ಜೋರಾದ ಗಾಳಿ ಮಳೆ: ಮನೆಯ ಪತ್ರಾಸ್ ಹಾರಿ ಬಾಲಕನ ಕಾಲು ಮುರಿತ

Strong winds and rain: Boy's leg broken after roof of house falls

ಜಮಖಂಡಿ 25: ಜೋರಾಗಿ ಬಿಸಿದ ಗಾಳಿ, ಮಳೆಗಾಳಿಯಿಂದಾಗಿ ತಾಲೂಕಿನ ತೋದಲಬಾಗಿ ಗ್ರಾಮದಲ್ಲಿ ನಾಲ್ಕು ಮನೆಯ ಪತ್ರಾಸ್ ಹಾರಿ, ಒಬ್ಬ ಬಾಲಕನ ಕಾಲು ಮುರಿದುಹೊಗಿರುವ ಘಟನೆ ಸಂಜೆ ನಡೆದಿದೆ. 

ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಜೋರಾಗಿ ಬಿಸಿದ ಮಳೆಗಾಳಿಯಿಂದಾಗಿ ಭಜಂತ್ರಿ ತೋಟದ ವಸತಿಯಲ್ಲಿ ಘಟನೆ ನಡೆದಿದೆ. ವಸತಿಯಲ್ಲಿನ 4 ಕೊಠಡಿಗಳ ಮೆಲ್ಚಾವಣಿ ಪತ್ರಾಸ್‌ಗಳು ಹಾರಿಹೊಗಿ ಬಿದ್ದಿದ್ದರಿಂದ ನಿವಾಸಿಗಳು ಪ್ರಾಣಾಪಾಯದಿಂದ ಕುದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. 

ಬಾಳಾಪ್ಪ ಬಾಬು ಭಜಂತ್ರಿ ಅವರ ಮನೆಯಲ್ಲಿ ಮೆಲ್ಚಾವಣಿಗೆ ಕಟ್ಟಿದ್ದ ಹಸುಗೂಸಿನ ತೊಟ್ಟಿಲು ಸುಮಾರು 200 ಮೀಟರ್‌ನಷ್ಟು ದೂರ ಹೋಗಿ ಬಿದ್ದಿದೆ ಅದೃಷ್ಠವಶಾತ ಹಸುಗೂಸು ಪ್ರಾಣಾಪಾಯದಿಂದ ಪಾರಾಗಿದೆ ಮಗುವಿನ ತಾಯಿಯ ಕಾಲಿಗೆ ಪೆಟ್ಟಾಗಿದೆ. ಅದೆ ಮನೆಯಲ್ಲಿನ ಒರ್ವ ಬಾಲಕನ ಕಾಲು ಮುರಿದಿದ್ದರಿಂದ ಜಮಖಂಡಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.