ಜ.01 ರಂದು ಬ್ಯಾನರ್‌ಗಳ ಕ್ಷುಲ್ಲಕ ವಿಷಯವಾಗಿ ಕಲ್ಲು ತೂರಾಟ ಘಟನೆ
Stone-pelting incident on January 1 over trivial issue of banners
ಬಳ್ಳಾರಿ 06: ಜ. 01ರಂದು ಬ್ಯಾನರ್‌ಗಳ ಕ್ಷುಲ್ಲಕ ವಿಷಯವಾಗಿ ಕಲ್ಲು ತೂರಾಟ ಘಟನೆಯನ್ನು ನೋಡಿ ಸಾಮಾನ್ಯ ಜನರು ಸದರಿ ಮುಖ್ಯರಸ್ತೆಯಲ್ಲಿ ಓಡಾಡಲು ಭಯಭೀತರಾಗಿದ್ದಾರೆ. 2008 ಕ್ಕಿಂತ ಮುಂಚಿತವಾಗಿ ಬಳ್ಳಾರಿ ನಗರವುಒಂದು ನೆಮ್ಮದಿಯಾಗೀಜೀವನ ಮಾಡುವ ಪ್ರದೇಶವಾಗಿದ್ದು, 2008 ರಲ್ಲಿ ಬಳ್ಳಾರಿ ಬಿಜೆಪಿ ನಾಯಕರು ಸಚಿವರಾಗಿದ್ದಾಗ ಬಳ್ಳಾರಿ ನಗರವು ರಿಪಬ್ಲಿಕ್‌ಆಫ್ ಬಳ್ಳಾರಿ ಎಂದು ಹೆಸರು ಹೊಂದಿದ್ದು, ಆದರೆ ಬಿಜೆಪಿ ನಾಯಕರಗಡಿ ಪಾರಿನಿಂದ ಬಳ್ಳಾರಿ ನಗರವು ಮತ್ತೆ ಯಥಾಸ್ಥಿತಿಯಾಗಿ ಬಳ್ಳಾರಿ ನಗರದಲ್ಲಿ ಶಾಂತಿಯುತ ಪರಿಸ್ಥಿತಿ ನೆಲಗೊಂಡಿದೆ.
ಈ ಒಂದುಘಟನೆಯಿಂದ ಮತ್ತೆ ಈಗ ಬಳ್ಳಾರಿ ನಗರವು ಅಶಾಂತಿಯುತವಾಗಿ ಬೆಳೆಯುತ್ತಿದೆ ಇದಕ್ಕೆಕಾರಣ ಹಳೇ ದ್ವೇಷಗಳು ಕಾರಣಎಂಬುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಘಟನೆಗೆ ಬ್ಯಾನರ್‌ಒಂದು ನೆಪ ಮಾತ್ರ, ಬುದ್ಧಿಮಾತು ಹೇಳುವ ರಾಜಕಾರಣಿಗಳು ರಸ್ತೆಯ ಮೇಲೆ ಬಂದುಗುಂಡಾಗಿರಿ ಮಾಡಿದರೆ ಸಾಮಾನ್ಯಜನರ ಪರಿಸ್ಥಿತಿ ಏನು ? ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ಮತದಾರರು ಮತ ಹಾಕಿ ಒಳ್ಳೇ ಆಡಳಿತ ನೀಡುವಂತೆಆಯ್ಕೆ ಮಾಡಿದ್ದಾರೆ.ತಮ್ಮ-ತಮ್ಮ ವೈಯಕ್ತಿಕ ದ್ವೇಷಗಳಿಂದ ಗೂಂಡಾಗಿರಿ ಮಾಡುವ ಪರಿಸ್ಥಿತಿಯಲ್ಲಿ ಶಾಸಕರುಗಳು ಇದ್ದಾರೆ. ಇಂತಹ ಜನನಾಯಕರಿಗೆ ಜನರು ಅಧಿಕಾರ ಕೊಟ್ಟಿದ್ದು ಸಮಂಜಸವಾ ?ಈ ಘಟನೆಯಲ್ಲಿ ಮೃತರಿಗೆ ಮೃತರಕುಟುಂಬದವರ ಹಾಗೂ ಗಾಯಗೊಂಡವರ ಕುಟುಂಬದ ಪರಿಸ್ಥಿತಿ ಏನು?
