ವಿದ್ಯಾರ್ಥಿ, ಎಸ್‌ಡಿಎಂಸಿ ಪದಾಧಿಕಾರಿಗಳು ಕಾರ್ಯಾಲಯಕ್ಕೆ ಕೀಲಿ ಜಡಿದು ಪ್ರತಿಭಟನೆ
Student and SDMC office-bearers stage protest by locking the office
ಶಿಕ್ಷಕರೊಬ್ಬರನ್ನು ಬೇರೆ ಶಾಲೆಗೆ ನಿಯೋಜನೆ ಖಂಡಿಸಿ
ಲೋಕದರ್ಶನ ವರದಿ
ಜಮಖಂಡಿ 25: ಶಿಕ್ಷಕರೊಬ್ಬರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಿದ ಹಿನ್ನಲೆ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಶಾಲೆಯ ಮುಂಭಾಗದಲ್ಲಿ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನಿರಿಸಿ ಘೋಷಣೆ ಕೂಗಿ ಶಾಲಾ ಮಕ್ಕಳು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ನಗರದ ಮಹಾಲಿಂಗೇಶ್ವರ ಕಾಲೋನಿಯ ಜಯನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ, ಸರ್ವ ಸದಸ್ಯರು ಹಾಗೂ ಪಾಲಕರು ಶಾಲೆಯ ಕಾರ್ಯಾಲಯಕ್ಕೆ ಕೀಲಿ ಜಡೆದು ಮಕ್ಕಳೊಂದಿಗೆ ಪ್ರತಿಭಟನೆ ನಡೆಸಿದರು. ಅಧ್ಯಕ್ಷ ಶಬ್ಬೀರ ಅಪರಾದ ಮಾತನಾಡಿ, ಈ ಶಾಲೆಯಲ್ಲಿ ಎಸ್.ಎಸ್.ಹಿರೇಮಠ ಪ್ರಭಾರಿ ಮುಖ್ಯಗುರುಗಳಾಗಿ ಹಲವಾರು ವರ್ಷಗಳ ಕಾಲ ಶಾಲೆಯ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದಾರೆ.
ಬಂದ ಅನುದಾನ ಸಮರ್ಕವಾಗಿ ಬಳಕೆ ಮಾಡಿಕೊಂಡು ಕೊಠಡಿ, ಕಂಪೌಂಡ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದ್ದಾರೆ. ನಾನು ಕೂಡಾ ಶಾಲೆಯ ಅಭಿವೃದ್ಧಿ ಕೆಲಸಕ್ಕೆ ನನ್ನ ಸ್ವಂತ ಹಣ ನೀಡಿದ್ದೇನೆ ನನ್ನ ಮತ್ತು ಅವರ ಕಾರ್ಯವೈಖರಿಯನ್ನು ಸಹಿಸದೆ ಇಬ್ಬರೂ ಶಿಕ್ಷಕರ ಸಹಾಯದಿಂದ ಉಪಾಧ್ಯಕ್ಷರು ಕೆಲ ಸದಸ್ಯರ ನಕಲಿ ಸಹಿಗಳನ್ನು ಮಾಡಿ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ಹಿರೇಮಠ ಶಿಕ್ಷಕರ ವಿರುದ್ಧ ಇಲ್ಲಸಲ್ಲದ ಆರೋಪ ಮತ್ತು ಹಣ ದುರುಪಯೋಗ ಮಾಡಿಕೊಂಡಿದ್ದಾರೆಂದು ಮನವಿ ನೀಡಿದ್ದಾರೆ. ಇದರಿಂದ ಎಸ್.ಎಸ್. ಹಿರೇಮಠ ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜನೆ ಮಾಡಿದ್ದಾರೆ. ಇದರಿಂದ ಮಕ್ಕಳು ರೊಚ್ಚಿಗೆದ್ದು ಪ್ರತಿಭಟನೆಗಿಳಿದಿದ್ದಾರೆ ಎಂದು ತಿಳಿಸಿದರು.
ಎಸ್.ಡಿ.ಎಂ.ಸಿ ಸದಸ್ಯೆ ಶಹಜಾದ ಕೌಜಲಗಿ ಮಾತನಾಡಿ, ಶಾಲೆಯ ಅನುದಾನದಲ್ಲಿ ಸ್ವಲ್ಪ ಹಣ ಮತ್ತು ಮೊಟ್ಟೆ ಕೊಡುವಂತೆ ಹಿರೇಮಠ ಶಿಕ್ಷಕರಲ್ಲಿ ಉಪಾಧ್ಯಕ್ಷೆ ಕೇಳಿದ ಹಿನ್ನಲೆಯಲ್ಲಿ ಅವರು ಅದಕ್ಕೆ ಸ್ಪಂದಿಸದ ಕಾರಣ ಹಣ ದುರುಪಯೋಗದ ಗಂಭೀರ ಆರೋಪ ಮಾಡುತ್ತಿದ್ದಾರೆ. ಅವರಿಂದ ಶಾಲಾ ವ್ಯವಸ್ಥೆ ಹದಗೆಡುತ್ತಿದೆ. ಒಳ್ಳೆಯ ಶಿಕ್ಷಕರು ನಮ್ಮ ಶಾಲೆಯಿಂದ ಹೊರಗೆ ಹೋಗುವಂತಾಗಿದೆ. ಇದರಿಂದ ಮಕ್ಕಳ ಪಾಠ ಬೋಧನೆಗೆ ತೊಂದರೆ ಉಂಟಾಗುತ್ತಿದೆ ಮತ್ತು ಶಾಲಾ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು.
ಪತ್ರಕರ್ತರ ಸೋಗಿನಲ್ಲಿ ಬಂದು 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ 