ಮಹಿಳೆಯರಿಗಿಲ್ಲ ಇನ್ನೂ ಮುಕ್ತ ಸ್ವಾತಂತ್ರ್ಯ : ಡಾ.ರತ್ನಾ ಬಾಳಪ್ಪನವರ

Still no freedom for women: Dr. Ratna Balappa

ಮಹಿಳೆಯರಿಗಿಲ್ಲ ಇನ್ನೂ ಮುಕ್ತ ಸ್ವಾತಂತ್ರ್ಯ : ಡಾ.ರತ್ನಾ ಬಾಳಪ್ಪನವರ 

ಹಾರೂಗೇರಿ 14 :  12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ತನ್ನ ಸಹೋದರಿಗೆ ಧಾರ್ಮಿಕ ಸಂಸ್ಕಾರ ನೀಡದ ವಿರುದ್ಧ ಹೋರಾಟ ಮಾಡಿ ಮಹಿಳೆಯರಿಗೆ ಸ್ವಾತಂತ್ರ್ಯ ನೀಡಿದ ಮಹಾಚೇತನ. ಆದರೆ ಇನ್ನೂ ದೇಶದ ಮಹಿಳೆಯರಿಗೆ ಮುಕ್ತ ಸ್ವಾತಂತ್ರ್ಯ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸರ್ವಾಧ್ಯಕ್ಷೆ ಡಾ.ರತ್ನಾ ಬಾಳಪ್ಪನವರ ಹೇಳಿದರು.ಪಟ್ಣಣದ ಬಸವಬ್ಯಾಕೂಡ ರಸ್ತೆಯ ನಿಶ್ಚಿಂತ ನೆಲೆಯಲ್ಲಿ ನಡೆದ ರಾಯಬಾಗ ತಾಲೂಕು ಮಟ್ಟದ ಪ್ರಥಮ ಕದಳಿ ಮಹಿಳಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ರಾಯಬಾಗ ತಾಲೂಕು ಕದಳಿ ಮಹಿಳಾ ವೇದಿಕೆಯವರಿಂದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.  ಬಸವಣ್ಣನವರು ಮಹಿಳೆಯರಿಗೆ ಸಮಾನತೆ ನೀಡಲು ಹೋರಾಟ ನಡೆಸಿದ್ದರು. ಸಮಾಜದ ಅಭಿವೃದ್ಧಿ ಮತ್ತು ಮಹಿಳೆಯರನ್ನು ಮುಖ್ಯ ವಾಹಿನಿಗೆ ತರಬೇಕಾದರೆ ಪುರುಷರಿಗೆ ಸರಿಸಮನಾದ ಸ್ಥಾನಮಾನ ಕೊಡಬೇಕೆಂದು ಡಾ.ರತ್ನಾ ಆಗ್ರಹಿಸಿದರು.  

   ಸಾನಿಧ್ಯ ವಹಿಸಿದ್ದ ಹಂದಿಗುಂದ-ಆಡಿ ಸಿದ್ಧೇಶ್ವರ ವಿರಕ್ತಮಠದ ಪೂಜ್ಯ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡುತ್ತ ಸ್ವಾನುಭವವೇ ಮಹಿಳಾ ಸಾಹಿತ್ಯದ ಅಂತಿಮ ಸತ್ಯವಾಗುತ್ತದೆ. ಆಧುನಿಕ ಬದುಕಿನಲ್ಲಿ ಮಹಿಳೆಯರು ಶಿವಶರಣೆಯರ ತತ್ವಗಳನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ರಾಯಬಾಗ ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಅನುಸೂಯಾ ಮುಳವಾಡ, ಕಾರ್ಯದರ್ಶಿ ಆಶಾಕುಮಾರಿ ನಾವಿ, ಉಪಾಧ್ಯಕ್ಷೆ ಮಹಾದೇವಿ ಪಾಟೀಲ, ಸುಜಾತಾ ಉಮರೆ, ಶಿವಲೀಲಾ ಸಾಲಿಮಠ, ಗೀತಾ ಮಾಳಶೆಟ್ಟಿ, ಆಶಾ ಹೊನವಾಡೆ, ನಿರ್ಮಲಾ ತಾರಿಹಾಳಕರ, ಜಯಶ್ರೀ ರಾಜಪ್ಪನವರ, ಗೀತಾ ಬಾಡಗಿ, ರೇಖಾ ಗುಪ್ತೆ, ಅನೀತಾ ತಾರಿಹಾಳಕರ ಹಾಗೂ ಗಣ್ಯರಾದ ಜನತಾ ಬ್ಯಾಂಕ್ ಅಧ್ಯಕ್ಷ ರಾಜಶೇಖರ ಪಾಟೀಲ, ಡಾ.ಸಿ.ಆರ್‌.ಗುಡಸಿ, ಮಹಾದೇವ ನಾವಿ, ಡಾ.ಬಸವರಾಜ ಹೊಸಪೇಟೆ ಸೇರಿದಂತೆ ಎಲ್ಲ ಮಹಿಳಾ ಘಟಕದ, ಕದಳಿ ವೇದಿಕೆ ಸದಸ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ವಾಣಿ ಚೌಗಲಾ ನಿರೂಪಿಸಿದರು.