ಕೋಲಾರ, ಫೆ 29 : ಜಮ್ಮು-ಕಾಶ್ಮೀರದಲ್ಲಿ ಹುತಾತ್ಮರಾಗಿದ್ದ ಕೋಲಾರ ಮೂಲದ ಯೋಧ ಪ್ರಶಾಂತ್ ಅವರ ಪಾರ್ಥಿವ ಶರೀರವನ್ನು ಶುಕ್ರವಾರ ತಡರಾತ್ರಿ ಅವರ ಹುಟ್ಟೂರಿಗೆ ತರಲಾಗಿದೆ.
26 ವರ್ಷದ ವೀರ ಯೋಧ ಪ್ರಶಾಂತ್ ಫೆ.26ರಂದು ಜಮ್ಮು ಕಾಶ್ಮೀರದ ರಜೋರಿ ಪ್ರದೇಶದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಗಾಯಗೊಂಡು ಹುತಾತ್ಮರಾಗಿದ್ದಾರೆ.
ಹುತಾತ್ಮ ಯೋಧ ಪ್ರಶಾಂತ್ ಅವರ ಅಂತ್ಯಕ್ರಿಯೆ ಯನ್ನು ಸಕಲ ಗೌರವದೊಂದಿಗೆ ಹುಟ್ಟುರಾದ ಜಿಲ್ಲೆಯ ಬಂಗಾರಪೇಟೆಯ ಕಣಿಂಬೆಲೆ ಗ್ರಾಮದಲ್ಲಿ ನೆರವೇರಿಸಲಾಗುವುದು.
ರಾತ್ರಿ 11ಗಂಟೆ ಸುಮಾರಿಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಶಾಂತ್ ಪಾರ್ಥಿವ ಶರೀರವನ್ನು ತಡರಾತ್ರಿ ಕೋಲಾರದ ಬಂಗಾರಪೇಟೆಗೆ ಕೊಂಡೊಯ್ಯಲಾಗಿದೆ.
ಬಂಗಾರಪೇಟೆ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಮುಂಜಾನೆ 5 ಗಂಟೆಯಿಂದಲೇ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು,ಬಳಿಕ ಬಂಗಾರಪೇಟೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.