ಸ್ವಯಂ ಸೇವಕ ವಿದ್ಯಾರ್ಥಿಗಳಿಂದ ನಿಲ್ದಾಣ ಸ್ವಚ್ಛತಾ ಕಾರ್ಯಕ್ರಮ

ಸ್ವಯಂ ಸೇವಕ ವಿದ್ಯಾರ್ಥಿಗಳಿಂದ ನಿಲ್ದಾಣ ಸ್ವಚ್ಛತಾ ಕಾರ್ಯಕ್ರಮ Station cleaning drive by student volunteers

ಬೈಲಹೊಂಗಲ 06 : ಇಲ್ಲಿನ  ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂಸೇವಕ ವಿದ್ಯಾರ್ಥಿಗಳು ಬೈಲಹೊಂಗಲ ನಗರದ ಹಳೆಯ (ಭಾವಿ ಮನಿ) ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ, ಹಸಿ ಕಸ ಮತ್ತು ಒಣ ಕಸ  ಬೇರಿ​‍್ಡಸಿ ನಗರಸಭೆಯ ಕಸ ವಿಲೇವಾರಿ ವಾಹನದಲ್ಲಿ ಎಲ್ಲ ತ್ಯಾಜ್ಯವನ್ನು ವಿಲೇವಾರಿಗೊಳಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಮಹಾಂತೇಶ ಘೋಡಗೇರಿ ಉಸ್ತುವಾರಿ ನೋಡಿಕೊಂಡರು. ಪ್ರಾಚಾರ್ಯರಾದ ಎನ್‌. ಎಂ. ಕುದುರಿಮೋತಿ, ಹಿರಿಯ ಉಪನ್ಯಾಸಕರಾದ ಬಿ. ಸಿ. ಅಡಕಿ ಹಾಗೂ ಆರ್ ಬಿ ಹುನಗುಂದ ಉಪಸ್ಥಿತರಿದ್ದು, ಕಾಲೇಜು  ವಿದ್ಯಾರ್ಥಿ ಸ್ವಯಂಸೇವಕರ ಕಾರ್ಯವನ್ನು ಶ್ಲಾಘಿಸಿದರು.