ಟಿಪ್ಸ್ ಕೇಳಿದ ವಿದ್ಯಾರ್ಥಿ, ಉತ್ತರಿಸಿದ ಪ್ರಧಾನಿ....!

ಬೆಂಗಳೂರು, ಸೆ 7:  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ - ಇಸ್ರೋ  ಮಹತ್ವಾಕಾಂಕ್ಷೆಯ ಚಂದ್ರಯಾನ -2  ಪ್ರಯೋಗವನ್ನು  ಖುದ್ದು ಕಣ್ತುಂಬಿಕೊಳ್ಳಲು  ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ  ಆಗಮಿಸಿದ್ದರು. 

 ವಿಕ್ರಂ ಲ್ಯಾಂಡರ್   ಚಂದ್ರನ ಮೇಲೈನ  ಇಳಿಸುವುದನ್ನು  ವೀಕ್ಷಿಸಲು  ಪ್ರಧಾನಿ ಮೋದಿಯವರೊಂದಿಗೆ ಸುಮಾರು 70 ವಿದ್ಯಾರ್ಥಿಗಳು ಇಸ್ರೋ ಕೇಂದ್ರದಲ್ಲಿ  ಭಾಗವಹಿಸಿದ್ದರು.  ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್  ಇಳಿಸುವ  ಪ್ರಯೋಗ ವಿಫಲವಾಗಿದೆ ಎಂದು ತಿಳಿದ ನಂತರ ಮೋದಿ   ಅಲ್ಲಿಂದ ಹೊರಡಲು ಸಿದ್ಧರಾಗಿದ್ದರು.  

ಆ ಸಂದರ್ಭದಲ್ಲಿ  ಅಲ್ಲಿದ್ದ ವಿದ್ಯಾರ್ಥಿಗಳೊಂದಿಗೆ  ಪ್ರಧಾನಿ ಮೋದಿ ಸ್ವಲ್ಪ ಸಮಯ ಸಂವಾದ ನಡೆಸಿದರು. ಆಗ  ವಿದ್ಯಾರ್ಥಿಯೊಬ್ಬ  ಮೋದಿಜಿ.. ನಾನು  ದೇಶದ  ರಾಷ್ಟ್ರಪತಿಯಾಗಬೇಕು ಎಂಬ ಆಸೆಯಿದೆ. ನಾನು ಏನು ಮಾಡಬೇಕು ಎಂದು  ಹೇಳುತ್ತಿರಾ ಎಂದು ಪ್ರಶ್ನಿಸಿದ.  ಮೋದಿ  ರಾಷ್ಟ್ರಪತಿಏಕೆ?   ದೇಶದ ಪ್ರಧಾನ ಮಂತ್ರಿ ಆಗಬಹುದಲ್ಲವೆ ..? ಎಂದು  ಪ್ರಶ್ನಿಸಿದರು.  ನಂತರ  ಮೋದಿ,  ವೈಫಲ್ಯ ಎದುರಾದಾಗ   ಕುಗ್ಗಿಹೋಗದೆ, ಆತ್ಮವಿಶ್ವಾಸ ಮತ್ತು ಪರಿಶ್ರಮದಿಂದ   ಮತ್ತೆ  ಪ್ರಯತ್ನಿಸಿದರೆ, ನೀವು ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂದು   ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 

ಇಸ್ರೋನ ಮಹತ್ವಾಕಾಂಕ್ಷೆಯ ಚಂದ್ರಯಾನ -2  ಬಾಹ್ಯಕಾಶ  ಅಭಿಯಾನ    ಕೊನೆಯ ಗಳಿಗೆಯಲ್ಲಿ ವಿಫಲವಾದ ಕಾರಣ  ದೇಶ ತೀವ್ರ ನಿರಾಶೆಗೊಂಡಿದೆ.  ಇಂತಹ  ಸಂಕಷ್ಟದ   ಸನ್ನಿವೇಶಗಳಲ್ಲಿ   ಪ್ರಧಾನಿ ಮೋದಿ  ಸೇರಿದಂತೆ  ದೇಶದ ಜನರೆಲ್ಲ  ವಿಜ್ಞಾನಿಗಳನ್ನು  ಬೆಂಬಲಿಸುತ್ತಿದ್ದಾರೆ. ನೀವು ಸಾಧಿಸಿರುವ  ಯಶಸ್ಸು ಸಣ್ಣದಲ್ಲ ಎಂದು ಅವರಿಗೆ ಧೈರ್ಯ ತುಂಬುತ್ತಿದ್ದಾರೆ.