ಏಸು ಪ್ರತಿಮೆ : ಡಿಕೆ ಶಿವಕುಮಾರ್ ಗೆ ಬಿ.ವೈ.ವಿಜಯೇಂದ್ರ ಟ್ವೀಟ್ ಮೂಲಕ ತಿರುಗೇಟು

ಬೆಂಗಳೂರು,ಡಿ 28, ಡಿಕೆಶಿವಕುಮಾರ್ ಗೆ ಟ್ವೀಟ್ ಮೂಲಕ ಬಿ.ವೈ.ವಿಜಯೇಂದ್ರ ಮತ್ತೊಂದು ತಿರುಗೇಟು ಕೊಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಪಟ್ಟದಲ್ಲಿ ಕುಳಿತುಕೊಳ್ಳಲು ನಿಮ್ಮ ಹೈಕಮಾಂಡ್ ಓಲೈಸಬೇಕೇ?.ಕೆಂಪೇಗೌಡರ ನೆಲದ ಹೆಗ್ಗಳಿಕೆಯ ಇತಿಹಾಸದ ಮೇಲೆ ಅಟ್ಟಹಾಸ ಮೆರೆದು ಕನ್ನಡ ನಾಡಿನ ವೈಭವದ ಸಂಸ್ಕೃತಿಗೆ ಧಕ್ಕೆತರುವ ಪ್ರಮಾದ ಮಾಡುತ್ತಿದ್ದೀರಿ. ಇದಕ್ಕೆ ರಾಹುಲ್‌, ಸೋನಿಯ ಬೆನ್ನು ತಟ್ಟಬಹುದು.ಆದರೆ ಜನತೇ ನಿಮ್ಮನ್ನು ಕ್ಷಮಿಸುವರೇ? ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಓಲೈಕೆ ಅಸ್ತ್ರವಾಗಿ ಏಸುವನ್ನು ಬಳಸಿಕೊಳ್ಳುತ್ತಿರುವ ನಿಮ್ಮ ನಡೆ ಸರಿಯಿಲ್ಲ. ನಿಮ್ಮನಡೆಯಿಂದ ನಾಡಿನ ಸಂಸ್ಕೃತಿ,ಇತಿಹಾಸಕ್ಕೆ ಅಪಚಾರವಾಗಿದೆ. ಸ್ಥಳ ಮಹಿಮೆಯ ಹಿನ್ನಲೆಯಲ್ಲಿ ಪ್ರತಿಮೆ, ಸ್ಮಾರಕಗಳ ನಿರ್ಮಾಣವಾಗುತ್ತದೆ. ಏಷ್ಯಾದಲ್ಲೇ ಎತ್ತರದ ಏಸು ಪ್ರತಿಮೆ ನಿರ್ಮಾಣದ ಸ್ಥಳಮಹಿಮೆ ಹಿನ್ನೆಲೆ ಏನು?  ಎಂದು ಡಿಕೆಶಿಗೆ ವಿಜಯೇಂದ್ರ ಪ್ರಶ್ನಿಸಿದ್ದಾರೆ.