಿಗೆಗೆ ಹಾಗೂ ಸಾರ್ವಜನಿಕರಿಗೆ ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಜೀವನ ಮೌಲ್ಯಗಳನ್ನು ಹಾಗೂ ವಿಶ್ವಶಾಂತಿ ಮತ್ತು ವಿವಿಧತೆಯಲ್ಲಿ ಏಕತೆಯ ಬಗ್ಗೆ ಚಿಕ್ಯಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಮಾಡಿರುವ ಭಾಷಣದ ತುಣುಕುಗಳನ್ನು ವಿವರಿಸಿದರು.  

ಸಮಾರಂಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕ ಆರ್.ಜಿ. ನಾಡಗೀರ, ಸ್ಕೌಟ್ಸ್ ಗೈಡ್ಸ್ ಅಧಿಕಾರಿ ಮಲ್ಲೇಶ್ವರಿ ಗಾದಿರ್ಲಿಂಗಪ್ಪ, ಗಣ್ಯರಾದ ಶಿವಾನಂದ ಹೊದ್ಲೂರು, ಮಂಜುನಾಥ ಗೊಂಡಬಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.  ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂತಿ ದೇಸಾಯಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.