ಕಾಳಿ ನದಿಗೆ ಕಾರವಾರ ಬಳಿ ಉಕ್ಕಿನ ಕಮಾನಿನ ಸೇತುವೆ : ಎನ್ ಎಚ್ ಎ ಐ ನಿರ್ಧಾರ
Steel arch bridge over Kali river near Karwar: NHAI decision
ಕಾರವಾರ 03: ಕಳೆದ ವರ್ಷ ಅಗಸ್ಟ 7 ರಂದು ಕುಸಿದು ಬಿದ್ದಿದ್ದ ಕಾಳಿ ನದಿಯ ಹಳೆಯ ಸೇತುವೆ ಇದ್ದ ಜಾಗದಲ್ಲಿ ಉಕ್ಕಿನ ಕಮಾನಿನ ಸೇತುವೆಯನ್ನು ನೂತನವಾಗಿ ನಿರ್ಮಿಸಲು ಎನ್ ಎಚ್ ಎ ಐ ನಿರ್ಧರಿಸಿದೆ. ಈ ಕಾಮಗಾರಿಯನ್ನು ಐಆರ್ ಬಿ ಮಾಡಲಿದೆ . ಈ ಮಳೆಗಾಲ ಮುಗಿಯುವುದರೊಳಗೆ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳುವ ಕೆಲಸ ಭರದಿಂದ ನಡೆದಿದೆ.ಹಳೆಯ ಸೇತುವೆ ಕುಸಿದು ಬಿದ್ದ ಸ್ಥಳದ ಸಮೀಪದಲ್ಲೇ ಕಬ್ಬಿಣದ ಸರಳುಗಳು ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ರಾಶಿ ಹಾಕಲಾಗಿದೆ. ದಾಸ್ತಾನಿನ ಸುತ್ತ, ಹೆದ್ದಾರಿಯ ಬದಿಯಲ್ಲಿ ಸುರಕ್ಷತೆ ದೃಷ್ಟಿಯಿಂದ ಶೀಟುಗಳನ್ನು ಜೋಡಿಸಿ ತಾತ್ಕಾಲಿಕ ಗೋಡೆ ನಿರ್ಮಿಸಿಕೊಳ್ಳಲಾಗಿದೆ.665 ಮೀಟರ್ ಉದ್ದದ ಸೇತುವೆ ನಿರ್ಮಿಸಬೇಕಿದ್ದು, ಉಕ್ಕಿನ ಕಮಾನಿನ ಮಾದರಿಯ ಸೇತುವೆ ನಿರ್ಮಾಣಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿಹಿ66ರ ನಿರ್ಮಾಣ, ನಿರ್ವಹಣೆ ನಡೆಸುತ್ತಿರುವ ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯೇ ಹೊಸ ಸೇತುವೆ ನಿರ್ಮಾಣ ಮಾಡಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಉದಯವಾಣಿಗೆ ಹೇಳಿದರು.
ಚತುಷ್ಪಥ ರಾಷ್ಟ್ರೀಯ ಹೆದ್ದಾರಿಹಿ66ರಲ್ಲಿ 2042ರ ವರೆಗೂ ನಿರ್ವಹಣೆಯ ಜವಾಬ್ದಾರಿ ಐಆರ್ ಬಿ ಕಂಪನಿಗೆ ಇದೆ. ನಿರ್ಮಿಸಿ, ನಿರ್ವಹಿಸಿ, ಹಸ್ತಾಂತರಿಸುವ ಒಪ್ಪಂದದಡಿ ಈ ಯೋಜನೆ ನಡೆಯುತ್ತಿರುವುದರಿಂದ ಸೇತುವೆ ನಿರ್ಮಾಣ, ನಿರ್ವಹಣೆಯನ್ನು ಅವರೇ ನಿಭಾಯಿಸಲಿದ್ದಾರೆ ಎಂದರು.ಸೇತುವೆ ನಿರ್ಮಾಣಕ್ಕೆ ಗಟ್ಟಿ ಫೌಂಡೇಶನ್ ಅಗತ್ಯವಿದೆ.
