ಏಕದಿನ ಕ್ರಿಕೆಟ್ಗೆ ವಿದಾಯ ಹೇಳಲು ಸ್ಟೈನ್ ಚಿಂತನೆ
ಕೇಫ್ ಟಔನ್(ದಕ್ಷಿಣ ಆಫ್ರಿಕಾ): ಮುಂದಿನ ವರ್ಷ ಇಂಗ್ಲೆಂಡ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಬಳಿಕ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೈನ್ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರೆ.
"ತನ್ನ ಅನುಭವ ವಿಶ್ವಕಪ್ ತಂಡದಲ್ಲಿ ಸ್ಥಾನಗಳಿಸಿಕೊಳ್ಳಲು ನೆರವಾಗಲಿದೆ ಎನ್ನುವ ಭರವಸೆ ನನಗಿದೆ, ಆದರೆ ಈ ವಿಶ್ವಕಪ್ ಮುಗಿದ ಬಳಿಕ ಮತ್ತೆ ನಾನು ದಕ್ಷಿಣ ಆಫ್ರಿಕಾ ಪರವಾಗಿ ಬಿಳಿ ಚೆಂಡಿನೊಂದಿಗೆ ಕ್ರಿಕೆಟ್ ಆಡಲು ಬಯಸುವುದಿಲ್ಲ." ಡೇಲ್ ಸ್ಟೈನ್ ಹೇಳಿದ್ದಾರೆ. ಇತ್ತೀಚೆಗೆ ಪದೇ ಪದೇ ಗಾಯದ ಸಮಸ್ಯೆಗೆ ಈಡಾಗುತ್ತಿರುವ ಸ್ಟೈನ್ "ನಾನು ಇನ್ನೊಂದು ವಿಶ್ವಕಪ್ ಪ್ರಾರಂಭವಾಗುವ ವೇಳೆಗೆ ನಲವತ್ತರ ಗಡಿ ಮುಟ್ಟಿರುತ್ತೇನೆ" ಎಂದಿದ್ದಾರೆ. ದಕ್ಷಿಣ ಆಫ್ರಿಕಾ ತಂಡದಲ್ಲಿ ಅಗ್ರ ಶ್ರೇಯಾಂಕದ ಆಟಗಾರರಿಗೆ ಉತ್ತಮ ಆಟವಾಡುವ ಅನುಭವವಿದೆ, ಆದರೆ ಕೆಳ ಕ್ರಮಾಂಕದ ಆಟಗಾರರಿಗೆ ಅನುಭವ ಕೊರತೆ ಇದೆ.. ಇದೇ ಕಾರಣಕ್ಕೆ ನಾನು ವಿಶ್ವಕಪ್ ಆಯ್ಕೆ ಪ್ರಶ್ನೆ ಬಂದಾಗ ಟ್ರಂಪ್ ಕಾಡರ್್ ಆಗುವ ಸಾಧ್ಯತೆ ಇದೆ. ವಿಶ್ವಕಪ್ನಲ್ಲಿ ನನ್ನ ಅನುಭವ ನೆರವಿಗೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸ್ಟೈನ್ ಟೆಸ್ಟ್ ಕ್ರಿಕೆಟ್ ಮುಂದುವರಿಯುವುದಾಗಿ ಹೇಳಿದ್ದಾರೆ.35 ವರ್ಷದ ಕ್ರಿಕೆಟಿಗ ಇದುವರೆಗೆ 115 ಏಕದಿನ ಪಂದ್ಯಗಳನ್ನಾಡಿ 8.28 ಸರಾಸರಿಯಲ್ಲಿ 298 ರನ್ ಕಲೆಹಾಕಿದ್ದಾರೆ. ಅಲ್ಲದೆ ಏಕದಿನ ಬೌಲಿಂಗ್ ನಲ್ಲಿ ಒಟ್ಟಾರೆ 180 ವಿಕೆಟ್ ಗಳಿಸಿದ್ದಾರೆ. ಇನ್ನು ಟೆಸ್ಟ್ ನಲ್ಲಿ ಆಡಿರುವ 88 ಪಂದ್ಯಗಳಲ್ಲಿ 1194 ರನ್ ಹಾಗೂ 421 ವಿಕೆಟ್ ಗಳಿಸಿಕೊಂಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 