ರಸಗೊಬ್ಬರ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕಠಿಣ ಕ್ರಮ

ಹಾವೇರಿ: ಜು.02:  ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ರಸಗೊಬ್ಬರವನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಮಾರಾಟಗಾರರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಜರುಗಿಸಲಾಗುವುದು ಎಚಿದು ಕೃಷಿ ಇಲಾಖೆ ಉಪ ಕೃಷಿ ನಿದರ್ೆಶಕರು ತಿಳಿಸಿದ್ದಾರೆ.

ರಸಗೊಬ್ಬರ ಮಾರಾಟಗಾರರು  ಕಡ್ಡಾಯವಾಗಿ ರೈತರಿಗೆ ರಸೀದಿಯನ್ನು ನೀಡುವಂತೆ ಹಾಗೂ ಯೂರಿಯಾ ರಸಗೊಬ್ಬರದೊಂದಿಗೆ ಇತರೆ ಯಾವುದೇ ರಸಗೊಬ್ಬರ ಅಥವಾ ಲಘು ಪೋಷಕಾಂಶಗಳನ್ನು ಲಿಂಕ್ ಮಾಡದಿರಲು ಸೂಚಿಸಲಾಗಿದೆ. 

 ನಿಗಧಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟಮಾಡಿದ ಪ್ರಕರಣಗಳು ಕಂಡುಬಂದಲ್ಲಿ ರೈತಭಾಂಧವರು ತಕ್ಷಣವೇ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪಕರ್ಿಸಲು ಕೋರಲಾಗಿದೆ. 

ಯೂರಿಯಾ ರಸಗೊಬ್ಬರ ಮಾರಾಟ ದರ:

  50 - ಕೆ.ಜಿ ಬ್ಯಾಗ್ ರೂ.295/- ಹಾಗೂ  45 - ಕೆ.ಜಿ ಬ್ಯಾಗ್ ರೂ.266/- ಇರುತ್ತದೆ. ಈ ಕುರಿತು ಈಗಾಗಲೇ ಕೃಷಿ ಇಲಾಖೆಯ ಅಧಿಕಾರಿಗಳ ತಂಡಗಳು ಎಲ್ಲಾ ತಾಲ್ಲೂಕುಗಳಲ್ಲಿ ಕೃಷಿ ಪರಿಕರ ಮಾರಾಟಗಾರರ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. 

ಜುಲೈ 01 ರಂದು  ಉಪ ಕೃಷಿ ನಿದರ್ೆಶಕ ಕರಿಯಪ್ಪ ಡಿ.ಕೊರಚರ, ಸಹಾಯಕ ಕೃಷಿ ನಿದರ್ೇಶಕರಾದ ಪ್ರಾಣೇಶ್, ಕಡ್ಲೇರ, ಸುನೀಲ್ ನಾಯ್ಕ್, ದೇವೇಂದ್ರ  ಅವರು ಹಾನಗಲ್ ತಾಲ್ಲೂಕಿನ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಎಲ್ಲಾ ಖಾಸಗಿ ಪರಿಕರ ಮಾರಾಟಗಾರರು ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ  ದರಪಟ್ಟಿ ರೈತರಿಗೆ ಕಾಣುವಂತೆ ಪ್ರದಶರ್ಿಸಬೇಕೆಂದು ಸೂಚಿಸಿದರು.

       ಜಿಲ್ಲೆಗೆ ಸಣ್ಣ ಕಾಳು ಮತ್ತು ದಪ್ಪ ಕಾಳು ಯೂರಿಯಾ ಸರಬರಾಜಾಗುತ್ತಿದ್ದು, ಎರಡರಲ್ಲೂ ಸಾರಜನಕದ ಪ್ರಮಾಣವು ಶೇಕಡಾ 46ರಷ್ಟಿದ್ದು, ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಸಣ್ಣ ಕಾಳಿನ ಯೂರಿಯಾಗೆ ಹೋಲಿಸಿದರೆ, ದಪ್ಪ ಕಾಳಿನ ಯುರಿಯಾವು ನಿಧಾನವಾಗಿ ಪೋಷಕಾಂಶಗಳನ್ನು ಬಿಡುಗಡೆ ಮಾಡುವುದರಿಂದ ಪೋಷಕಾಂಶ ಪೋಲಾಗುವುದನ್ನು ತಡೆಗಟ್ಟಿ ದೀರ್ಘಕಾಲದವರೆಗೂ ಪೋಷಕಾಂಶಗಳನ್ನು ಬೆಳೆಗೆ ಸಿಗುವಂತೆ ಮಾಡುತ್ತದೆ. ಆದ್ದರಿಂದ ರೈತರು ಕೇವಲ ಸಣ್ಣ ಕಾಳು ಯೂರಿಯಾಗೆ ಆದ್ಯತೆ ನೀಡದೆ ಲಭ್ಯವಿರುವ ಎರಡೂ ತರಹದ ಯೂರಿಯಾ ಬಳಕೆ ಮಾಡಲು ರೈತರನ್ನು ವಿನಂತಿಸಲಾಗಿದೆ.

         ಅಲ್ಲದೆ ರೈತರ ಹೊಲಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಲ್ಲಿ ಗೋವಿನ ಜೋಳ ಬೆಳೆಯಲ್ಲಿ ಲದ್ದಿ ಹುಳುವಿನ ಬಾಧೆ (ಫಾಲ್ ಆಮರ್ಿವಮರ್್) ಕಂಡು ಬಂದಿದ್ದು, ಸದರಿ ಕೀಟದ ಹತೋಟಿಗೆ 6 ರಿಂದ 7 ಗ್ರಾಂನಷ್ಟು ಇಮಾಮೆಕ್ಟೀನ್ ಬೆಂಜೋಯೇಟ್ ಕೀಟನಾಶಕವನ್ನು ಒಂದು ಸಿಂಪರಣಾ ಟ್ಯಾಂಕ ನೀರಿಗೆ ಬೆರಸಿ ಸಿಂಪಡಣೆ ಮಾಡಲು ರೈತರಿಗೆ ಸಲಹೆ ನೀಡಲಾಯಿತು. 

   ಮಳೆ ಪ್ರಮಾಣ ಕಡಿಮೆ ಆದಲ್ಲಿ ಗೋವಿನ ಜೋಳ ಬೆಳೆಯಲ್ಲಿ ಲದ್ದಿ ಹುಳುವಿನ ಬಾಧೆ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ.  ಕಾರಣ ರೈತರು ಕೂಡಲೇ ಹತೋಟಿ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಲಾಯಿತು.