ರಾಜ್ಯಮಟ್ಟದ ಯುವಜನ ಮೇಳ ಕಾರ್ಯಕ್ರಮ
State level youth fair program
ಲೋಕದರ್ಶನ ವರದಿ
ರಾಜ್ಯಮಟ್ಟದ ಯುವಜನ ಮೇಳ ಕಾರ್ಯಕ್ರಮ
ಮುದ್ದೇಬಿಹಾಳ 06: ರಂದು ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಸ್ವಾಮಿ ವಿವೇಕಾನಂದರ ಅಂತರಾಷ್ಟ್ರೀಯ. ರಾಷ್ಟ್ರೀಯ ಮತ್ತು ರಾಜ್ಯ ಸದ್ಭಾವನ ಪ್ರಶಸ್ತಿ ಪ್ರಧಾನ ಮತ್ತು ರಾಜ್ಯಮಟ್ಟದ ಯುವಜನ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಡಾ. ಎಸ್ ಬಾಲಾಜಿ ಹೇಳಿದರು. ಅವರು ಪಟ್ಟಣದ ಪ್ರವಾಸಿಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂತರಾಷ್ಟ್ರೀಯ 5 ಪ್ರಶಸ್ತಿ.ರಾಷ್ಟ್ರೀಯ ಮಟ್ಟದ ಹತ್ತು ಪ್ರಶಸ್ತಿ.ರಾಜ್ಯಮಟ್ಟದ 31 ಮತ್ತು ಎರಡು ಸಂಘ ಸಂಸ್ಥೆಗಳಿಗೆ ನೀಡುವ ರಾಜ್ಯ ಮಟ್ಟದ ಪ್ರಶಸ್ತಿ ಹಾಗೂ ರಾಜ್ಯಮಟ್ಟದ ಯುವಜನ ಮೇಳ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ. ಹೀಗಾಗಿ ಮುದ್ದೇಬಿಹಾಳ ಕಾರ್ಯಕ್ರಮ ಎಂದರೆ ರಾಜ್ಯವೆ ಮುದ್ದೇಬಿಹಾಳದತ್ತು ಮುಖ ಮಾಡಿನೋಡುವಂತಾಗಬೇಕು ಅಂತಹ ಅದ್ದೂರಿ ಹಾಗೂವೈಭವಪೂರಿತ ಕಾರ್ಯಕ್ರಮ ನಡೆಸಲು ತಿರ್ಮಾನಿಸಿದ್ದು ಕಾರಣ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಸಂಘದ ಮುಖಂಡರು ಉತ್ಸಾಹಿಗಳಾಗಿ ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಬೇಕು ಎಂದರು.
ಈ ವೇಳೆ ಜಿಲ್ಲಾಧ್ಯಕ್ಷ ಪುಂಡಲಿಕ್ ಮುರಾಳ ಅವರು ಮಾತನಾಡಿ ಕಳೇದ 15 ವರ್ಷಗಳಿಂದ ಮುದ್ದೇಬಿಹಾಳ ಪಟ್ಟಣದಲ್ಲಿ ಇಡಿ ರಾಜ್ಯವೇ ಮೆಚ್ಚುವಂತೆ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು. ಈ ಸಂದರ್ಭದಲ್ಲಿ ಸಂಘದ ಸದಸ್ಯರ ಪರಿಶ್ರಮ ಮತ್ತು ಸಹಾಯ ಸಹಕಾರ, ಉಪಯುಕ್ತ ಮಾಹಿತಿ ನೀಡಿದ್ದರಿಂದ ಸಾಧ್ಯವಾಗಿದೆ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಲಾಗುವುದು ಸಧ್ಯ ಸರ್ಕಾರ ಯುವಕ ಸಂಘಗಳ ಕಡಗಣನೆ ಮಾಡುತ್ತಿರುವುದು ಮಾತ್ರವಲ್ಲದೇ ಸರ್ಕಾರಗಳು ಯುವಜನ ಮೇಳ ಹಾಗೂ ಯುವ ಪ್ರಶಸ್ತಿಗಳನ್ನು ನಿಲ್ಲಿಸಿದ್ದು ಮತ್ತೆ ಪುನಃ ಪ್ರಾರಂಭಿಸಬೇಕು ಮತ್ತು ಸಂಘಗಳಿಗೆ ಅನುದಾನ ವನ್ನು ನೀಡಬೇಕು ಅಂದಾಗ ಯುವಕ ಸಂಘಗಳು ಬೆಳೆಯಲು ಸಾಧ್ಯವಾಗುತ್ತದೆ.