ಶಿಕ್ಷಣ ಮತ್ತು ತರಬೇತಿಯಿಂದ ಸಹಕಾರ ಚಳುವಳಿಯ ಬಲವರ್ಧನೆ

ಶಿಕ್ಷಣ ಮತ್ತು ತರಬೇತಿಯಿಂದ ಸಹಕಾರ ಚಳುವಳಿಯ ಬಲವರ್ಧನೆ   Strengthening the cooperative movement through education and training

ಲೋಕದರ್ಶನ ವರದಿ 

ಶಿಕ್ಷಣ ಮತ್ತು ತರಬೇತಿಯಿಂದ ಸಹಕಾರ ಚಳುವಳಿಯ ಬಲವರ್ಧನೆ   

ಬೆಳಗಾವಿ 12: ಕರ್ನಾಟಕ ರಾಜ್ಯದ ಸಹಕಾರ ಚಳುವಳಿಯ ಬಲವರ್ಧನೆಗೆ ರಾಜ್ಯ ಸಹಕಾರ ಮಹಾಮಂಡಳ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಈ ರಾಜ್ಯದ ಸಹಕಾರ ಸಂಘಗಳ ಮಾತೃ ಸಂಸ್ಥೆ ಎನಿಸಿಕೊಂಡಿರುವ ಮಹಾಮಂಡಳ ಎಲ್ಲಾ ವಿಧದ ಸಹಕಾರ ಸಂಘಗಳಿಗೆ ಸಹಕಾರ ಶಿಕ್ಷಣ, ತರಬೇತಿ ಮತ್ತು ಪ್ರಚಾರದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಾ ಬರುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕರಾದ ಜಗದೀಶ್ ಕವಟಗಿಮಠ ತಿಳಿಸಿದರು. ನಗರದ ಮಹಾಂತ್ ಭವನದಲ್ಲಿ  ಶನಿವಾರ 12  ರಂದು ಹಮ್ಮಿಕೊಳ್ಳಲಾದ ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ನಿನ 89ನೇ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.      ಸಭೆಯ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಸಹಕಾರ ಯೂನಿಯನ್ ನ ಅಧ್ಯಕ್ಷರಾದ  ಬಸಗೌಡ ಡಿ. ಪಾಟೀಲ್ ವಹಿಸಿದ್ದರು. ಯೂನಿಯನ್ನಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಲಪ್ಪ ಜಗ್ಗಿನವರ 89ನೇ ವಾರ್ಷಿಕ ಮಹಾಸಭೆಯ ವರದಿ ವಾಚನ ಮಾಡಿದರು. ಯೂನಿಯನ್ನಿನ ಉಪಾಧ್ಯಕ್ಷರಾದ ಎಸ್‌. ಎಸ್‌. ಸೋನಪ್ಪನವರ, ನಿರ್ದೇಶಕರುಗಳಾದ ಬಿ. ಎಸ್‌. ಸುಲ್ತಾನಪುರಿ, ಐ.ಬಿ. ಇಂಗಳಗಿ, ಯು. ಬಿ. ಪಾಟೀಲ್, ವಿ. ಜಿ. ಬೋಳಿ, ಬಿ. ಜಿ. ಸಂತಿ, ಎಲ್‌. ಎಂ. ದೇಸಾಯಿ, ಎಸ್‌.ಎಸ್‌. ಅಂಗಡಿ, ಎಸ್‌. ಎಫ್‌. ದೊಡಗೌಡ್ರು, ಬಿ. ವಿ. ಪಾಟೀಲ್, ಎನ್‌. ಎಸ್‌. ಚಿಂಚಲಿ, ಎಸ್‌. ವೈ. ಮರ್ದಿ, ಜಿ. ಡಿ. ಹೂಗಾರ್ ಉಪಸ್ಥಿತರಿದ್ದರು.