ಬೆಸ್ಟ್‌ ಟ್ಯಾಲೆಂಟ್ ಏಕ್ಸಾಮ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ

Students' performance in the Best Talent Exam

ತಾಳಿಕೋಟಿ 08: ಪಟ್ಟಣದ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆಯ  ಬೆಸ್ಟ ಪಿಯು  ಸೈನ್ಸ  ಕಾಲೇನಲ್ಲಿ  ದಿ. 07ರಂದು  ಬೆಸ್ಟ ಟ್ಯಾಲೆಂಟ್ ಏಕ್ಸಾಂನ್ನು  ಏರಿ​‍್ಡಸಲಾಗಿತ್ತು. ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ,  ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.   

ಪ್ರಥಮ ಸ್ಥಾನ  ಪಡೆದ ವಿದ್ಯಾರ್ಥಿನಿ ಲಕ್ಷ್ಮೀ ಚೌಧರಿ, ದ್ವಿತೀಯ ಸ್ಥಾನ ಪಡೆದ  ವಿದ್ಯಾರ್ಥಿಗಳಾದ  ಗಗನಸಿಂಗ,  ಜೆ ಮೂಲಿಮನಿ ಹಾಗೂ ಕುಮಾರ  ಪ್ರಭುಲಿಂಗ  ಎಸ್ ಚೌದ್ರಿ, ತೃತೀಯ  ಸ್ಥಾನ ಪಡೆದ  ವಿದ್ಯಾರ್ಥಿಗಳಾದ  ಕುಮಾರ ರೋಹಿತ  ಕುಂಬಾರ, ಕುಮಾರಿ  ವೀಣಾ .ಎಸ್ ಹಿರೇಮಠ  ಈ ಎಲ್ಲಾ ವಿದ್ಯಾರ್ಥಿಗಳಿಗೆ  ನಗದು ಬಹುಮಾನ  ವಿತರಣೆ ಮಾಡಿ ಜೊತೆಗೆ  ಉಚಿತ  ಪ್ರವೇಶವನ್ನು  ನೀಡುವುದಾಗಿ  ಸಂಸ್ಥೆಯ ಮುಖ್ಯ ಕಾರ್ಯದರ್ಶಿಗಳಾದ  ವಿವೇಕಾನಂದ ಎಸ್  ಸಜ್ಜನ  ಅವರು  ತಿಳಿಸಿದರು.   

ಈ ಸಂದರ್ಭದಲ್ಲಿ  ಕಾಲೇಜಿನ ಪ್ರಾಂಶುಪಾಲರಾದ  ಬಿ.ಎಸ್ ಮಾಲಿಪಾಟೀಲ್, ಉಪಪ್ರಾಂಶುಪಾಲರಾದ  ಎಮ್ ಮಾರಣ್ಣ ಘನಮಠೇಶ್ವರ ಆಂಗ್ಲ ಮಾಧ್ಯಮದ ಪ್ರಾಂಶುಪಾಲರಾದ ಬಸವರಾಜ ಸಜ್ಜನ  ಅವರು ಉಪಸ್ಥಿತರಿದ್ದರು.  ಶಿಕ್ಷಕರಾದ ಕಲ್ಮೇಶ ಅವರು ನಿರೂಪಣೆ ಮಾಡಿದರು.