ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗಲಿ

ಧಾರವಾಡ 28: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಕಳೆದ ಮೂರು ತಿಂಗಳಲ್ಲಿ ಯಾರೊಬ್ಬರಿಗೂ ಶಿಕ್ಷೆಯಾಗದೇ ಎಲ್ಲಾ ಪ್ರಕರಣಗಳು ವಿಲೇವಾರಿಯಾಗಿರುವದನ್ನು ನೋಡಿದಾಗ ಸಂತ್ರಸ್ತರು ಮತ್ತು ಸಾಕ್ಷಿದಾರರಿಗೆ ಆತ್ಮವಿಶ್ವಾಸ ತುಂಬುವ  ಅಗತ್ಯವಿದೆ ಎಂಬುದನ್ನು ತೋರಿಸುತ್ತದೆ. ಇಂತಹ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಸೂಕ್ತ ಕಾನೂನು ನೆರವು, ಆತ್ಮಸ್ಥೈರ್ಯ ನೀಡುವ ಜಾಗೃತಿ  ಕಾರ್ಯಗಳು ಆಗಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಸಂಜೆ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ 4 ನೇ ತ್ರೈಮಾಸಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ.ಜಾ .ಹಾಗೂ ಪ.ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗದೇ ಎಲ್ಲ ಪ್ರಕರಣಗಳು ವಿಲೇವಾರಿಯಾಗುತ್ತ ಹೋದರೆ ಸಂತ್ರಸ್ತರು ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ. ಅವರ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯ ಜಾಗೃತಿ  ಸಮಿತಿ ಮತ್ತು ಇಲಾಖೆಗಳಿಂದ ಆಗಬೇಕು.ಇಂತಹ ಪ್ರಕರಣಗಳಲ್ಲಿ ಸಾಕ್ಷಿದಾರರು ಹಾಗೂ ದೂರುದಾರರಿಗೆ ಇರಬಹುದಾದ ಆತಂಕಗಳನ್ನು ನಿವಾರಿಸಲು ಒತ್ತು ನೀಡಬೇಕು. ವಿವಿಧ ಇಲಾಖೆಗಳು ಎಸ್ ಸಿ ಪಿ ಮತ್ತು ಟಿ ಎಸ್ ಪಿ ಕಾರ್ಯಕ್ರಮಗಳ ಅಡಿಯಲ್ಲಿ ಕಾರ್ಯ ಕೈಗೊಳ್ಳುವಾಗ ನಿರ್ಧಿ ಷ್ಟ ಪ್ರದೇಶಗಳಲ್ಲಿ ಪ.ಜಾ.ಹಾಗೂ ಪ.ಪಂ.ಸಮುದಾಯ ಕನಿಷ್ಠ ಶೇ.50ರಷ್ಟಿರಬೇಕು . ಇಲ್ಲದಿದ್ದರೆ ಕಾನೂನು ಉಲ್ಲಂಘನೆಯಾಗುತ್ತದೆ. ನಿಯಮ ಉಲ್ಲಂಘಿಸಿದ ಕಾಮಗಾರಿಗಳ ಬಗ್ಗೆ ನಿರ್ಧಿ ಷ್ಟ ಮಾಹಿತಿ ಒದಗಿಸಿದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಅವಕಾಶವಿದೆ. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯು ಪರಿಶಿಷ್ಟರಿಗೆ ಉದ್ಯಮ ರಂಗದಲ್ಲಿ ಇರುವ ಅವಕಾಶಗಳು ಮತ್ತು ಲೋಕೋಪಯೋಗಿ ಇಲಾಖೆಯು 50 ಲಕ್ಷ ರೂ.ವರೆಗಿನ ಕಾಮಗಾರಿಗಳಲ್ಲಿ ಪ.ಜಾ.ಹಾಗೂ ಪ.ಪಂ.ಜನರಿಗೆ ಅವಕಾಶ ನೀಡುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರತ್ಯೇಕವಾಗಿ ಸಭೆ ನಡೆಸಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಸರ್ಕಾ ರಿ ಅಭಿಯೋಜಕಿ ಗಿರಿಜಾ ತಮ್ಮಿನಾಳ ಮಾತನಾಡಿ, ಪ.ಜಾ.ಹಾಗೂ ಪ.ಪಂ.ದೌರ್ಜನ್ಯ ತಡೆ ಪ್ರಕರಣಗಳಲ್ಲಿ ಬಹುತೇಕ ಆರೋಪಿಗಳು, ದೂರುದಾರರು ಮತ್ತು ಸಾಕ್ಷಿದಾರರು ರಾಜಿಯಾಗುತ್ತಿರುವುದರಿಂದ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಇಳಿಮುಖವಾಗಿದೆ. 2019 ರ ಅಗಸ್ಟ್ ಅಂತ್ಯಕ್ಕೆ 107 ಪ್ರಕರಣಗಳಲ್ಲಿ 98 ಪ್ರಕರಣಗಳು ಬಾಕಿ ಇವೆ ಎಂದರು.

