ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಹೋರಾಟ
Struggle for establishment of government medical college
ವಿಜಯಪುರ 28 : 11 ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅನಿರ್ಧಿಷ್ಟ ಧರಣಿಯನ್ನು ಉದ್ದೇಶಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ)ನ ರಾಜ್ಯಾಧ್ಯಕ್ಷರಾದ ಕೆ.ಸೋಮಶೇಖರ್ ರವರು ಮಾತನಾಡುತ್ತಾ ಲಕ್ಷಾಂತರ ಶುಲ್ಕ ಕಟ್ಟಿ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಓದಲು ಸಾಮರ್ಥ್ಯ ಇಲ್ಲ. ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣದ ಶುಲ್ಕ ದುಭಾರಿಯಾಗಿದೆ. ನಮ್ಮನ್ನಾಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗೀಕರಣ ನೀತಿಗಳನ್ನು ಜಾರಿಗೊಳೀಸುತ್ತಿಒದ್ದಾರೆ. 90 ರ ದಶಕದಲ್ಲಿ ಆರಂಭವಾದ ಖಾಸಗೀಕರಣ ನೀತಿಗಳು ಖಾಸಗೀಕರಣ ಬಂದರೆ ನಮ್ಮ ಭಾರತ ಉದ್ದಾರವಾಗುತ್ತೆ ಖಾಸಗೀಕರಣ ಬಂದರೆ ನಮ್ಮ ದೇಶ ಬಲಿಷ್ಠವಾಗುತ್ತದೆ ಎನ್ನುವ ಸುಳ್ಳುಗಳನ್ನು ಬಿಟ್ಟು ಕಾಂಗ್ರೆಸ್ ಸರ್ಕಾರ ಜಾರಿಮಾಡಿತು. ಕಾಂಗ್ರೆಸ್ ಸರ್ಕಾರ ಜಾರಿಮಾಡಿದ ಖಾಸಗೀಕರಣ ನೀತಿಗಳನ್ನು ಕೇಂದ್ರ ಸರ್ಕಾರ ಪಾಲಿಸುತ್ತಿದೆ. ಖಾಸಗೀಕರಣ ಎಂದರೆ ಹಣ ಇದ್ದರೆ ಜೀವನ, ಹಣ ಇದ್ದರೆ ಆಸ್ಪತ್ರೆ, ಹಣ ಇದ್ದರೆ ಶಾಲೆ,ಹಣ ಇದ್ದರೆ ಶಿಕ್ಷಣ ಹಣದಿಂದಲೆ ಎಲ್ಲಾ ಅಂದ್ರೆ ಮುಖ್ಯಮಂತ್ರಿ ಏಕೆ ಬೇಕು? ಸರ್ಕಾರವನ್ನು ಚುನಾಯಿಸಿ ಸರ್ಕಾರ ರಚನೆ ಮಾಡಬೇಕು. ಸರ್ಕಾರ ರಚನೆ ಮಾಡಿರುವುದು ಏಕೆಂದರೆ ಜನಗಳ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಲಿ ಎಂದು ಆದರೆ ಇವತ್ತು ಶಿಕ್ಷಣ, ಆರೋಗ್ಯ ಇವೆಲ್ಲಾ ಕನಿಷ್ಠ ಸೌಲಭ್ಯಗಳು ಸರ್ಕಾರ ಕೊಡಬೇಕಾಗಿರುವಂತದ್ದು. ಆಹಾರ, ಉದ್ಯೋಗ, ಶಿಕ್ಷಣ, ಆರೋಗ್ಯ ಇವೆಲ್ಲವನ್ನು ಉಚಿತವಾಗಿ ಕೊಡಬೇಕಾಗುತ್ತದೆ. ಆದರೆ ಅದರ ಬದಲು ಸರ್ಕಾರಿ ಆಸ್ಪತ್ರೆಗಳನ್ನು ಮುಚ್ಚಿ ದೊಡ್ಡ ದೊಡ್ಡ ಖಾಸಗೀ ಆಸ್ಪತ್ರೆಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ, ಇದರ ಅರ್ಥ ಬಡಜನರ ಎಲ್ಲಿಗೆ ಹೋಗಬೇಕು ಲಕ್ಷಾಂತರ ರೂಪಾಯಿ ಕೊಟ್ಟು ಶಿಕ್ಷಣ ಪಡೆಯಲು ಸಾಧ್ಯನಾ? ಬರುವ ಕಡಿಮೆ ಸಂಬಳದಲ್ಲಿ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಕೊಟ್ಟು ಜೀವನ ಹೇಗೆ ನಡೆಸಬೇಕು, ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಸಾಲ ಮಾಡಿ ಚಿಕಿತ್ಸೆ ಕೊಡಿಸಿದರೂ ಸಾಲ ತೀರಿಸಲು ಆಗುತ್ತಿಲ್ಲ. ಕಾರ್ೋರೇಟ್ ಮನೆತನಗಳಿಗೆ ಬಂಡವಾಳಶಾಹಿಗಳಿಗೆ ಆಸ್ಪತೆಗಳನ್ನು ತೆರೆಯಲು ಅವಕಾಶ ಮಾಡಿ ಕೊಡುತ್ತಿದ್ದಾರೆ ಅಂದರೆ ಇವತ್ತು ಇದು ವ್ಯಾಪರವಾಗಿದೆ. ಎಲ್ಲಾ ವ್ಯಾಪರೀಕರಣ ಮಾಡುತ್ತಿದ್ದಾರೆ ವ್ಯಾಪಾರೀಕರಣದ ವಿರುದ್ದ ದೊಡ್ಡ ಹೋರಾಟ ಮಾಡಬೇಕಿದೆ. ಸಾಮಾನ್ಯ ಜನಗಳಿಗೆ ಆಸ್ಪತ್ರೆ ಬೇಕು, ಬಡ ಮಕ್ಕಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಅಲ್ಲಿಯವರೆಗೆ ನಿಮ್ಮ ಹೋರಾಟವನ್ನು ಮುಂದುವರೆಸಿ, ಸರ್ಕಾರ ಇದಕ್ಕೆ ಮಣಿಯಲೇ ಬೇಕಾಗುತ್ತದೆ. ಯಾವುದೇ ಪಟ್ಟಭದ್ರ ಹಿತಾಸಕ್ತಿಗೆ ಮಣಿಯದಂಥೇ ನೋಡಿಕೊಳ್ಳೋಣ ನಿಮ್ಮ ಜೊತೆ ನಮ್ಮ ಕಾರ್ಮಿಕ ಸಂಘಟನೆ ಬೆಂಬಲವಿದೆ ಎಂದು ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದರು.
ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎಐಯುಟಿಯುಸಿ) ನ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಯಾದಗಿರಿ ಯವರು ಮಾತನಾಡುತ್ತಾ ಸರ್ಕಾರಿ ವೈದ್ಯಕೀಯ ಕಾಲೇಜು ಸರ್ಕಾರದ ಸ್ವಾದೀನದಲ್ಲಿ ಆಗಬೇಕು, ಸರ್ಕಾರ ಘೋಷಣೆ ಮಾಡಿದಂತೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೆ ವೈದ್ಯಕೀಯ ಕಾಲೇಜು ಆಗಬೇಕಿತ್ತು, ಸ್ವಾತಂತ್ರ್ಯ ಬಂದು 80 ವರ್ಷವಾದರೂ ಸರ್ಕಾರಿ ವೈದ್ಯಕೀಯ ಕಾಲೇಜು ಮಾಡಿಲ್ಲ ಇದಕ್ಕೆ ಸರ್ಕಾರ ನಾಚಿಕೆ ಪಡಬೇಕು. 