ಬೆಂಗಳೂರು, ಜ 31, ಯುವ ಜನ ಬಾರ್ ಮತ್ತು ಪಬ್ ಸಂಸ್ಕೃತಿಯಿಂದ ದೂರವಿದ್ದು. ವಿದ್ಯಾರ್ಜನೆಗಾಗಿ ಆಧುನಿಕ ತಂತ್ರಜ್ಞಾವನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೋ ಕೆ.ಆರ್. ವೇಣುಗೋಪಾಲ್ ಕರೆ ನೀಡಿದ್ದಾರೆ. ನಗರದ ಗುಪ್ತಾ ಕಾಲೇಜಿನಲ್ಲಿ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯುವ ಜನತೆ ಮದ್ಯಪಾನ, ಧೂಮಪಾನ ಹಾಗೂ ಮಾದಕವಸ್ತುಗಳಿಂದ ದೂರವಿರಬೇಕು. ದೇಶಭಕ್ತಿ, ರಾಷ್ಟ್ರಪ್ರೇಮ ಬೆಳೆಸಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಪ್ರಾಚೀನ ವಿದ್ಯಾಸಂಸ್ಥೆಗಳಾದ ನಳಂದ, ತಕ್ಷಶಿಲಗಳನ್ನು ಮಾದರಿಯಾಗಿ ಮಾಡಿಕೊಂಡು, ಅಲ್ಲಿನ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಅರಿತುಕೊಳ್ಳಬೇಕು. ವಿದ್ಯಾರ್ಜನೆಗಾಗಿ ಇವತ್ತಿನ ತಂತ್ರಜ್ಞಾನವನ್ನು ಸಕರಾತ್ಮಕವಾಗಿ ಬಳಸಿಕೊಳ್ಳಬೇಕೆಂದು ಹೇಳಿದರು.ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಿ.ಕೆ, ರವಿ ಮಾತನಾಡಿ, ವಿದ್ಯಾರ್ಥಿಗಳು ಬರವಣಿಗೆ ಮತ್ತು ಓದುವ ಹವ್ಯಾಸಗಳಲ್ಲಿ ಹೆಚ್ಚು ಹೆಚ್ಚಾಗಿ ತೋಡಗಿಸಿಕೊಳ್ಳಬೇಕು. ತಮ್ಮ ವ್ಯಯಕ್ತಿಕ ಬದುಕಿನಲ್ಲಿ ಜೀವನದ ಮೌಲ್ಯಗಳನ್ನು ಹೆಚ್ಚಿಸಿಕೊಂಡು ಉತ್ತಮವಾಗಿರುವ ವ್ಯಕ್ತಿತ್ವ ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಗುಪ್ತಾ ಕಾಲೇಜಿನ ನಿರ್ದೇಶಕ ಬಿ.ಎಸ್. ಗುಪ್ತಾ ಮಾತನಾಡಿ, ವಿದ್ಯಾರ್ಥಿಗಳು ಬೆಳೆಯುತ್ತಿರುವ ಯುತ್ತಿರವ ತಂತ್ರ ಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ಉತ್ತಮ ಜ್ಞಾನವಂತರಾಗಬೇಕು ಎಂದು ಹೇಳಿದರು.ಗುಪ್ತಾ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷೆ ಡಾ. ಇಂದಿರಾ ಗುಪ್ತಾ ಮಾತನಾಡಿ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕು. ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಕ್ಷಮತೆ ಹೆಚ್ಚಾಗಬೇಕು ಎಂದರು,