ಕಾನೂನು ಬಾಹಿರ ಅಪರಾಧಗಳಿಂದ ದೂರವಿರಿ: ಪಿಎಸ್‌ಐ ಮಧು ಎಲ್.
Stay away from illegal crimes: PSI Madhu L.
ಮಹಾಲಿಂಗಪೂರ 29: ಬಾಲ್ಯವಿವಾಹ ಮಾಡುವುದು ಕಾನೂನು ಬಾಹಿರ ಅಪರಾಧ, ಎಂಬುದರ ಬಗ್ಗೆ ಜನ ತಿಳಿದುಕೊಳ್ಳಬೇಕು. ಬಾಲ್ಯವಿವಾಹ ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಕರೆ ಮಾಡಿ.ಸೈಬರ್ ಅಪರಾಧಗಳು ಕೂಡ ಇತ್ತೀಚೆಗೆ ಹೆಚ್ಚಾಗಿವೆ. ತಮ್ಮ ಹಣವನ್ನು ಸೈಬರ್ ಅಪರಾಧದಲ್ಲಿ ಕಳೆದುಕೊಂಡರೆ ಒಂದು ಗಂಟೆ ಒಳಗೆ ಗೋಲ್ಡನ್ ಅವರ್ ಅಂತ ಇದ್ದು 1390 ನಂಬರ್ ಗೆ ಕರೆ ಮಾಡುವಂತೆ ತಿಳಿಸಿ.ವಾಹನ ಚಲಾವಣೆ ಪರವಾನಿಗೆಯ ಜೊತೆಗೆ ಹೆಲ್ಮೆಟ್ ಕಡ್ಡಾಯವಿರಲಿ, ಕಳ್ಳತನ ಬಗ್ಗೆ ಎಚ್ಚರಿಕೆ ಇರಲಿ.ಮಹಿಳೆಯರ ಕಾನೂನು ಜೊತೆಗೆ ಶಿಕ್ಷಣ,ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಕರ್ತವ್ಯ ಅತಿ ಮುಖ್ಯ ಎಂದು ಮಹಾಲಿಂಗಪುರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸೈ ಮಧು ಎಲ್ ಹೇಳಿದರು.
ಸಮೀಪದ ಮಾರಪೂರ ಗ್ರಾಮದ ಪಿಂಜಾರ ಮಡ್ಡಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಇತ್ತೀಚೆಗೆ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳು ಮತ್ತು ಅಪರಾಧಗಳ ಬಗ್ಗೆ ಎಚ್ಚರವಹಿಸಿ ಎಂದರು ಜೊತೆಗೆ ಗ್ರಾಮಸ್ಥರೊಡನೆ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿ ತಿಳುವಳಿಕೆ ನೀಡಿದರು.
ಪೋಲಿಸ್ ಸಿಬ್ಬಂದಿಗಳಾದ ಎಎಸ್‌ಐ ಮಠ, ಎಂ ಎಂ ಬೆಳಕೋಡ, ಶ್ರೀಶೈಲ ಓರಸಂಗ, ಇಮ್ರಾನ ಪೆನಿಬಂದ, ಎಸ್ ಎಸ್ ನಾಗನಗೌಡರ ಸೇರಿದಂತೆ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 