ಎಷ್ಟು ಆಳದವರೆಗೆ ಸೇತುವೆಯ ಕಂಬಗಳನ್ನು ನಿರ್ಮಿಸಬೇಕು ಎಂಬುದರ ಖಚಿತತೆಗೆ ಮಳೆಗಾಲ ಮುಗಿದ ತಕ್ಷಣ ಪೈಲಿಂಗ್ ಪರೀಕ್ಷೆ ನಡೆಯುತ್ತದೆ ಎಂದರು.ಹೊಸ ಸೇತುವೆ ನಿರ್ಮಾಣಕ್ಕೆ ಸದ್ಯದ ಪ್ರಕಾರ 120 ಕೋಟಿ ರೂ. ವೆಚ್ಚ ತಗಲುವ ಅಂದಾಜಿದೆ. ಮಳೆಗಾಲ ಮುಗಿಯುವುದರೊಳಗೆ ನಿರ್ಮಾಣಕ್ಕೆ ಪ್ರಾಥಮಿಕ ಹಂತದಲ್ಲಿ ಬೇಕಿರುವ ಸಾಮಗ್ರಿಗಳನ್ನು ಸಿದ್ಧವಿಟ್ಟುಕೊಳ್ಳಲಾಗುತ್ತಿದೆ. ಮಳೆ ಕಡಿಮೆ ಆಗುತ್ತಿದ್ದಂತೆಯೇ ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲವಾರದಲ್ಲಿ ಕೆಲಸ ಪ್ರಾರಂಭಿಸಲಿದ್ದೇವೆ ಎಂದು ಐಆರ್‌ಬಿ ಇನ್‌ಫ್ರಾಸ್ಟ್ರಕ್ಚರ್ ಕಂಪನಿಯ ಮುಖ್ಯ ವ್ಯವಸ್ಥಾಪಕ ಮೋಹನದಾಸ್ ಪ್ರತಿಕ್ರಿಯಿಸಿದ್ದಾರೆ.ಹೊಸ ಫೌಂಡೇಶನ್: ಕಾಳಿ ನದಿಯ ಹಳೆಯ ಸೇತುವೆ ಇದ್ದ ಜಾಗದಲ್ಲಿ ಸಾಲು ಸಾಲಾಗಿ 8ಕ್ಕೂ ಹೆಚ್ಚು ಅಡಿಪಾಯದ ಅವಶೇಷಗಳು ಇವೆ. ಆ ಸ್ಥಳ ಬಳಕೆ ಮಾಡಿ ಹೊಸ ಸೇತುವೆ ನಿರ್ಮಾಣ ಆಗಬಹುದು ಎಂಬ ಆತಂಕದ ಜನರಲ್ಲಿದೆ. ಹೊಸ ಸೇತುವೆ ನಿರ್ಮಾಣಕ್ಕೆ ಈಗಿರುವ ಯಾವುದೇ ಅಡಿಪಾಯದ ಕಂಬಗಳನ್ನು ಬಳಕೆ ಮಾಡುವುದಿಲ್ಲ. ಹೊಸದಾಗಿ ಪೈಲಿಂಗ್ ಪರೀಕ್ಷೆ ನಡೆಸಿ, ಭದ್ರ ಅಡಿಪಾಯದೊಂದಿಗೆ, ಗಟ್ಟಿಮುಟ್ಟಾದ ಕಂಬಗಳನ್ನು ನಿರ್ಮಿಸಲಾಗುತ್ತದೆ. ಅದರ ಮೇಲೆ ಸೇತುವೆ ನಿರ್ಮಾಣ ಆಗಲಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಕೆ.ಶಿವಕುಮಾರ್ ತಿಳಿಸಿದ್ದಾರೆ.‘ಸೇತುವೆಯ ಅವಶೇಷಗಳನ್ನು ನೀರೀಕ್ಷಿತ ಅವಧಿಗೆ ಮೊದಲೇ ತೆರವುಗೊಳಿಸಲಾಯಿತು. ಮುಂದಿನ ಎರಡೂವರೆ ವರ್ಷದೊಳಗೆ ಸೇತುವೆ ನಿರ್ಮಿಸುವ ಗುರಿ ಇದೆ ಎಂದರು.*****ಕೋಟ್....*ಕಾಳಿ ನದಿಗೆ ಹೊಸ ಸೇತುವೆ ನಿರ್ಮಾಣಕ್ಕೆ ಪ್ರಾಥಮಿಕ ಹಂತದ ಪ್ರಕ್ರಿಯೆ, ಸಾಮಾಗ್ರಿ ಸಂಗ್ರಹ ಪ್ರಾರಂಭವಾಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. -ಕೆ.ಶಿವಕುಮಾರ್‌ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ. ಕಾರವಾರ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 