150 ಎಕರೆ ಜಾಗ ಇದ್ದರೂ ಕೂಡ ಸರ್ಕಾರ ಸುಸಜ್ಜಿತ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡುವಲ್ಲಿ ಹಿಂದೇಟು ಹಾಕುತ್ತಿದೆ. ಪಿಪಿಪಿ ಅಡಿಯಲ್ಲಿ ತರುತ್ತಿರುವುದನ್ನು ವಿರೋಧಿಸಿ ಹೋರಾಟ ಮಾಡುತ್ತಿರುವುದು ಅತ್ಯಂತ ಸಂತಸದ ವಿಷಯ ಇದಕ್ಕೆ ನಮ್ನ ರಾಜ್ಯ ಸಮಿತಿಯಿಂದ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಚಾಮರಾಜ ನಗರದ ನಳಂದ ವಿಶ್ವವಿದ್ಯಾಲಯದ ಭಂತೆ ಬೋಧಿದತ್ತ ರವರು ಅನಿರ್ಧಿಷ್ಟ ಧರಣಿಯಲ್ಲಿ ಭಾಗವಹಿಸಿದ್ದರು.ಅಂಗನವಾಡಿ ಮತ್ತು ಹಾಸ್ಟಲ್ ಕಾರ್ಮಿಕರ ಸಂಘಟನೆಯ ಜಿಲ್ಲಾ ನಾಯಕರು ಬೆಂಬಲ ಸೂಚಿಸಿ ಮಾತನಾಡಿದರು. ನಾಯಕರುಗಳಾದ ಕಾಶೀಬಾಯಿ ಜನಗೊಂಡ, ನಿಂಗಮ್ಮ ಮಠ, ಸಾವಿತ್ರಿ ನಾಗರತ್ತಿ, ಗಾಯತ್ರಿ ಹಿರೇಮಠ, ರೇಣುಕಾ ಹಡಪದ, ಲಕ್ಷ್ಮೀ ಲಕ್ಷೆಟ್ಟಿ, ಮಹಾದೇವಿ ಧರ್ಮಶೆಟ್ಟಿ, ಗಂಗೂಬಾಯಿ ಉಳ್ಳಾಗಡ್ಡಿ, ಹೋರಾಟ ಸಮಿತಿ ಸದಸ್ಯರುಗಳಾದ ಅರವಿಂದ ಕುಲಕರ್ಣಿ, ಭಗವಾನ್ ರೆಡ್ಡಿ, ಅನಿಲ ಹೊಸಮನಿ, ಲಲಿತಾ ಬಿಜ್ಜರಗಿ,ಕೆ ಎಫ್ ಅಂಕಲಿ, ವಿದ್ಯಾವತಿ ಅಂಕಲಗಿ, ಮಲ್ಲಿಕಾರ್ಜುನ ಬಟಗಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಹೆಚ್ ಟಿ, ಮಲ್ಲಿಕಾರ್ಜುನ ಹೆಚ್ ಟಿ, ಶಿವಬಾಳಮ್ಮ ಕೊಂಡಗೂಳಿ,ಶ್ರೀನಾಥ ಪೂಜಾರಿ,ರವಿ ಕಿತ್ತೂರು, ದಸ್ತಗಿರಿ ಉಕ್ಕಲಿ, ಸುರೇಶ್ ಬಿಜಾಪುರ, ಲಕ್ಷ್ಮಣ ಕಂಬಾಗಿ, ಸಿದ್ದನಗೌಡ ಪಾಟಿಲ,ಬಾಬುರಾವ ಬೀರಕಬ್ಬಿ, ಅಕ್ರಮ ಮಾಶಳಕರ, ಸಂಗಮೇಶ್ ಸಗರ, ಸಿದ್ರಾಮಯ್ಯ ಹಿರೇಮಠ, ಬೋಗೇಶ್ ಸೋಲಾಪುರ್, ಗೀತಾ ಎಚ್, ನೀಲಾಂಬಿಕಾ ಬಿರಾದರ, ಮುಂತಾದವರು ಭಾಗವಹಿಸಿದ್ದರು.
ಕಳೆದ 11 ದಿನ ಸತ್ಯಾಗ್ರಹದ ನಡೆದರೂ ನ್ಯಾಯ ನೀಡದ ಸರ್ಕಾರದ ಧೋರಣೆ ಖಂಡಿಸಿ ನಾಳೆ ಕಪ್ಪು ಬಟ್ಟೆಯ ಪ್ರದರ್ಶನ ನಡೆಯಲಿದೆ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 