ಲಂಡನ್, ಅ 11: ವೈಯಕ್ತಿಕ ಜೀವನ ಹಾಗೂ ಕುಟುಂಬದ ಬಗ್ಗೆ ಪ್ರಕಟಿಸಿದ ಇಂಗ್ಲೀಷ್ ದಿನ ಪತ್ರಿಕೆಯೊಂದರ ವಿರುದ್ಧ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕಾನೂನು ಕ್ರಮ ಕೈಗೊಂಡಿದ್ದಾರೆ. ನ್ಯೂಜಿಲೆಂಡ್ನಲ್ಲಿ ಬೆನ್ ಸ್ಟೋಕ್ಸ್ ಜನಿಸಿ ಮೂರು ವರ್ಷದ ಬಾಲಕನಿದ್ದಾಗ ಆತನ ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ತಮ್ಮ ತಾಯಿಯ ಮಾಜಿ ಪ್ರಿಯಕರ ಕೊಲೆ ಮಾಡಿದ್ದ ವಿಷಯವನ್ನು ದಿ ಸನ್ ಪತ್ರಿಕೆ ಕಳೆದ ತಿಂಗಳು ಪ್ರಕಟಿಸಿತ್ತು. ಇದೀಗ ಗಾರ್ಡ್ಯನ್ ಪ್ರಕಾರ, ಬೆನ್ ಸ್ಟೋಕ್ಸ್ ಹಾಗೂ ಆತನ ತಾಯಿ ಡೆಬೋರಾ ಅವರು ದಿ ಸನ್ ಪತ್ರಿಕೆ ವಿರುದ್ಧ ದೂರು ದಾಖಲಿಸಿದ್ದಾರೆ. ಕುಟುಂಬದ ಗೌಪ್ಯತೆ ಹಾಗೂ ದೀರ್ಘ ಕಾಲ ಮರೆತು ಹೋದ ದುರಂತವನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದ ದಿ ಸನ್ ವಿರುದ್ಧ ಸ್ಟೋಕ್ಸ್ ಅವರು ಕಾನೂನು ಕ್ರಮ ಜರುಗಿದ್ದಾರೆ.