ಸಭೆಯ ಅಧ್ಯಕ್ಷತೆವಹಿಸಿದ್ದ ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ,  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಗಳು ನಿಯಮಿತವಾಗಿ ನಡೆಯುತ್ತಿವೆ. ಧಾರವಾಡ ತಾಲ್ಲೂಕಿನಲ್ಲಿ ಆರು  ಬೇಡ ಜಂಗಮ ವ್ಯಕ್ತಿಗಳಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗಿದೆ ಎಂದು ತಹಸೀಲ್ದಾರರು ವರದಿ ನೀಡಿದ್ದಾರೆ. ಉಳಿದ ತಾಲೂಕುಗಳ ವರದಿ ಬಂದ ನಂತರ ಪರಾಮರ್ಶೆ  ನಡೆಸಲಾಗುವುದು. ಧಾರವಾಡ ಶಹರದಲ್ಲಿ ವಿದ್ಯಾರ್ಥಿ ಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಗಳು ಇಲ್ಲದಿರುವುದರಿಂದ ಸಮಸ್ಯೆ ಎದುರಾಗಿರುವುದು ವಾಸ್ತವದ ಸಂಗತಿಯಾಗಿದೆ. ಈ ಕುರಿತು ಸರ್ಕಾ ರದ ಮಟ್ಟದಲ್ಲಿ ಮಾಹಿತಿ ಸಲ್ಲಿಸಲಾಗಿದೆ.ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿರುವ ಐಎಎಸ್ ಮತ್ತು ಕೆಎಎಸ್ ತರಬೇತಿ ಕೇಂದ್ರದ ಪುನರಾರಂಭಕ್ಕೆ ಕೋರಿ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. 

ಸಮಾಜ ಕಲ್ಯಾಣ ಜಂಟಿ ನಿರ್ದೇ ಶಕ ಎನ್ ಆರ್ ಪುರುಷೋತ್ತಮ, ಸಮಿತಿಯ ಅಧಿಕಾರಿ ಸದಸ್ಯರಾದ ಮಂಜುನಾಥ ಡೊಳ್ಳಿನ, ಸುಭಾಸ ನಾಟಿಕಾರ್, ತಹಸೀಲ್ದಾರರಾದ ನವೀನ ಹುಲ್ಲೂರ, ಅಶೋಕ ಶಿಗ್ಗಾಂವಿ, ಅಧಿಕಾರೇತರ ಸದಸ್ಯರಾದ ಅಶೋಕ ದೊಡ್ಡಮನಿ, ಸಿದ್ದಲಿಂಗಪ್ಪ ಕರೆಮ್ಮನವರ, ಅಜರ್ುನ ವಡ್ಡರ್, ಇಂದುಮತಿ ಶಿರಗಾಂವ್, ಇಸಾಬೆಲ್ಲಾ ಕ್ಸೇವಿಯರ್, ಕಾಡಯ್ಯ ಹೆಬ್ಬಳ್ಳಿಮಠ ಮತ್ತಿತರರು ಸಭೆಯಲ್ಲಿ ಭಾಗವಹಿಸಿ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದರು.