ವಿಕಲಚೇತನರಿಗಾಗಿ ಪ್ರಸಕ್ತ ಆಯವ್ಯಯದಲ್ಲಿ ಉತ್ತಮ ಯೋಜನೆ ಜಾರಿಗೆ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ವಿಕಲಚೇತನರಿಗಾಗಿ ಪ್ರಸಕ್ತ ಆಯವ್ಯಯದಲ್ಲಿ ಉತ್ತಮ ಯೋಜನೆ ಜಾರಿಗೆ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ Steps to implement better schemes for the disabled in the current budget: Minister Lakshmi Hebbalkar

ಲೋಕದರ್ಶನ ವರದಿ 

ಬೆಳಗಾವಿ  ಫೆ. 21 : ರಾಜ್ಯದ ಸರ್ವ ಜನರ ಏಳಿಗೆಗಾಗಿ ರಾಜ್ಯ ಸರಕಾರದಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ವಿಕಲಚೇತನರಿಗಾಗಿ ಪ್ರಸಕ್ತ ಆಯವ್ಯಯದಲ್ಲಿ ವಿಶೇಷ ಅನುದಾನದ ಜೊತೆಗೆ ಉತ್ತಮ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಹೇಳಿದರು.  

 ಜಿಲ್ಲಾ ಕ್ರೀಡಾಂಗಣದಲ್ಲಿ ಫೆ. 21  (ಶನಿವಾರ) ರಂದು "ವಿಶ್ವ ವಿಕಲಚೇತನರ ದಿನಾಚರಣೆ" ಪ್ರಯುಕ್ತ ಬೆಳಗಾವಿ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ  ಉದ್ಘಾಟಿಸಿ ಅವರು ಮಾತನಾಡಿದರು. 

 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸಮಾಜದ ಒಂದು ಭಾಗವಾಗಿದ್ದು ವಿಶೇಷಚೇತನ ಮಕ್ಕಳಿಗಾಗಿ ಪ್ರಸಕ್ತ ಆಯವ್ಯಯದಲ್ಲಿ ವಿಶೇಷ ಯೋಜನೆಗಳನ್ನು ತರಲಾಗುವುದು. ವಿಕಲಚೇತನರು ಕೂಡ ಯಾರಿಗೂ ಕಡಿಮೆ ಇಲ್ಲ. ಇಂದು ಅನೇಕ ವಿಕಲಚೇತನ ಮಕ್ಕಳು ಎಷ್ಟೇ ಸಮಸ್ಯೆಗಳು ಇದ್ದರೂ ಕೂಡ ಉತ್ತಮ ಸಾಧನೆ ಮಾಡಿದ ಉದಾಹರಣೆಗಳಿವೆ. ವಿಶೇಷ ಚೇತನ ಮಕ್ಕಳಲ್ಲಿನ ಪ್ರೊತ್ಸಾಹ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದು, ವಿಶೇಷ ಚೇತನ ಮಕ್ಕಳಿಗೆ ವಿದ್ಯಾಭ್ಯಾಸ ಹೇಳುವಂತಹ ಶಿಕ್ಷಕರ ಕಾರ್ಯ ಹಾಗೂ ವಿಶೇಷ ಚೇತನರಿಗೆ ಸದಾ ಶಿಕ್ಷಣದ ಸೇವೆಯನ್ನು ನೀಡುತ್ತಿರುವ ಎಲ್ಲಾ ಸಂಸ್ಥೆಗಳ ಕಾರ್ಯ ಶ್ಲಾಘನೀಯವಾಗಿದೆ.  

ವಿಕಲಚೇತನರ ಅಭಿವೃದ್ಧಿಗಾಗಿ ಇಂದು ರಾಜ್ಯ ಸರಕಾರ ರೂಪಿಸಿರುವ ಅನೇಕ ಯೋಜನೆಗಳ ಸೌಲಭ್ಯಗಳು ಅರ್ಹರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ತಿಳಿಸಿದರು.   

ಈ ಕ್ರೀಡಾಕೂಟದಲ್ಲಿ ಜಿಲ್ಲೆಯ ವಿಶೇಷ ಶಾಲೆಗಳ ಹಾಗೂ ಫಿಜಿಕಲಿ ಹ್ಯಾಂಡಿಕ್ಯಾಪ್ಡ್‌  ಅಸೋಸಿಯೇಷನ್ ಬೆಳಗಾವಿ, ಸಮರ್ಥನಂ ಅಂಗವಿಕಲರ ಸಂಸ್ಥೆ ಬೆಳಗಾವಿ, ಬೆಳಗಾವಿ ಜಿಲ್ಲಾ ಕಿವುಡರ ಸಂಘ ಬೆಳಗಾವಿ, ಸಮನ್ವಯ ಅಂಧರ ಸಂಸ್ಥೆ ಬೆಳಗಾವಿ, ಡಿ.ಡಿ.ಆರಿ​‍್ಸ ಬೆಳಗಾವಿ, ವಿಕಲಚೇತನರ ಸರ್ಕಾರಿ ನೌಕರರ ಸಂಘ ಬೆಳಗಾವಿ , ಇಲ್ಲಿನ ವಿಕಲಚೇತನರ ಕ್ರೀಡಾ ಪಟುಗಳು ಸೇರಿದಂತೆ ಸುಮಾರು 800 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನ ಕ್ರೀಡಾ ಪಟುಗಳು ಹಾಗೂ ಜಿಲ್ಲೆಯ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರು ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದರು.  

ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಬಿ. ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ಚೇತನ್‌ಕುಮಾರ್, ಜಿಲ್ಲಾ ನಿರೂಪಣಾಧಿಕಾರಿ ಅಣ್ಣಪ್ಪ ಹೆಗಡೆ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಕಾಂಚನಾ ಅಮಟೆ,  ಬೆಳಗಾವಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಮಿತ್ರಾ  ಡಿ. ಬಿ, ಎ.ಪಿ.ಹೆಚ್ ಅಧ್ಯಕ್ಷರಾದ ವಾಮನ ಕಟ್ಟಿ ಅವರುಗಳು  ಉಪಸ್ಥಿತರಿದ್ದರು.  ಜಿಲಾ ್ಲಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್ ಸ್ವಾಗತಿಸಿದರು. 

ಜಿಲ್ಲೆಯ  ವಿಶೇಷ ಶಾಲೆಗಳಾದ ಕಿವುಡ ಮಕ್ಕಳ ಸರ್ಕಾರಿ ಶಾಲೆ ಬೆಳಗಾವಿ, ಮಾಹೇಶ್ವರಿ ಅಂಧ ಮಕ್ಕಳ ಶಾಲೆ ಬೆಳಗಾವಿ,  ಆರಾಧನಾ ಬುದ್ಧಿಮಾಂಧ್ಯ ಮಕ್ಕಳ ಶಾಲೆ ಬೆಳಗಾವಿ, ಶ್ರೀ ರೇಣುಕಾ ಕೃಪ ಬುದ್ಧಿಮಾಂದ್ಯ ಮಕ್ಕಳ ಶಾಲೆ ಸವದತ್ತಿ, ವಿ. ಪಿ. ಜೇವೂರ ಸ್ಮಾರಕಕಿವುಡ ಮಕ್ಕಳ ಶಾಲೆ ಮುನವಳ್ಳಿ, ದೂದನಾನಾ ಬುದ್ಧಿಮಾಂಧ್ಯ ಮಕ್ಕಳ ಶಾಲೆ ಹಿಡಕಲ್‌ಡ್ಯಾಂ,  ಕಾರ್ಮೆಲ್ ಬುದ್ಧಿಮಾಂದ್ಯ ಮಕ್ಕಳ ಶಾಲೆ, ಬೈಲಹೊಂಗಲ, ಬರ್ಡ್ಸಕಿವುಡ ಮಕ್ಕಳ ಶಾಲೆ  ತುಕ್ಕಾನಟ್ಟಿ,   ನಿತಿನಕುಮಾರ ಕದಂ ಕಿವುಡ ಮಕ್ಕಳ ಶಾಲೆ, ನಿಪ್ಪಾಣಿ,  ಆಶಾ ಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆ ಯಕ್ಸಂಬಾ,  ಶ್ರೀ ಶಾರದಾದೇವಿ ಬುದ್ಧಿಮಾಂದ್ಯ ಮಕ್ಕಳ ಶಾಲೆ ಅಥಣಿ,ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ಶಾಲೆ, ಬೆಳಗಾವಿ,ಫಿಜಿಕಲಿ ಹ್ಯಾಂಡಿಕ್ಯಾಪ್ಡ್‌ ಅಸೋಸಿಯೇಶನ್ ಬೆಳಗಾವಿ,  ಸಮರ್ಥ ಅಂಗವಿಕಲರ ಸಂಸ್ಥೆ ಬೆಳಗಾವಿ,  ಬೆಳಗಾವಿ ಜಿಲ್ಲಾ ಕಿವುಡರ ಸಂಘ ಬೆಳಗಾವಿ, ಸಮನ್ವಯ ಅಂಧರ ಸಂಸ್ಥೆ ಬೆಳಗಾವಿ, ಡಿ.ಡಿ.ಆರ್‌.ಸಿ. ಬೆಳಗಾವಿ, ವಿಕಲಚೇತನ ಸರ್ಕಾರಿ ನೌಕರರ ಸಂಘ ಬೆಳಗಾವಿ ಇಲ್ಲಿನ ವಿಕಲಚೇತನ ಕ್ರೀಡಾ ಪಟುಗಳು ಸೇರಿದಂತೆ ಸುಮಾರು 800ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನ ಕ್ರೀಡಾ ಪಟುಗಳು ಹಾಗೂ ಜಿಲ್ಲೆಯ ವಿಕಲಚೇತನ ಪುನರ್ವಸತಿ ಕಾರ್ಯಕರ್ತರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.