ವರ್ಷದ ಮೊದಲನೇ ದಿನವೇ ಬಳ್ಳಾರಿ ಜಿಲ್ಲೆಗೆ ನೂತನವಾಗಿ ಎಸ್.ಪಿ.ಯಾಗಿ ಅಧಿಕಾರ ಸ್ವೀಕಾರ ಮಾಡಿದ್ದು, ಅಧಿಕಾರ ಸ್ವೀಕಾರ ಮಾಡಿದ 2ನೇ ದಿನಕ್ಕೆ ಅಮಾನತು ್ತಆಗಿರುವುದು ಬಹುಶಃ ಬಳ್ಳಾರಿ ಚರಿತ್ರಯಲ್ಲಿಇದೇ ಮೊದಲ ಬಾರಿಯೇನೋ? ಸದರಿ ಪೊಲೀಸ್‌ಅಧಿಕಾರಿಗೆ ಬಳ್ಳಾರಿ ಜಿಲ್ಲೆಯಲ್ಲಿ ಮತ್ತು ನಗರ ಪ್ರದೇಶದಲ್ಲಿ ಎಷ್ಟು ಸ್ಟೇಷನ್‌ಗಳಿವೆ ? ಎಷ್ಟು ಸಿಬ್ಬಂಧಿಗಳಿದ್ದಾರೆ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳುವುದರಲ್ಲಿಯೇ ಈ ಘಟನೆ ನಡೆಯಿತುಇಂತಹ ರಾಜಕಾರಣಿಗಳಿಂದ ಅಧಿಕಾರಿಗಳು ಸಂಕಷ್ಟವನ್ನು ಅನುಭವಿಸುವುದರ ಜೊತೆಗೆ ತಮ್ಮ ಅಧಿಕಾರದಿಂದ ಅಮಾನತ್ತುಗೊಳ್ಳುವ ಪರಿಸ್ಥಿತಿ ಒದಗಿದ್ದು, ಅಧಿಕಾರಿಗಳಿಗೆ ಸಿಗುವ ಗೌರವಇದೇನಾ ?ಕಲ್ಲು ತೂರಾಟವು ಮುಂಚಿತವಾಗಿ ಯೋಜನೆಯಾಗಿತ್ತಾ ಅಷ್ಟೊಂದು ಕಲ್ಲುಗಳು ಎಲ್ಲಿಂದ ಬಂದವು?ಗುಂಡು ಹಾರಿಸಲು ಅನುಮತಿಯಾರೂ ನೀಡಿದರು ? ಇಂತಹ ಸಂಶಯಎಲ್ಲರಿಗೂ ಬರುತ್ತದೆ.
ಬಳ್ಳಾರಿ ನಗರದ ಇತ್ತೀಚೆಗೆ ಅನೈತಿಕ ಚಟುವಟಿಕೆಗಳು ಬಹಳ ನಡಿತ್ತಿವೆ ಎಂದು ತಿಳಿದು ಬಂದಿವೆ, ಆಗಿನ ಎಸ್.ಪಿ.ಚೇತನ್‌ಅವರುತಮ್ಮಅಧಿಕಾರದಲ್ಲಿದ್ದಾಗ ಮಟ್ಕಾ, ಜೂಜಾಟಇನ್ನು ಮುಂತಾದ ಅನೈತಿಕ ಚಟುವಟಿಕೆಗಳ ವಿರುದ್ಧ ಕಠಿಣಕ್ರಮಕೈಗೊಂಡು, ಸಾಮಾನ್ಯಜನರ ಪರವಾಗಿ ನ್ಯಾಯ ಒದಗಿಸಿಕೊಟ್ಟರು ಅಂತಹ ನಿಷ್ಠಾವಂತ ಎಸ್.ಪಿ.ರಂತಹರು ಬಳ್ಳಾರಿಗೆ ಮತ್ತೊಮ್ಮೆ ಬರಬೇಕೆಂದು ಬಳ್ಳಾರಿ ಜನರು ನೀರೀಕ್ಷೆಯಲ್ಲಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 