ಬೆಂಗಳೂರು, ಡಿ 27: ರಕ್ಷಿತ್
ಶೆಟ್ಟಿ ಹಾಗೂ ಶಾನ್ವಿ ಶ್ರೀವಾಸ್ತವ್ ಮುಖ್ಯ ಭೂಮಿಕೆಯಲ್ಲಿರುವ “ಅವನೇ ಶ್ರೀಮನ್ನಾರಾಯಣ” ಚಿತ್ರ ರಾಜ್ಯಾದ್ಯಂತ
400 ಥಿಯೇಟರ್‍ಗಳಲ್ಲಿ ತೆರೆಕಂಡಿದೆ ಗುರುವಾರ ರಾತ್ರಿಯೇ
ಆಯೋಜಿಸಿದ್ದ ಪ್ರೀಮಿಯರ್ ಶೋ ನಲ್ಲಿ ಸ್ಯಾಂಡಲ್‍ವುಡ್‍ನ ಕ್ರೇಜಿಸ್ಟಾರ್ ರವಿಚಂದ್ರನ್, ಹ್ಯಾಟ್ರಿಕ್
ಹೀರೋ ಶಿವರಾಜ್‍ಕುಮಾರ್ ಸೇರಿದಂತೆ ಬಹುತೇಕ ತಾರೆಯರು ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಶುಕ್ರವಾರ ಅವನೇ ಶ್ರೀಮನ್ನಾರಾಯಣ ಸಿನಿಮಾ ವೀಕ್ಷಿಸಲು ಸ್ವತಃ
ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಆಗಮಿಸಿದ್ದರಿಂದ ಮೊದಲ ಶೋ ನೋಡಲು ಜನ ಸಾಗರವೇ ತುಂಬಿತ್ತು ಟಿಕೆಟ್ ಪಡೆದಿದ್ದರೂ, ಒಳಗೆ ಹೋಗದೆ, ರಕ್ಷಿತ್‍ನನ್ನು ಎದುರುಗೊಳಲ್ಲು
ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಏತನ್ಮಧ್ಯೆ
ಬೆಂಗಳೂರಿನ ಒರಾಯನ್ ಮಾಲ್‍ನಲ್ಲಿ ಕನ್ನಡ ಚಿತ್ರಗಳಿಗೆ ತಾರತಮ್ಯ ತೋರಲಾಗುತ್ತಿದೆ ಎಂಬ ಕೂಗು ಕೇಳಿಬಂದಿದೆ. ಅವನೇ ಶ್ರೀಮನ್ನಾರಾಯಣ ಚಿತ್ರ ಪ್ರದರ್ಶನದ ವೇಳೆ ಎಸಿ ಆನ್
ಮಾಡದೆ, ಸತಾಯಿಸಿದ್ದಾರೆ ಎಂದು ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲೆಡೆ ಹೌಸ್‍ಫುಲ್:- ರಾಜ್ಯದ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಸಿನಿಮಾದ ಟಿಕೆಟ್
ಸೋಲ್ಡ್ ಆಗಿದ್ದು, ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಮರಾವತಿ ಎಂಬ ಕಾಲ್ಪನಿಕ ಊರಿನ ನಿಧಿಯೊಂದರ
ಸುತ್ತ ಸುತ್ತುವ ಕಳ್ಳ-ಪೊಲೀಸ್ ಕಥೆಯಾಗಿರುವ ಅವನೇ
ಶ್ರೀಮನ್ನಾರಾಯಣ ಸಿನಿಮಾ ನೋಡುತ್ತಾ…ನೋಡುತ್ತಾ ನಿಮಗೆ ಥಟ್ಟನೆ ಹಾಲಿವುಡ್ ನ ಪೈರೇಟ್ಸ್ ಆಫ್ ದಿ ಕೆರಿಬಿಯನ್”
ಸಿನಿಮಾದ ನೆನಪಾಗುತ್ತದೆ. ಆದಾಗ್ಯೂ, ಸ್ಯಾಂಡಲ್ ವುಡ್ ನಲ್ಲಿ ಕೆಜಿಎಫ್ ಎಬ್ಬಿಸಿದ ಭರ್ಜರಿ ಹವಾದ
ನಂತರ ಮತ್ತೊಂದು ವಿಭಿನ್ನ ಕಥಾನಕದ ಸಿನಿಮಾ ಇದಾಗಿದೆ ಎಂದು ಹೇಳಬಹುದಾಗಿದೆ.