ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಇನ್ನಷ್ಟು ಬಲಗೊಳಿಸಿ: ಗಣಪತಿ ಉಳ್ವೇಕರ್
Strengthen Ayurveda treatment system further: Ganapathi Ulvekar
ಕಾರವಾರ 23: ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಇನ್ನಷ್ಟು ಬಲಗೊಳಸಿ ಅದರ ಮಹತ್ವವನ್ನು ಅರ್ಥ ಮಾಡಿಕೊಂಡು ಬದುಕಿನ ಭಾಗವಾಗಿ ಜೋಡಿಸಿಕೊಳ್ಳಬೇಕಿದೆ ಎಂದು ವಿಧಾನಸಭಾ ಸದಸ್ಯ ಗಣಪತಿ ಉಳ್ವೇಕರ್ ಹೇಳಿದರು.
ಅವರು ಮಂಗಳವಾರ, ಸರ್ಕಾರಿ ನೌಕರರ ಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆಯುಷ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಕಾರವಾರ, ಆಯುಷ್ ಅಧಿಕಾರಿಗಳ ಸಂಘ ಉತ್ತರ ಕನ್ನಡ ಹಾಗೂ ನಗರಸಭೆ ಕಾರವಾರ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಜನತೆಗಾಗಿ ಮತ್ತು ಜಗತ್ತಿಗಾಗಿ ಆರ್ಯವೇದ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾದ, ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಹಾಗೂ ಆರ್ಯುವೇದ ಗಿಡಮೂಲಿಕೆ ಸಸಿಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಪ್ರತಿ ವರ್ಷ ಧನ್ವಂತರಿಯ ಜನ್ಮ ದಿನದಂದು ಸಢರ್ಕಾರವು ಸೆ.23ನ್ನು ರಾಷಿೊಥಯ ಆರ್ಯವೇದ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆರ್ಯವೇದವು ದೇಹ, ಮನಸ್ಸು ಆತ್ಮದ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಅನೇಕ ಕಾಯಿಲೆಗಳಿಗೆ ರಾಸಾಯನಿಕ ಓಷಧಿಗಳಿಗಿಂತ ಪ್ರಕೃತಿಯಲ್ಲಿ ಸಿಗುವಂತ ಆರ್ಯವೇದ ಚಿಕಿತ್ಸೆಯ ಮೂಲಕ ದೇಹ ಮತ್ತು ಶರೀರವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದ್ದು, ಇದನ್ನು ಇನ್ನಷ್ಷು ಬಲಪಡಿಸಬೇಕಾಗಿದೆ ಎಂದರು.
ನಗರಸಭೆ ಅಧ್ಯಕ್ಷ ರವಿರಾಜ ಚಂದ್ರಹಾಸ ಅಂಕೋಲೆಕರ ಮಾತನಾಡಿ, ಪ್ರಸ್ತುತ ಇಡೀ ಜಗತ್ತಿನಲ್ಲಿ ಆರ್ಯುವೇದ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸ್ವಚ್ಛತೆ ಮಹತ್ವದ ಪಾತ್ರವಹಿಸುತ್ತಿದ್ದು, ಎಲ್ಲರೂ ಎಲ್ಲೆಡೆ ಸ್ವಚ್ಛತೆಯನ್ನು ಕಾಪಾಡಬೇಕು ಮತ್ತು ಪರಿಸರಕ್ಕೆ ಹಾನಿಯಾಗಿರುವ ಏಕ ಬಳಕೆ ಪ್ಲಾಸ್ಟಿಕ್ಗಳನ್ನು ಬಳಸದಂತೆ ಜಾಗೃತಿಯನ್ನು ಮೂಡಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯಾಧಿಕಾರಿ ಡಾ.ಜಗದೀಶ ಯಾಜಿ, ಸಣ್ಣ ಹೆಜ್ಜೆಗಳು, ಆರ್ಯುವೇದ ಜಾಗೃತಿ ಕುರಿತು ಉಪನ್ಯಾಸ ನೀಡಿ, ರೋಗಿಗಳಿಗೆ ರೋಗವನ್ನು ಗುಣಪಡಿಸುವುದಕ್ಕಿಂತ ರೋಗ ರಹಿತ ಸಮಾಜವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಯೋಗ ಮತ್ತು ಆರ್ಯುವೇದವನ್ನು ಇಂದು ಜಗತ್ತಿಗೆ ವಿಸ್ತರಿಸಲಾಗಿದೆ. ತಂದೆ ತಾಯಿಗಳು ಆರೋಗ್ಯವಂತರಾಗಿದ್ದ್ದರೆ ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಬಹುದು. ಆದರಿಂದ ಧೂಮಪಾನ, ಮದಢ್ಯಪಾನ ಸೇವನೆ ಮಾಡಬಾರದು, ಇದರಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ರಾಸಾಯನಿಕ ಮಿಶ್ರಿತ ಪದಾರ್ಥಗಳನ್ನು ಸೇವಿಸದೆ ಮನೆಯಲ್ಲೇ ತಯಾರಿಸಿರುವ ಆಹಾರಗಳನ್ನು ಸೇವಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು.
ಆರ್ಯುವೇದ ತಜ್ಞವೈದ್ಯ ಡಾ. ಎಮ್.ಎಸ್. ಅವಧಾನಿ ಆರ್ಯುವೇದದ ಕುರಿತು ಉಪನ್ಯಾಸ ನೀಡಿ, ಆರ್ಯವೇದ ಕೇವಲ ಮನುಷ್ಯರಿಗೆ ಸಿಮಿತವಲ್ಲ ಸಮಸ್ತ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಸಂಬಂಧಿಸಿದೆ. ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಂಡು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಕ್ಯಾನ್ಸರ್, ಡಯಾಲಿಸಿಸ್, ಇನ್ನೂ ಹಲವು ಕೊನೆಯ ಹಂತದಲ್ಲಿ ಇರುವ ಅನೇಕ ಕಾಯಿಲೆಗಳಿಗೆ ಆರ್ಯವೇದದ ಮೂಲಕ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಆಧುನಿಕ ವೈದ್ಯ ವಿಜ್ಞಾನಕ್ಕಿಂತ ಆರ್ಯವೇದಕ್ಕೆ ಅದ್ಬುತ ಶಕ್ತಿ ಇದೆ. ಆಧುನಿಕ ಕಾಲದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪತ್ರಿಕೆಗಳಲ್ಲಿ ಬರುವ ಸುಳ್ಳು ಮಾಹಿತಿ ನೀಡುವ ಮನೆಮದ್ದು ಓಷಧಿಗಳನ್ನು ಬಳಸದಂತೆ ರೋಗಿಗಳಿಗೆ ಜಾಗೃತಿ ಮೂಡಿಸಬೇಕು. ಜೀವನ ಶೈಲಿ ಶಿಸ್ತು ಬದ್ದವಾಗಿ ರೂಡಿಸಿಕೊಳ್ಳಬೇಕು ಎಂದರು.
ಆಯುಷ್ ಇಲಾಖೆಯ ಜಿಲ್ಲಾ ಆಯುಷ್ ಅಧಿಕಾರಿ ಡಾ. ಪ್ರವೀಣ ಜಿ.ಎನ್ ಸ್ವಾಗತಿಸಿದರು, ಡಾ. ಸಂಜೀವ್ ಗಲಗಲಿ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ಎಇಓ ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಾಕ್ಷ ಸಂಜಿವ್ ಕುಮಾರ್ ನಾಯ್ಕ, ಆಯುಷ್ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು, ನರ್ಸಿಂಗ್ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 