ವಿದ್ಯಾರ್ಥಿಗಳೆ ನ್ಯಾಯ ಓದಗಿಸಿ ಕೊಡಿ: ಪ್ರಕಾಶ ಅವಲಕ್ಕಿ ಅಭಿಮತ
Students, please teach them justice: Prakash Avalakki's opinion
ಲೋಕದರ್ಶನ ವರದಿ
ಯಮಕನಮರಡಿ 20: ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗಿ ಸಾಧಕರಾಗಿ ಕಾಲೇಜಿಗೆ ತಮ್ಮ ಕುಟುಂಬಕ್ಕೆ ಕೀರ್ತಿ ದಯಪಾಲಿಸಬೇಕು ಮೊಬೈಲ್ ಮುಖಾಂತರ ಅಪಾಯಕಾರಿಯಾದ ರೀಲ್ಸನ್ನು ಮಾಡದೆ ತಮ್ಮ ಮೇಲೆ ಭರವಸೆ ಇಟ್ಟ ತಂದೆ ತಾಯಿಗೆ ನ್ಯಾಯ ಒದಗಿಸಿದರೆ ಅದುವೆ ನೀವು ಮಾಡುವ ಪರೋಪಕಾರ ಎಂದು ಕಸಾಪ ಅಧ್ಯಕ್ಷ ಪ್ರಕಾಶ ಅವಲಕ್ಕಿಯವರು ಹೇಳಿದರು. ಅವರು ಸಂಕೇಶ್ವರದ ಎಸ್ ಡಿ ವ್ಹಿ ಸಂಘದ ಬಿ ಬಿ ಎ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾದ ಪಾರಿತೋಷಕ ವಿತರಿಸಿ ವಿದ್ಯಾರ್ಥಿಗಳನ್ನು ಉದ್ದೆಶಿಸಿ ಮಾತನಾಡಿದರು.
ಅಧ್ಯಕ್ಷತೆವಹಿಸಿದ ಸಂಘದ ಕಾರ್ಯದರ್ಶಿಗಳಾದ ಜಿ ಸಿ ಕೋಟಗಿ ಅವರು ಮಾತನಾಡಿ ಇಂದಿನ ವಿದ್ಯಾರ್ಥಿಗಳು ಪಾಶ್ಚಾತ್ಯ ಸಂಸ್ಕೃತಿಗೆ ಅಂಟಿಕೊಳ್ಳಲಾರದೆ ರಾಮಾಯಣ ಮಹಾಭಾರತದ ಆದರ್ಶ ಪಾತ್ರಗಳ ಪ್ರೇರಣೆ ನಿಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬದುಕನ್ನು ಸಾರ್ಥಕ ಮಾಡಿಕೊಳ್ಳಿ ಎಂದು ಹಿತ ವಚನ ನೀವೆದಿಸಿದರು. ಸಂಘದ ಆಡಳಿತಗಾರರಾದ ಬಿ ಎ ಪೂಜಾರ. ಪ್ರಾಚಾರ್ಯ ಸಂತೋಷ ತೆರಣಿಮಠ ಕಾಲೇಜಿನ ಸಿಬ್ಬಂದಿವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳು ಕೂಡ ಹುಕ್ಕೇರಿಯ ಕಸಾಪದ ಪರವಾಗಿ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗು ಗ್ರಂಥ ನೀಡಿ ಗೌರವಿಸಿದರು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 