ರಾಜ್ಯಮಟ್ಟದ “ನಾತಿಯ ಮುಷಾಯಿರ” ಧಾರ್ಮಿಕ ಕಾರ್ಯಕ್ರಮ ಯಶಸ್ವಿ
State level “Nathi Mushaira” religious program was successful
ಕೊಪ್ಪಳ 28: ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಅಂಜುಮನ್ ಶಾದಿ ಮಹಲ್ ಸಭಾಭವನದಲ್ಲಿ ಶನಿವಾರರಾತ್ರಿ ವೇಳೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ 6ನೇ ಬಾರಿಗೆ (ನಾತಿಯ ಮುಷಾಯಿರ ) ರಾಜ್ಯಮಟ್ಟದ ಧಾರ್ಮಿಕ ಕವಿಗೋಷ್ಠಿ ,ಕವನ ವಾಚನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಅಖಿಲ ಕರ್ನಾಟಕ ರಾಜ್ಯ ಮಟ್ಟದ ನಾತಿಯ ಮುಷಾಯಿರ ಧಾರ್ಮಿಕ ಕವಿಗೋಷ್ಠಿ, ಕವನ ವಾಚನ ಸಮಾರಂಭದ ಅಧ್ಯಕ್ಷತೆಯನ್ನು ಕನೇಕಲ್ ದರ್ಗಾದ ಪೀಠಾಧಿಪತಿ ಹಜರತ್ ಅಲಹಾಜ್ ಸೈಯದ್ ಶಾಹ್‌ಅಬ್ದುಲ್ ವಹಾಬ್ ಸಾಹೇಬ್ ಖಾದ್ರಿಯವರು ವಹಿಸಿ ಅಧ್ಯಕ್ಷೀಯ ಭಾಷಣ ಮತ್ತುಧಾರ್ಮಿಕ ಕವನ ವಾಚನ ಮಾಡಿ ಪ್ರವಾದಿ ಪೈಗಂಬರ್(ಸ,) ರವರಜೀವನಚರಿತ್ರೆ ಸೀರತ್ ಕುರಿತು ಧಾರ್ಮಿಕ ಕವನ ವಾಚನ ಮಾಡಿ ಸಮಾರಂಭದ ಕೊನೆಯಲ್ಲಿ ಆಶೀರ್ವಚನ ನೀಡಿದರು.
ಧರ್ಮದ ಗುರುಗಳಾದ ಸೈಯದ್ ಮುಯೋದ್ದೀನ್ ಶಾಹ್ ಖೈಸ ಸಾಹೇಬ್ ಶಿಗ್ಗಾವಿ ,ಪೀರ್‌ಜಾದಜಲಾಲ್ ಮೆಹಮೂದಿ ಸಾಹಬ್ ಸೇರಿದಂತೆ ಇಸ್ಲಾಂ ಧರ್ಮದ ಅನೇಕ ಗುರುಗಳು ಪಾಲ್ಗೊಂಡಿದ್ದರು, ಅಲ್ಲದೆ ಧಾರ್ಮಿಕ ಕವಿ ಗಳಾದ ರಾಯಚೂರಿನ ಸೈಯದ್ ಶಾ ತಯಿಬ ಖಾದ್ರಿ ಅಶ್‌ರಫಿ ನಿಜಾಮಿ ಸಾಹೇಬ್, ಬೆಳಗಾವಿಯ ಸೈಯದ್ ಅಹಮದ್ ಭಾಷಾ ಸಾಬ ಸಾಗರ್, ಬಳ್ಳಾರಿ ಜಿಲ್ಲೆಯ ಹಸನ್ ವಾರ್ಸಿ ಅಧೋನಿಯ ಸಲೀಂ ಅಸ್ಲಾಂ ನಿಜಾಮಿ, ರಾಣಿ ಬೆನ್ನೂರಿನ ಸೈಯದ್‌ಏಜಾಜ್‌ಅಹಮದ್ ಬಳ್ಳಾರಿಯ ನಾಸಿರ್ ಎಂ, ನದೀಮ್ ನಿಜಾಮಿ, ಮೊಹಸನ್ ಮತ್ತು ಮಹೆಬೂಬ್‌ರಜವಿ ಖಾದ್ರಿ ಸಾಹೇಬ್ ಮತ್ತು ಫಾರೋಕ ಶಮ್ಸ್ ಸೈಯದ್‌ಜಹೀರ್ ಮೊಹಮ್ಮದ್ ಫನಾ ಪಾಲ್ಗೊಂಡುತಮ್ಮಧಾರ್ಮಿಕ ಕವನ ವಾಚನ ಮಾಡಿಜನಮನ ರಂಜಿಸಿದರು ಹಾಗೂ ಗಂಗಾವತಿಯ ಧರ್ಮಗುರು ಮೌಲಾನಾ ಮೊಹಮ್ಮದ್ ಮುಸ್ತಫಾಕಮಾಲ್ ಪಾಷಾ ಖಾದ್ರಿ ತಸ್ಕೀನಿ ಸಾಹೇಬ್‌ರವರು ಸಹ ವಿಶೇಷ ಧಾರ್ಮಿಕ ಕವನ ವಾಚನ ಮಾಡಿಜನರ ಮನಸ್ಸನ್ನು ರಂಜಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಕವಿ ಮತ್ತು ಸಾಹಿತಿ ಸೈಯದ್‌ಜಹೀರ್ ಮೊಹಮ್ಮದ್ ಫನಾ ನೆರವೇರಿಸಿದರು, ಧಾರ್ಮಿಕ ಕವಿಗೋಷ್ಠಿ ಸಮಾರಂಭದ ನೇತೃತ್ವ ವಹಿಸಿದ ಹೊಸಪೇಟೆ ನಗರದಅಲ್ಪಸಂಖ್ಯಾತ ಸಮಾಜದ ಹಿರಿಯ ಮುಖಂಡ ಸಮಾಜ ಸೇವಕರಾದಅಲ್ಹಜ್ ಆಸಿಫ್ ಅಲಿ ನಿಯಾಜಿರವರು ವಹಿಸಿಕೊಂಡು ಪ್ರತಿ ವರ್ಷದಂತೆ ಈ ವರ್ಷವೂ ಸಹ ಆರನೇ ಬಾರಿಗೆ ಯಶಸ್ವಿಯಾಗಿ ಮತ್ತು ಅರ್ಥಪೂರ್ಣವಾಗಿ ಧಾರ್ಮಿಕ ಕವಿಗೋಷ್ಠಿ ಸಮಾರಂಭ ಆಚರಣೆ ಮಾಡಿರುವುದಕ್ಕೆ ಧರ್ಮ ಗುರುಗಳು ರವರ ನೇತೃತ್ವದಲ್ಲಿ ಅವರ ಸ್ನೇಹಿತರ ಬಳಗ ಮತು ್ತಅಭಿಮಾನಿ ಬಳಗದವರು ಅವರನ್ನು ಸನ್ಮಾನಿಸಿ ಅಭಿನಂದಿಸಿ ಶುಭಕೋರಿದ ಬಳಿಕ ಗುರುಗಳು ಅವರನ್ನು ಆಶೀರ್ವದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 