ಕನ್ನಡ ನಾಡು-ನುಡಿ ಸಂರಕ್ಷಣೆಗೆ ಶ್ರಮಿಸಿ: ಶಿವಯೋಗಿಶ್ವರ ಸ್ವಾಮೀಜಿ
Strive to preserve the Kannada land and language: Shivayogishwara Swamiji
ಲೋಕದರ್ಶನ ವರದಿ
ದೇವರ ಹಿಪ್ಪರಗಿ 23 : ಕನ್ನಡ ನಾಡು, ನುಡಿ ಹಾಗೂ ಜಲದ ಸಂರಕ್ಷಣೆಗಾಗಿ ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತರೂ ನಿರಂತರವಾಗಿ ಶ್ರಮಿಸಬೇಕು ಎಂದು ಪರದೇಶಿ ಮಠದ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು. ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನೂತನ ಪದಾಧಿಕಾರಿಗಳ ಸದಸ್ಯತ್ವ ಅಭಿಯಾನ ಹಾಗೂ ಐಡಿ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬ ಕನ್ನಡಿಗನ ಪಾತ್ರ ಅತ್ಯಂತ ಪ್ರಮುಖವಾಗಿದೆ. ಸಂಘಟನೆಯು ಸದಾ ಸಮಾಜದ ಹಿತಕ್ಕಾಗಿ, ಶೋಷಿತರ ಹಾಗೂ ನೊಂದವರ ಧ್ವನಿಯಾಗಿ ಧರ್ಮ-ಭಾಷೆಯ ಏಳಿಗೆಗೆ ಶ್ರಮಿಸಬೇಕು" ಎಂದು ಶುಭ ಹಾರೈಸಿದರು. ಕರವೇ ತಾಲೂಕು ಅಧ್ಯಕ್ಷರಾದ ರಹಿಮಾನಸಾಬ ಕನಕಾಲ ಮಾತನಾಡಿ, "ಕನ್ನಡ ನಾಡು-ನುಡಿಯ ಉಳಿವಿಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ.
ಸಂಘಟನೆಯ ಹೆಸರು ಯಾವುದೇ ಕಾರಣಕ್ಕೂ ದುರ್ಬಳಕೆ ಆಗದಂತೆ ಪ್ರತಿಯೊಬ್ಬ ಪದಾಧಿಕಾರಿಗಳೂ ಕಟ್ಟಚ್ಚರ ವಹಿಸಬೇಕು. ಸಮಾಜದಲ್ಲಿ ಎಲ್ಲೇ ಅನ್ಯಾಯ ಕಂಡುಬಂದರೂ ನಮ್ಮ ವೇದಿಕೆಯ ಪದಾಧಿಕಾರಿಗಳು ಮುಂಚೂಣಿಯಲ್ಲಿ ನಿಂತು ಧ್ವನಿ ಎತ್ತಬೇಕು" ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷ ನಾಗೇಶ್ ಕಮತಗಿ, ಕಾರ್ಯಾಧ್ಯಕ್ಷ ಭೀಮನಗೌಡ ನಾಗರಾಳ, ಕಾರ್ಮಿಕ ಘಟಕ ಅಧ್ಯಕ್ಷ ಹಸನ್ ಭಗವಾನ್, ತಾಲೂಕು ಸಂಚಾಲಕ ಸಂತೋಷ್ ರಾಥೋಡ್, ತಾಲೂಕು ಸಂಘಟನಾ ಕಾರ್ಯದರ್ಶಿ ಬೀರು ಹಳ್ಳಿ, ಮಡಿವಾಳಯ್ಯ ಮಠಪತಿ, ದೀಲೀಪ್ ದೊಡ್ಡಮನಿ, ಅಜೀಮ್ ಪಟೇಲ್, ಪ್ರವೀಣ್ ಕುಮಾರ್ ಪವಾರ, ಸಲೀಂಸಾಬ್ ತುರುಕನಗಿರಿ, ಸಂತೋಷ್ ಕೊಟಗಿ, ಜಹಾಂಗೀರ್ ಮುಲ್ಲಾ ಸೇರಿದಂತೆ ವಿವಿಧ ಗ್ರಾಮ ಘಟಕಗಳ ಹಾಗೂ ತಾಲೂಕು ಮಟ್ಟದ ಹಲವು ಪದಾಧಿಕಾರಿಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 