ಅಕ್ಟೋಬರ್ ತಿಂಗಳಲ್ಲಿ ಕೊಪ್ಪಳದಲ್ಲಿ ಅಂಬೇಡ್ಕರ್ ಪ್ರಶಸ್ತಿ, ಸ್ಥಳಿಯ ಕ್ಷೇತ್ರದಲ್ಲಿ ವಿವಿಧ ಸಾಧನೆ ಸಾಹಸ ಮಾಡಿದವರಿಗೆ ಹಾಗೂ ವೀರಯೋಧರಿಗೆ ವಿಶೇಷ ಗೌರವಿಸಲು ಪ್ರಶಸ್ತಿ ನೀಡಲು ತೀರ್ಮಾನಿಸಿದ್ದು. ಜತೆಗೆ ಇಲ್ಲಿಯವರಿಗೆ ಪ್ರಶಸ್ತಿ ಪಡೆದವರ ಸ್ಮರಣ ಸಂಚಿಕೆ ಹೊರ ತರಲು ಕೂಡ ಚಿಂತನೆ ನಡೆಸಲಾಗಿದೆ.ಈ ಸಂದರ್ಭದಲ್ಲಿ ಕೊಪ್ಪಳದ ಗವಿ ಸಿದ್ದೇಶ್ವರ ಶ್ರೀ. ಹಂಪಿ ಮತ್ತು ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳು,ಸಚಿವ ಸಂತೋಷ ಲಾಡ್ ಮತ್ತು ಸ್ಥಳೀಯ ಶಾಸಕ ಸಿ.ಎಸ್. ನಾಡಗೌಡ, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಎಂದು
ಸಂಘದ ಗೌರವ ಅಧ್ಯಕ್ಷ ಅಶೋಕ ನಾಡಗೌಡ,ವಿಶ್ರಾಂತ ಪ್ರೊಫೆಸರ್ ಎಸ್. ಎಸ್. ಹೂಗಾರ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮತ್ತು ಸಾಹಿತಿ ಎಂ. ಎಂ. ಬೆಳಗಲ್ಲ. ಬಾಗಲಕೋಟೆ ಜಿಲ್ಲಾಧ್ಯಕ್ಷದಾನಯ್ಯ ಸ್ವಾಮಿ ಹಿರೇಮಠ,ನಿಕಟ ಪೂರ್ವ ಅಧ್ಯಕ್ಷ ಮಾಂತೇಶ ಬೂದಿಹಾಳ ಮಠ ತಾಲೂಕ ಅಧ್ಯಕ್ಷ ವೀರೇಶ ಗುರುಮಠ,ಕರ್ನಾಟಕ ಪತ್ರಕರ್ತ ಸಂಘದ ಬಾಗಲಕೋಟ ಜಿಲ್ಲಾಧ್ಯಕ್ಷ ಡಿ. ಬಿ. ವಿಜಯಶಂಕರ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಸಂಗಮೇಶ ಹಾರಿವಾಳ, ತಾಲೂಕ ಪ್ರಧಾನ ಕಾರ್ಯದರ್ಶಿ ರಾಜು ತುಂಬಗಿ, ಹಿರಿಯರಾದ ಸಂಗಣ್ಣ ಕಂಚ್ಯಾಣಿ, ತಾಲೂಕು ಉಪಾಧ್ಯಕ್ಷರಾದ ಅಪ್ಪುಗೌಡ ಪಾಟೀಲ,ಹಿರೇ ಮುರಾಳ ವಲಯ ಘಟಕದ ಅಧ್ಯಕ್ಷರಾದ ಮೈಬು ಮುಲ್ಲಾ. ಉಪಾಧ್ಯಕ್ಷಯ ಸಿದ್ದಯ್ಯ ಮಠ, ಅಮಿನಗಡದ ವಲಯ ಘಟಕದ ಅಧ್ಯಕ್ಷ ಕಿರಣ್.ಭೀಮಸಿ ರಾಠೋಡ, ಸದಸ್ಯರಾದ ಮುತ್ತಯ್ಯ ಹಿರೇಮಠ. ರಫೀಕ ಶಿರೋಳ, ಬಸವರಾಜ್ ಮೇಟಿ. ವೀರೇಶ್ ತಿಮ್ಮಣ್ಣ ಗೌಂಡಿ.ಮೌನೇಶ್ ಮಾದರ ಕಾರಕೂರ. ನೂತನವಾಗಿ ಆಯ್ಕೆಯಾದ ಜಾನಪದ ಯುವ ಬ್ರಿಗೇಡ್ ತಾಲೂಕ ಸಂಚಾಲಕ ಸುಚಿತ ಚಳ್ಳಗೇರಿ, ನಗರ ಘಟಕದ ಸಂಚಾಲ ಕೃಷ್ಣಾ ಕುಂಬಾರ, ಸಹ ಸಂಚಾಲಕ ಆಕಾಶ ನಾಲತವಾಡ ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 