ಬಸವಕಲ್ಯಾಣದಲ್ಲಿ ಇರುವ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಅನ್ಯ ಶರಣರ ಮೂರ್ತಿ ಪ್ರತಿಷ್ಠಾಪನೆ ಖಂಡಿಸಿ ಹಡಪದ ಸಮಾಜದಿಂದ ರಾಜ್ಯದ್ಯಂತ ಪ್ರತಿಭಟನೆ

ಬಸವಕಲ್ಯಾಣದಲ್ಲಿ ಇರುವ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಅನ್ಯ ಶರಣರ ಮೂರ್ತಿ ಪ್ರತಿಷ್ಠಾಪನೆ ಖಂಡಿಸಿ ಹಡಪದ ಸಮಾಜದಿಂದ ರಾಜ್ಯದ್ಯಂತ ಪ್ರತಿಭಟನೆ State-wide protest by the Hadapada community condemning the installation of idols of other devotees

ಶಿರಹಟ್ಟಿ 07 : ಪಟ್ಟಣದಲ್ಲಿ ಹಡಪದ ಸಮಾಜದ ತಾಲೂಕು ಅಧ್ಯಕ್ಷ ಶರಣಪ್ಪ ಹಡಪದ ಅವರ ನೇತೃತ್ವದಲ್ಲಿ ಬೀದರ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಹತ್ತಿರ ಇರುವ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಅನ್ಯ ಶರಣರ ಮೂರ್ತಿ ಪ್ರತಿಷ್ಠಾಪಿಸಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ರಾಜ್ಯಾದ್ಯಂತ ಮಂಗಳವಾರ ನಡೆಸುತ್ತಿರುವ ಪ್ರತಿಭಟನೆಯ ಅಂಗವಾಗಿ ಶಿರಹಟ್ಟಿ ತಾಲೂಕು ಸಮಾಜದ ತಹಶೀಲ್ದಾರ್ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ನಂತರ ಮಾತನಾಡಿದ ತಾಲೂಕು ಅಧ್ಯಕ್ಷ ಶರಣಪ್ಪ ಹಡಪದ ಅವರು ಬೀದರ್ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಹತ್ತಿರ 12 ನೇ ಶತಮಾನದ ಅನೇಕ ಬಸವಾದಿ ಶರಣರ ಅರಿವಿನ ಗವಿಗಳು ಇರುವುದಾಗಿ ಇತಿಹಾಸ ಸಾರುತ್ತದೆ.

ಅದೇ ರೀತಿ ವಿಶ್ವಗುರು ಬಸವಣ್ಣನವರ ಅರವಿನ ಗುಹೆ ಪಕ್ಕದಲ್ಲಿಯೇ ಬಸವಣ್ಣನವರ ಆಪ್ತ ಕಾರ್ಯದರ್ಶಿ ಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯೂ ಅಲ್ಲಿ ಅಸ್ತಿತ್ವದಲ್ಲಿದೆ. . ಬಸವಣ್ಣನವರ ಜೀವನ ಪೂರ್ತಿ ಜೊತೆಗೆ ಇದ್ದವರು ಅಪ್ಪಣ್ಣನವರು ಮಾತ್ರ ಎಂಬುವದು ಕಟು ಸತ್ಯ.ಶ್ರೀ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಪಂಚ ಕಮೀಟಿಯವರು ಆಕ್ರಮ ಹಸ್ತಕ್ಷೇಪದಿಂದ ಬೇರೆ ಇನ್ನೂಬ್ಬ ಶರಣರ ಮೂರ್ತಿಯನ್ನು ಪ್ರತಿಷ್ಠಾನ ಮಾಡಿರುವದು ಖೇದದ ಸಂಗತಿ. ಇದರಿಂದ ಅಪ್ಪಣ್ಣನವರ ಮೂರ್ತಿ ಇಲ್ಲದಿರುವದು ಹಡಪದ ಸಮುದಾಯದ ಭಕ್ತಿಭಾವಣೆಗಳಿಗೆ ತೀವ್ರ ನೋವುಂಟುಮಾಡಿದೆ. ಇದರಿಂದ ಇತಿಹಾಸವನ್ನು ತಿರುಚಿದಂತಾಗಿರುವದು ಕಂಡು ಬರುತ್ತಲಿದೆ. ಅಲ್ಲಿ ಬೋರ್ಡ ಹಾಕಿದ್ದು ರಾತ್ರೋರಾತ್ರಿ ಕಿಡಗೇಡಿಗಳು ಕಿತ್ತು ಹಾಕಿದ್ದಾರೆ. ಕಾರಣ ಹಡಪದವರು ಕನಿಷ್ಠರು ಎಂಬುದು ಅವರ ಅನಿಸಿಕೆ ಆಗಿದೆ.

ಅವರ ವಂಶಸ್ಥರಾದ ನಾವುಗಳು ಶರಣ ಅಪ್ಪಣ್ಣನವರ ಇತಿಹಾಸ ಮತ್ತು ಗವಿಯನ್ನು ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲಾ ಇತಿಹಾಸ ಹೇಳುವುದನ್ನೆ ಅನುಷ್ಠಾನ ಮಾಡಲಿ ಭಾವನೆಗಳಿಗೆ ದಕ್ಕೆ ತರಬಾರದು ಎಂದರು .ಈ ವಿಷಯವಾಗಿ ಈಗಾಗಲೇ ಸಮಾಜದ ಮುಖಂಡರು, ಭಕ್ತರು ಹಲವಾರು ಬಾರಿ ಸಂಭಂದಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಮಾಡಿದೆ. ಹಾಗೂ ಅನೇಕ ಮಠಾಧೀಶರು ಹಾಗೂ ಭಾಲ್ಕಿ ಶ್ರೀಗಳು ಮತ್ತು ಅನೇಕ ನಾಯಕರು ಸಹ ಹಡಪದ ಅಪ್ಪಣ್ಣ ಗವಿ ಅನುಷ್ಠಾನದ ಪರವಾಗಿ ಹೋರಾಟ ಮಾಡಿ ವಿನಂತಿಸಿದರೂ ನ್ಯಾಯ ಸಿಕ್ಕಿಲ್ಲ. ಆದ್ದರಿಂದ ಅಕ್ರಮ ಕೃತ್ಯ ಮಾಡಿದ ಪಂಚ ಕಮೀಟಿಯವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡು ಯಥಾಸ್ಥಿತಿಗೆ ತರಬೇಕು. ಅಲ್ಲಿಯೇ ಹಡಪದ ಅಪ್ಪಣ್ಣನವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು.

ಈ ಸ್ಥಳವನು ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿರಿ. ಮತ್ತು ಪೂಜ್ಯ ಶ್ರೀ ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳನ್ನು ಪ್ರಾಧಿಕಾರದ ಸದಸ್ಯರನ್ನಾಗಿ ಮಾಡಿಕೊಂಡು ಸಮರ​‍್ಕವಾಗಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮಗಳನ್ನು ಕೈಕೊಳ್ಳುವಂತೆ. ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಶರಣಪ್ಪ ಹಡಪದ್ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಮಾಗಡಿ,ಮಂಜುನಾಥ್ ನಾವಿ,ಶ್ರೀಕಾಂತ್ ಹಡಪದ್,ವಿರೂಪಾಕ್ಷಪ್ಪ ನಾವಿ,ರೇಣುಕಾ ನಾವಿ,ಸರೋಜಾ ನಾವಿ,ಲಲಿತಾ ಡಂಬಳ,ಮಲ್ಲಿಕಾರ್ಜುನ್ ಹಡಪದ್,ನಾಗಪ್ಪ ಹಡಪದ್,ದಯಾನಂದ್ ಹಡಪದ್ ಸೇರಿದಂತೆ ಎಲ್ಲಾ ಸಮಾಜದ ಹಿರಿಯರು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.