ಮಾದಕ ವಸ್ತುಗಳ ಸೇವನೆಯಿಂದ ದೂರವಿರಿ:ಪಿಎಸ್‌ಐ ಮಂಟೂರ

ಮಾದಕ ವಸ್ತುಗಳ ಸೇವನೆಯಿಂದ ದೂರವಿರಿ:ಪಿಎಸ್‌ಐ ಮಂಟೂರ Stay away from drug use: PSI Mantoora

ಕಲಕೇರಿ  28: ಮಾದಕ ವಸ್ತುಗಳ ಸೇವನೆಗೆ ಒಂದು ಬಾರಿ ಅಂಟಿಕೊಂಡರೆ ಅದರಿಂದ ಸರಳವಾಗಿ ಹೊರಬರಲು ಸಾಧ್ಯವಿಲ್ಲ ನಮ್ಮ ಯುವಕರು ಅದರಲ್ಲೂ ವಿಸೇಷವಾಗಿ ವಿಧ್ಯಾರ್ಥಿಗಳು ಇದರಿಂದ ದೂರ ಇರಲು ಪ್ರಯತ್ನಿಸಬೇಕು ಎಂದು ಕಲಕೇರಿ ಪಿಎಸ್‌ಐ ಸುರೇಶ ಮಂಟೂರ ಹೆಳಿದರು. 

ಕಲಕೇರಿ ಗ್ರಾಮದ ಮಲ್ಲಿಕಾರ್ಜುನ ವಿಧ್ಯಾವರ್ಧಕ ಸಂಘದ ಬಸವೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಕಲಕೇರಿ ಪೋಲಿಸ್ ಠಾಣೆಯ ಸಹಯೋಗದಲ್ಲಿ ಹಮ್ಮಿಕೊಂಡ ಮಾದಕ ವಸ್ತುಗಳ ನಿಷೇದ ಮತ್ತು ವಿಧ್ಯಾರ್ಥಿಗಳಿಗೆ ಅರೀವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನಿಡಿ ಅವರು ಮಾತನಾಡಿದರು. 

ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ಜೂನ್ 26 ರಂದು ಮಾದಕ ವಸ್ತುಗಳ ದುರ್ಭಳಕೆ ಮತ್ತು ಅದರ ಅಕ್ರಮ ಕಳ್ಳಸಾಗಾಣಿಕೆಯನ್ನು ತಡೆಯಲು ಅಂತರಾಷ್ಟ್ರೀಯ ಮಾದಕ ದ್ರವ್ಯ ಮ್ತು-್ತ ಕಳ್ಳಸಾಗಣೆ ವಿರೋದಿದಿನವನ್ನು ಆಚರಿಸಲಾಗುತ್ತಿದ್ದು ಯುವ ಸಮೂಹ,ವಿಧ್ಯಾವಂತರು ಗ್ರಾಮೀಣ ಪ್ರದೇಶದ ಜನತೆಗೆ ಇದರ ಕುರಿತು ಅವರಲ್ಲಿ ಅರಿವೂ ಮೂಡಿಸುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಸಲಹೆ ಮಾಡಿದರು. 

ಧೈಹಿಕ ಶಿಕ್ಷಣ ಉಪನ್ಯಾಸಕ ಶಾಂತು ಧುರ್ಗಿ, ಇಎಲ್‌ಸಿ ಕ್ಲಬ್ ಸಂಚಾಲಕ ಬಸವರಾಜ್ ಕುಂಬಾರ ಮಾತನಾಡಿ  ಇಂದಿನ ಯುವಜನತೆಯು ಮೋಜು ಮಸ್ತಿ, ತಡರಾತ್ರಿಯ ಪಾರ್ಟಿ ಎಂದು ತಮ್ಮ ಜೀವನ ಶೈಲಿಯನ್ನೆ ಬದಲಾಯಿಸಿಕೊಂಡಿದ್ದಾರೆ, ಇದರಿಂದ ಹದಿಹರೇಯದ ವಯಸ್ಸಿನಲ್ಲಿ ಹಾದಿ ತಪ್ಪುವದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ ಆದ್ದರಿಂದ  ಯುವಕರು ದುಚ್ಚಟಗಳಿಗೆ ದಾಸರಾಗದೆ ತಮ್ಮ ಉಜ್ವಲ ಭವಿಷ್ಯವನ್ನು ನಿರ್ಮಿಸಿಕೊಳ್ಳುತ್ತ ನಿರಂತರ ಪ್ರಯತ್ನಶಿಲರಾಗಬೇಕು ಎಂದು ಅವರು ಹೆಳಿದರು. 

ಇದೇ ವೇಳೆ ಕಲಕೇರಿ ಪೋಲಿಸ್ ಠಾಣೆಯ ವತಿಯಿಂದ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಕಾಲೇಜು ವಿಭಾಗದ ವಿಧ್ಯಾರ್ಥಿಗಳಿಗೆ ಪ್ರಭಂದ ಸ್ಪರ್ಧೆಯನ್ನು ಏರಿ​‍್ಡಸಲಾಗಿತ್ತು. 

ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಸಿ ಎಸ್ ಹಿರೇಮಠ,ರವಿಕುಮಾರ ಗುಮಶೇಟ್ಟಿ,ಎಸ್ ಎಸ್ ಧುರ್ಗಿ,ಬಿ ಎಂ ಕುಂಬಾರ,ಜಿ ಜಿ ಮೇಡೆದಾರ,ಗೌಡಪ್ಪಗೌಡ ಹದರಿ, ಶಿವಾನಂದ ಹರಿಜನ್ ಸೇರಿದಂತೆ ಕಲಕೇರಿ ಪೋಲಿಸ್ ಠಾಣೆಯ ಸಿಬ್ಬಂದ್ದಿ ಹಾಜರಿದ್ದರು.