ಬೆಳವಡಿ ಮಲ್ಲಮ್ಮ ಉತ್ಸವ-2026 ಪ್ರಚಾರ ಸಮಿತಿ ಸಭೆ

ಬೆಳವಡಿ ಮಲ್ಲಮ್ಮ ಉತ್ಸವ-2026 ಪ್ರಚಾರ ಸಮಿತಿ ಸಭೆ Steps taken for widespread promotion of Veerarani Belavadi Mallamma Festival

ಲೋಕದರ್ಶನ ವರದಿ 

ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವದ ವ್ಯಾಪಕ ಪ್ರಚಾರಕ್ಕೆ ಕ್ರಮ 

ಬೆಳಗಾವಿ.ಫೆ.21: ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವ ಫೆ.28 ಹಾಗೂ ಮಾ.1 ರಂದು ಜರುಗಲಿದ್ದು, ಉತ್ಸವದ ಕುರಿತು ವ್ಯಾಪಕ ಪ್ರಚಾರಕ್ಕೆ ಕ್ರಮವಹಿಸಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೆಶಕರಾದ ಗುರುನಾಥ ಕಡಬೂರ ಅವರು ತಿಳಿಸಿದರು. 

ಬೆಳವಡಿ ಗ್ರಾಮಪಂಚಾಯತ ಸಭಾಂಗಣದಲ್ಲಿ ಶನಿವಾರ(ಫೆ.21) ಜರುಗಿದ ಪ್ರಚಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವ-2026ದ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳುವುದ ಮೂಲಕ ಬೆಳವಡಿ ಮಲ್ಲಮ್ಮ ಉತ್ಸವ ಯಶಸ್ವಿಗೊಳಿಸಲು ಪ್ರಚಾರ ಸಮಿತಿಯ ಪಾತ್ರ ಬಹು ಮುಖ್ಯವಾಗಿದೆ ಎಂದರು.  

ಉತ್ಸವ ಪ್ರಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಬ್ಯಾನರಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು, ಕಾರ್ಯಕ್ರಮದ ಕುರಿತು ಕಾಲ ಕಾಲಕ್ಕೆ ಪತ್ರಿಕಾ ಪ್ರಕಟಣೆ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ವಾರ್ತಾ ಇಲಾಖೆ ಉಪನಿರ್ದೆಶಕರಾದ ಗುರುನಾಥ ಕಡಬೂರ ಅವರು ತಿಳಿಸಿದರು. 

ಸಮಿತಿ ಸದಸ್ಯರುಗಳು ಮಾತನಾಡಿ ಉತ್ಸವದ ಕುರಿತು ಪ್ರಚಾರ ಬ್ಯಾನರನ್ನು ಬೆಳಗಾವಿಯ ಚನ್ನಮ್ಮ ವೃತ್ತ ಸೇರಿದಂತೆ ಜಿಲ್ಲೆಯ ಪ್ರಮುಖ ನಗರಗಳಲ್ಲಿ, ಬೆಳವಡಿ ಮಲ್ಲಮ್ಮ ಅವರ ಇತಿಹಾಸವುಳ್ಳ ಕರಪತ್ರಗಳನ್ನು ಸಾಕಷ್ಟು ಮುಂಚಿತವಾಗಿ ಮುದ್ರಿಸಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ, ತಾಲೂಕು ಕೇಂದ್ರಗಳಲ್ಲಿ ವಿತರಿಸಲು, ಬೆಳವಡಿ ಮಲ್ಲಮ್ಮಳ ವೀರಜ್ಯೋತಿ ಸಾಗುವ ಮಾರ್ಗಗಳಲ್ಲಿ ಆಯಾ ತಾಲೂಕು ಕೇಂದ್ರಗಳಲ್ಲಿ ಬ್ಯಾನರ ಅಳವಡಿಕೆ ಹಾಗೂ ಕರಪತ್ರ ವಿತರಣೆ ಸೇರಿದಂತೆ ಅನೇಕ ಸಲಹೆಗಳನ್ನು ನೀಡಿದರು. 

ಸಭೆಯಲ್ಲಿ ಸಮಿತಿ ಸದಸ್ಯರುಗಳಾದ ಯಾಸೀನ್ ಕಿತ್ತೂರ,ಮಹೇಶ ರೇವಯ್ಯನವರ, ಮಡಿವಾಳೆಪ್ಪ ಕಿತ್ತೂರ, ಅಶೋಕ ಶೀಲವಂತರ, ಮಹಾಂತೇಶ ಬಳಿಗಾರ, ವಿಶ್ವನಾಥ ಪೂಜೇರ, ವಾರ್ತಾ ಸಹಾಯಕರಾದ ವಿಜಯಕುಮಾರ ಬೆಟಗೇರಿ ಹಾಜರಿದ್ದರು.