ವಿದ್ಯಾರ್ಥಿಗಳ ಜೀವನ ನಿರ್ವಹಣೆ ಆತ್ಮದಲ್ಲಿ ಅಡಗಿದೆ: ಪ್ರೊ. ನಾವಿ
Students' life management lies within the soul: Prof. Navi
ಲೋಕದರ್ಶನ ವರದಿ
ಬೆಳಗಾವಿ 06: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜೀವನಾತ್ಮಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯತೆ ಇದೆ ಮತ್ತು ಅವರ ಜೀವನ ನಿರ್ವಹಣೆ ಅವರ ಆತ್ನದಲ್ಲಿ ಅಡಗಿದೆ ಎಂದು ಕಿತ್ತೂರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಬಿ. ಎಸ್. ನಾವಿಯವರು ಅಭಿಪ್ರಾಯ ಪಟ್ಟರು.
ಸಂಕೇಶ್ವರದ ಎಸ್.ಡಿ.ವ್ಹಿ.ಎಸ್. ಸಂಘದ ಲ. ಕ. ಖೋತ ವಾಣಿಜ್ಯ ಮಹಾವಿದ್ಯಾಲಯ ಕಿತ್ತೂರ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪಂ. ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ಸಹಯೋಗದೊಂದಿಗೆ ವಾಣಿಜ್ಯ ವಿಭಾಗದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಒಂದು ದಿನದ ಜೀವನ ಕೌಶಲ್ಯಗಳ ನಿರ್ವಹಣೆ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಯುವಕರು ಜೀವನದಲ್ಲಿ ತಾಳ್ಮೆಯಂದಿಗೆ ಸಮಯ ನಿರ್ವಹಣೆ, ಸಂವಹನ ಕೌಶಲಗಳನ್ನು ಕಲಿಯುವುದು ಅತ್ಯವಶ್ಯವಾಗಿದೆ ಎಂದು ಹೇಳಿದರು.
ಕಾರ್ಯಾಗಾರದ ಮೊದಲನೇ ಗೋಷ್ಠಿಯಲ್ಲಿ ಪುಣೆಯ ನಿವೃತ್ತ ಭಾರತೀಯ ವ್ಯವಸ್ಥಾಪನಾ ಸಂಸ್ಥೆಯ ಪ್ರೊ. ರಾಘವನ ಅಯ್ಯಂಗಾರ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿದ್ಯಾರ್ಥಿಗಳ ಜೀವನ ನಿರ್ವಹಣೆ ಯುವ ಜನಾಂಗದ ಅಂತರಂಗದಲ್ಲಿದೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಜಿ. ಸಿ. ಕೋಟಗಿ ಅಧ್ಯಕ್ಷೀಯ ಪರ ನುಡಿಗಳನ್ನಾಡಿದರು. ವೇದಿಕೆಯ ಮೇಲೆ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಕುಂತಲಾ ಮಡಿವಾಳಪ್ಪಗೋಳ, ಅಂತರಿಕ ಗುಣಮಟ್ಟ ಕೋಶದ ಸಂಯೋಜಕ ಡಾ. ಡಿ. ಡಿ. ಕುಲಕರ್ಣಿ, ಅಧ್ಯಯನ ಪೀಠದ ಸಂಶೋಧನೆ ಅಧಿಕಾರಿ ಡಾ. ಶಿವಲೀಂಗಯ್ಯ ಗೋಠೆ ಸಂಶೋಧನಾ ಸಹಾಯಕ ಯಲ್ಲಪ್ಪ ಮೂಡಲಗಿ ಉಪಸ್ಥಿತರಿದ್ದರು. ಮಿಸ್ ಶ್ವೇತಾ ಢಂಗಿ ನಿರೂಪಿಸಿದರು ಮೋಹನ ಕಾಂಬಳೆ ವಂದಿಸಿದರು. ಮಹಾವಿದ್ಯಾಲಯದ ಬೋಧಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 