ಸರ್ವಜನರು ತಾವಿರುವ ಪ್ರದೇಶದ ಪರಿಸರ ಸಂರಕ್ಷಣೆಯ ಕರ್ತವ್ಯವನ್ನಾಗಿ ಮಾಡಿಕೊಳ್ಳಬೇಕು : ಗುರುನಾಥ ದಡ್ಡಿ
Everyone should make the conservation of the environment in their area their duty: Gurunath Daddi
ಲೋಕದರ್ಶನ ವರದಿ
ವಿಜಯಪುರ 23 : ವಿಶ್ವಕಲ್ಯಾಣ ಪ್ರಕೃತಿ ವನಶ್ರೀ ಆರೋಗ್ಯ ಆಶ್ರಮ ಹಾಗೂ ವಿಜಯಪುರ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ 80ನೇ ಸ್ವಾತಂತ್ರ್ಯೋತ್ಸವ ನಿಮಿತ್ಯವಾಗಿ ವಿಜಯಪುರ ಜಿಲ್ಲಾ ಪಮಚಾಯತ, ತಹಶೀಲ್ದಾರ ಕಚೇರಿ ಹಾಗೂ ವನಶ್ರೀ ಆರೋಗ್ಯ ಆಶ್ರಮದ ಸೇರಿದಂತೆ ವಿವಿಧೆಡೆ ಸಸಿ ನೆಡುವ ಮೂಲಕ ವಿಶೇಷವಾಗಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡಿ ಮಾತನಾಡಿ, ನಾಗರಿಕ ಸಮಾಜದ ಸರ್ವಜನರು ತಾವಿರುವ ಪ್ರದೇಶದ ಪರಿಸರ ಸಂರಕ್ಷಣೆಯ ಕರ್ತವ್ಯವನ್ನಾಗಿ ಮಾಡಿಕೊಳ್ಳಬೇಕು.
ಆ ಮೂಲಕ ಪರಿಸರದಲ್ಲಿ ಹೊಸ ಗಿಡಮರಗಳನ್ನು ನೆಟ್ಟು ಪರಿಸರಕ್ಕೆ ಕಾಣಿಕೆಯನ್ನಾಗಿ ನೀಡಬೇಕು. ಜೊತೆಗೆ ಪರಿಸರ ಮಾಲಿನ್ಯವಾಗುವುದನ್ನು ತಡೆಗಟ್ಟುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಶಾಂತ ಚನ್ನಗೊಂಡ ಮಾತನಾಡಿ, ನಾವು ಕರ್ತವ್ಯ ನಿರ್ವಹಿಸುವ ಕಚೇರಿ ಸೇರಿದಂತೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಸಿಗಳನ್ನು ನೆಟ್ಟು ಅವುಗಳ ಪಾಲನೆ ಪೋಷಣೆ ಮಾಡುವ ಜವಾಬ್ದಾರಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವ ಕಲ್ಯಾಣ ಪ್ರಕೃತಿ ವನಶ್ರೀ ಆರೋಗ್ಯ ಆಶ್ರಮದದ ಸಂಸ್ಥಾಪಕ ಅಧ್ಯಕ್ಷ ಹಾಗೂ ನ್ಯಾಯವಾದಿ ಶ್ರೀಶೈಲ ಸಜ್ಜನ ಅವರು ಮಾತನಾಡಿ, ಮಾನವನ ಆರೋಗ್ಯಯುತ ಬದುಕಿಗೆ ಉತ್ತಮ ಪರಿಸರ ಅಗತ್ಯವಾಗಿದೆ.
ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಪ್ರತಿಯೊಬ್ಬರು ಗಿಡ ಮರಗಳನ್ನು ಬೆಳೆಸುವ ಮೂಲಕ ಸ್ವಚ್ಛ ಸುಂದರ ಪರಿಸರ ನಿರ್ಮಾಣದ ಹೊಣೆ ಹೊತ್ತುಕೊಳ್ಳಬೇಕು, ಆ ಮೂಲಕ ಪಂಚಭೂತಗಳ ರಕ್ಷಣೆಗೆ ನಾವು ಮುಂದಾದಾಗ ಮಾತ್ರ್ರ ಮನುಷ್ಯನು ಆರೋಗ್ಯಯುತ ಬದುಕು ಸಾಗಿಸಲು ಸಹಕಾರಿಯಾಗುತ್ತದೆ ಎಂದರು. ಕಾರ್ಯಕ್ರಮಕ್ಕು ಮುನ್ನ ಶಿವಣಗಿ ಗುರುದೇವ ಆಶ್ರಮದ ಶಿವಲಿಂಗ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಜಯದೇವ ಉಮರಾಣಿ, ಸೃಜಲ ಉಮರಾಣಿ, ಗುಜಗೊಂಡ, ಸಂತೋಷ ರಾಠೋಡ, ಯುವರಾಜ ಪಾಟೀಲ, ಸಂತೋಷ ಹಳ್ಳಿಕೇರಿ, ಸುರೇಶ ಬಳ್ಳೊಳ್ಳಿ ಹಾಗೂ ವಿಜಯಪುರ ಉಪ ವಿಭಾಗಾಧಿಕಾರಿ ಕಚೇರಿ ಹಾಗೂ ತಹಶೀಲ್ದಾರ ಕಚೇರಿ ಸಿಬ್ಬಂದಿಗಳು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 