11 ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಹೋರಾಟ

11 ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಹೋರಾಟ  Struggle for establishment of government medical college enters 11th day

ವಿಜಾಪುರ 29: 11 ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅನಿರ್ಧಿಷ್ಟ ಧರಣಿಗೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ   ಎಮ್‌.ಬಿ ಪಾಟೀಲ ರವರು ಮಾತನಾಡುತ್ತಾ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಸುಸಜ್ಜಿತ ಜಾಗ ಇದೆ ಅರ್ಧ ಕರ್ಚಿನಲ್ಲಿ ಬಿಜಾಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಾಡಬಹುದು, ನಿಮ್ಮ ಬೇಡಿಕೆ ಮತ್ತು ಭಾವನೆಗಳನ್ನು ತೆಗೆದುಕೊಂಡು   ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ ಪಾಟೀಲ ಅವರೊಂದಿಗೆ ಮಾತನಾಡಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ನನ್ನ ಜಿಲ್ಲೆಯಲ್ಲಿ ಬಡ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಕೊಡಿಸಲು ಪ್ರಯತ್ನಿಸಿದ್ದೇನೆ ಎಂದು ಹೇಳಿದರು. 

ವೀರಶೈವ ಮಹಾಸಭಾದ ಅಧ್ಯಕ್ಷರು ವಿ.ಸಿ, ನಾಗಠಾಣ ರವರು ಮಾತನಾಡುತ್ತಾ ಸಮಸ್ಯೆಗಳು ಬಂದಾಗ ಒಗ್ಗಟ್ಟಾಗಿ ಹೋರಾಟ ಮಾಡೋಣ, ಜನಗಳ ಹಿತಾಸಕ್ತಿ ಕಾಪಾಡುವುದೇ ಜನಪ್ರತಿನಿಧಿಗಳ ಕೆಲಸ, ಜನರ ಅವಶ್ಯಕತೆಗಳನ್ನು ಅರಿತು ಅವರು ಕಾರ್ಯ ನಿರ್ವಹಿಸಬೇಕು ಎಂದರು. 

ವೈ ವೈ ಹಿಪ್ಪರಗಿ ಜಿಲ್ಲಾಧ್ಯಕ್ಷರು ಅಖಿಲ ಕರ್ನಾಟಕ ಕುಳರಿನ ಮಹಾಸಂಘ ಇವರು ಮಾತನಾಡುತ್ತಾ ಸರ್ಕಾರಿ ಕಾಲೇಜು ನಮ್ಮ ಉತ್ತರ ಕರ್ನಾಟಕದ ಜನತೆಗೆ ಬಹಳ ಅವಶ್ಯಕತೆ ಇದೆ. ನಮ್ಮ ಸಂಘ ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಹೇಳಿದರು. 

ಹೋರಾಟ ಸಮಿತಿ ಸದಸ್ಯರುಗಳಾದ ಅರವಿಂದ ಕುಲಕರ್ಣಿ, ಭಗವಾನ್ ರೆಡ್ಡಿ, ಅಪ್ಪಸಾಹೇಬ ಯರನಾಳ, ಅನಿಲ ಹೊಸಮನಿ, ಲಲಿತಾ ಬಿಜ್ಜರಗಿ, ಕೆ ಎಫ್ ಅಂಕಲಗಿ, ವಿದ್ಯಾವತಿ ಅಂಕಲಗಿ, ಸುರೇಶ ಬಿಜಾಪುರ, ಸುರೇಶ್ ಜೀಬಿ,ಲಕ್ಷ್ಮಣ ಹಂದ್ರಾಳ, ಶ್ರೀನಾಥ ಪೂಜಾರಿ, ಮಲ್ಲಿಕಾರ್ಜುನ ಬಟಗಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಹೆಚ್ ಟಿ,ಫಯಾಜ್ ಕಲಾದಗಿ,ಅಬ್ದುಲ ರಹಮಾನ್ ನಾಸಿರ್, ಜ್ಯೋತಿ ಮಿಣಜಗಿ, ಸಿದ್ದರಾಮ ಹಳ್ಳೂರ, ಜಯದೇವ ಸೂರ್ಯವಂಶಿ,ಗೀರೀಶ ಮಲ್ಲಿಕಾರ್ಜುನ ಹೆಚ್ ಟಿ, ಶಿವಬಾಳಮ್ಮ ಕೊಂಡಗೂಳಿ,ದಸ್ತಗಿರಿ ಉಕ್ಕಲಿ, ಲಕ್ಷ್ಮೀಬಾಯಿ, ಕಸ್ತೂರಿ ದೊಡ್ಡಮನಿ, ಗೀರೀಶ್ ಕಲಘಟಗಿ, ಪೂಜಾ ಜೋಮಿವಾಲೇ, ಕಾಮಿನಿ ಕಸಬ,ಮೀನಾಕ್ಷಿ ಸಿಂಗೆ, ಲಕ್ಷ್ಮಣ ಕಂಬಾಗಿ, ಸಿದ್ದನಗೌಡ ಪಾಟಿಲ,ಬಾಬುರಾವ ಬೀರಕಬ್ಬಿ, ಅಕ್ರಮ ಮಾಶಳಕರ, ಸಂಗಮೇಶ್ ಸಗರ,ಸುನಂದಾ ರಾಥೋಢ ಸಿದ್ರಾಮಯ್ಯ ಹಿರೇಮಠ, ಬಸವರಾಜ ಸುತ್ತುಗುಂಡಿ, ಬೋಗೇಶ್ ಸೋಲಾಪುರ್, ಗೀತಾ ಎಚ್, ಮಹದೇವಿ ಧರ್ಮಶೆಟ್ಟಿ, ಕಾವೇರಿ ರಜಪೂತ, ಗೀತಾ ಕಟ್ಟಿ ಗೀತಾ ಪಾಟೀಲ,ನೀಲಾಂಬಿಕಾ ಬಿರಾದರ, ಮುಂತಾದವರು ಭಾಗವಹಿಸಿದ್ದರು.